ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಎರಡೂ ಕಾಲುಗಳನ್ನು ಕಳೆದುಕೊಂಡ ಯುವಕ

|

Updated on: Aug 24, 2023 | 8:25 AM

ರೈಲು ನಿಲ್ದಾಣದಲ್ಲಿ ಸಂಪೂರ್ಣವಾಗಿ ನಿಲ್ಲುವವರೆಗೂ ಪ್ರಯಾಣಿಕರು ರೈಲನ್ನು ಇಳಿಯುವ ಸಾಹಸಕ್ಕೆ ಕೈ ಹಾಕಬಾರದು. ಹಾಗೆಯೇ ರೈಲು ಹೊರಟಿರುವಾಗ ತಡವಾಗಿ ಬಂದ ಪ್ರಯಾಣಿಕರು ತರಾತುರಿಯಲ್ಲಿ ರೈಲು ಹತ್ತಲು ಹೋಗಿ ಪೆಟ್ಟು ಮಾಡಿಕೊಂಡಿರುವ ಅನೇಕ ನಿದರ್ಶನಗಳಿವೆ. ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಎರಡೂ ಕಾಲುಗಳನ್ನು ಕಳೆದುಕೊಂಡ ಯುವಕ
ರೈಲು
Image Credit source: India Today
Follow us on

ರೈಲು ನಿಲ್ದಾಣದಲ್ಲಿ ಸಂಪೂರ್ಣವಾಗಿ ನಿಲ್ಲುವವರೆಗೂ ಪ್ರಯಾಣಿಕರು ರೈಲನ್ನು ಇಳಿಯುವ ಸಾಹಸಕ್ಕೆ ಕೈ ಹಾಕಬಾರದು. ಹಾಗೆಯೇ ರೈಲು ಹೊರಟಿರುವಾಗ ತಡವಾಗಿ ಬಂದ ಪ್ರಯಾಣಿಕರು ತರಾತುರಿಯಲ್ಲಿ ರೈಲು ಹತ್ತಲು ಹೋಗಿ ಪೆಟ್ಟು ಮಾಡಿಕೊಂಡಿರುವ ಅನೇಕ ನಿದರ್ಶನಗಳಿವೆ.
ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಯುವಕನೊಬ್ಬ ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸುತ್ತಿದ್ದಾಗ ರೈಲ್ವೇ ಹಳಿ ಮೇಲೆ ಬಿದ್ದಿದ್ದಾನೆ. ಮಂಗಳವಾರ ಬೆಳಗ್ಗೆ ಕಿನ್ವಾಟ್ ರೈಲು ನಿಲ್ದಾಣದಿಂದ ನಾಂದೇಡ್-ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಹತ್ತಲು ವ್ಯಕ್ತಿ ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.

ರೈಲು ನಿಂತಿದ್ದಾಗ ಹತ್ತದೇ ರೈಲು ಹೊರಟ ಮೇಲೆ ಮಹೇಶ್ ಕನ್ನೇಕರ್ ರೈಲು ಹತ್ತುವುದಕ್ಕೆ ಮುಂದಾಗಿದ್ದರು. ರೈಲು ಹತ್ತಲು ಹೋದಾಗ ಯುವಕ ಪ್ಲಾಟ್​ಫಾರಂ ಹಾಗೂ ರೈಲಿನ ನಡುವೆ ಸಿಲುಕಿಬಿಟ್ಟರು, ಜಾರಿ ಬಿದ್ದು, ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.

ಮತ್ತಷ್ಟು ಓದಿ: ಮುಂಬೈ ರೈಲು ನಿಲ್ದಾಣದಲ್ಲಿ ವ್ಯಕ್ತಿಯನ್ನು ಥಳಿಸಿ, ಎದುರಿನಿಂದ ಬರುತ್ತಿದ್ದ ರೈಲಿನ ಕೆಳಗೆ ತಳ್ಳಿದ್ರು

ಮಹೇಶ್​ ಅವರನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಕಿನ್ವಾಟ್‌ನಲ್ಲಿರುವ ಗೋಕುಂದ ಜಿಲ್ಲಾ ಉಪ-ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರ ಗಾಯಗಳ ತೀವ್ರತೆಯಿಂದಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆದಿಲಾಬಾದ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ