ದೆಹಲಿ: ಜಾಗಿಂಗ್​​ಗೆ ಹೋಗಿದ್ದ ವ್ಯಕ್ತಿ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ, ಸ್ಥಿತಿ ಗಂಭೀರ

ಬೆಳಗ್ಗೆ ಜಾಗಿಂಗ್​​ಗೆ ಹೋದ ವ್ಯಕ್ತಿ ಮೇಲೆ ಹಲವು ಬಾರಿ ಗುಂಡಿನ ದಾಳಿ(Firing) ನಡೆಸಿರುವ ಘಟನೆ ದೆಹಲಿಯ ಮಾಳವೀಯ ನಗರದಲ್ಲಿ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಹಲವು ಬಾರಿ ಗುಂಡು ಹಾರಿಸಿದ್ದು 55 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಖ್‌ಪತ್ ಸಿಂಗ್ ಕಟಾರಿಯಾ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಜಾಗಿಂಗ್ ಮಾಡುತ್ತಿದ್ದಾಗ, ಬೈಕ್​​ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳುಅವರ ಮೇಲೆ ಗುಂಡು ಹಾರಿಸಿದ್ದಾರೆ.

ದೆಹಲಿ: ಜಾಗಿಂಗ್​​ಗೆ ಹೋಗಿದ್ದ ವ್ಯಕ್ತಿ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ, ಸ್ಥಿತಿ ಗಂಭೀರ
ಗುಂಡಿನ ದಾಳಿ
Image Credit source: Google

Updated on: Sep 27, 2025 | 7:50 AM

ನವದೆಹಲಿ, ಸೆಪ್ಟೆಂಬರ್ 27: ಬೆಳಗ್ಗೆ ಜಾಗಿಂಗ್​​ಗೆ ಹೋದ ವ್ಯಕ್ತಿ ಮೇಲೆ ಹಲವು ಬಾರಿ ಗುಂಡಿನ ದಾಳಿ(Firing) ನಡೆಸಿರುವ ಘಟನೆ ದೆಹಲಿಯ ಮಾಳವೀಯ ನಗರದಲ್ಲಿ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಹಲವು ಬಾರಿ ಗುಂಡು ಹಾರಿಸಿದ್ದು 55 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಖ್‌ಪತ್ ಸಿಂಗ್ ಕಟಾರಿಯಾ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಜಾಗಿಂಗ್ ಮಾಡುತ್ತಿದ್ದಾಗ, ಬೈಕ್​​ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳುಅವರ ಮೇಲೆ ಗುಂಡು ಹಾರಿಸಿದ್ದಾರೆ.

ಪೊಲೀಸರ ಪ್ರಕಾರ, ದಾಳಿಕೋರರು ಸ್ಥಳದಿಂದ ಪರಾರಿಯಾಗುವ ಮೊದಲು ಕನಿಷ್ಠ ಮೂರು ಸುತ್ತು ಗುಂಡು ಹಾರಿಸಿದ್ದರು. ಮಾಳವೀಯ ನಗರ ಬಳಿಯ ಬೇಗಂಪುರ ನಿವಾಸಿ ಕಟಾರಿಯಾ ಅವರಿಗೆ ಗುಂಡೇಟಿನ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಸಮಯದಲ್ಲಿ ಪ್ರಜ್ಞೆ ಇತ್ತು. ಅವರು ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಘಟನೆಯ ಬಗ್ಗೆ ಪಿಸಿಆರ್ ಕರೆ ಬಂದಿದ್ದು, ತಕ್ಷಣ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಕ್ರಮಗಳು ನಡೆಯುತ್ತಿವೆ. ಅಪರಾಧದ ಸ್ಥಳವನ್ನು ವಿಧಿವಿಜ್ಞಾನ ತಜ್ಞರು ಪರಿಶೀಲಿಸಿದ್ದಾರೆ.

ಮತ್ತಷ್ಟು ಓದಿ: Video: ನ್ಯೂಯಾರ್ಕ್​​ನ ಟೈಮ್ಸ್​ ಸ್ಕ್ವೇರ್​ನಲ್ಲಿ ಗುಂಡಿನ ದಾಳಿ, ಮೂವರಿಗೆ ಗಂಭೀರ ಗಾಯ

ಶಂಕಿತರನ್ನು ಪತ್ತೆಹಚ್ಚಲು ಹತ್ತಿರದ ಅಂಗಡಿಗಳು ಮತ್ತು ಬೀದಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಪ್ರದೇಶದಲ್ಲಿ ಹೆಚ್ಚುವರಿ ಕಣ್ಗಾವಲು ನಿಯೋಜಿಸಲಾಗಿದೆ.

ಕಟಾರಿಯಾ ಈ ಪ್ರದೇಶದಲ್ಲಿ ಪರಿಚಿತರಾಗಿದ್ದು, ಈ ಹಿಂದೆ ಹಿರಿಯ ಕಾಂಗ್ರೆಸ್ ನಾಯಕರಾದ ಅಜಯ್ ಮಾಕನ್, ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದರು.ದಾಳಿಕೋರರನ್ನು ಗುರುತಿಸಿ ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ