ವಾಷಿಂಗ್​ ಮೆಷಿನ್​ನಲ್ಲಿತ್ತು ನಾಗರಹಾವು, ಸ್ವಲ್ಪದರಲ್ಲೇ ಕಡಿತದಿಂದ ತಪ್ಪಿಸಿಕೊಂಡ ವ್ಯಕ್ತಿ

|

Updated on: Jul 20, 2024 | 9:18 AM

ವಾಷಿಂಗ್​ ಮೆಷಿನ್​ನಲ್ಲಿ ಹಾವು ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ವಾಷಿಂಗ್ ಮೆಷಿನ್ ಸರಿಯಿಲ್ಲವೆಂದು ಟೆಕ್ನಿಷಿಯನ್​ನನ್ನು ಮನೆಗೆ ಕರೆಸಿದಾಗ ಅವರು ಮೆಷಿನ್​ನಲ್ಲಿ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ವಾಷಿಂಗ್​ ಮೆಷಿನ್​ನಲ್ಲಿತ್ತು ನಾಗರಹಾವು, ಸ್ವಲ್ಪದರಲ್ಲೇ ಕಡಿತದಿಂದ ತಪ್ಪಿಸಿಕೊಂಡ ವ್ಯಕ್ತಿ
ಹಾವು
Image Credit source: India Today
Follow us on

ವಾಷಿಂಗ್​ ಮೆಷಿನ್​ನಲ್ಲಿ ನಾಗರಹಾವು ಪತ್ತೆಯಾಗಿರುವ ಘಟನೆ ಕೇರಳ ಕಣ್ಣೂರಿನಲ್ಲಿ ನಡೆದಿದೆ. ವಾಷಿಂಗ್ ಮೆಷಿನ್ ಹಾಳಾಗಿತ್ತು ಹಾಗಾಗಿ ರಿಪೇರಿಗೆಂದು ಕರೆಸಲಾಗಿತ್ತು. ವಾಷಿಂಗ್​ ಮೆಷಿನ್ ಸರಿ ಮಾಡಲೆಂದು ಡೆಕ್ನೀಷಿಯನ್ ಒಬ್ಬರು ಬಾಗಿಲು ತೆರೆದಾಗ ಅದರೊಳಗೆ ಹಾವಿತ್ತು, ಮೊದಲು ಅವರು ಬಟ್ಟೆ ಎಂದುಕೊಂಡು ಅದನ್ನು ಇನ್ನೇನು ಕೈಯಲ್ಲಿ ತೆಗೆದು ಹಪರಹಾಕಬೇಕು ಎಂದುಕೊಳ್ಳುವಷ್ಟರಲ್ಲಿ ಅದು ಹಾವು ಎಂಬುದು ತಿಳಿದುಬಂದಿತ್ತು.

ಕಣ್ಣೂರಿನ ತಳಿಪರಂಬ ಪ್ರದೇಶದ ಪಿ.ವಿ.ಬಾಬು ಎಂಬುವವರ ಮನೆಯಲ್ಲಿ ಯಂತ್ರವನ್ನು ದುರಸ್ತಿ ಮಾಡಲು ಜನಾರ್ಧನ್​ ಕಡಂಬೇರಿ ಎಂಬುವವರು ಬಂದಿದ್ದರು. ತಮ್ಮ ಕೆಲಸ ಮುಗಿಸಿ ಕೊನೆಗೆ ಮೆಷಿನ್ ಕೆಲಸ ಮಾಡುತ್ತಿದೆಯೋ ಇಲ್ಲವೋ ನೋಡೋಣ ಎಂದು ಹೇಳಿದರು.

ಸ್ವಿಚ್ ಆನ್ ಮಾಡಿದಾಗ ಮೆಷಿನ್ ಒಳಗೆ ಏನೋ ಸುತ್ತುವುದು ಕಾಣಿಸಿತು ಅದನ್ನು ಬಟ್ಟೆ ಎಂದುಕೊಂಡ ಜನಾರ್ಧನ್ ಅದರೊಳಗೆ ಕೈ ಹಾಕಿ ಬಟ್ಟೆಯನ್ನು ಹೊರಹಾಕಬೇಕೆಂದುಕೊಂಡರು ಅದು ಹಾವು ಎಂದು ತಕ್ಷಣ ತಿಳಿಯಿರು ಒಂದು ಸೆಕೆಂಡ್ ಹೆಚ್ಚುಕಡಿಮೆಯಾಗಿದ್ದರೂ ಅವರಿಗೆ ಹಾವು ಕಚ್ಚುತ್ತಿತ್ತು.

ಮತ್ತಷ್ಟು ಓದಿ: ಮನೆಯ ಮಂಚದ ಕೆಳಗೆ ಹರಿದಾಡುತ್ತಿದ್ವು 16ಕ್ಕೂ ಹೆಚ್ಚು ನಾಗರ ಹಾವುಗಳು, 32 ಮೊಟ್ಟೆಗಳು ಪತ್ತೆ

ಕಳೆದ ಎರಡು ವಾರಗಳಿಂದ ಮೆಷಿನ್ ಕೆಲಸ ಮಾಡುತ್ತಿಲ್ಲ ಎಂದು ಅದನ್ನು ಮುಚ್ಚಿ ಇಡಲಾಗಿತ್ತು ಎಂದು ಬಾಬು ತಿಳಿಸಿದರು. ಹಾವು ಹೇಗೆ ಪ್ರವೇಶಿಸಿತು ಎಂಬುದು ನಮಗೆ ತಿಳಿದಿಲ್ಲ, ನಾವು ಇನ್ನೂ ಸುಳಿವಿಲ್ಲ ಎಂದು ಅವರು ಹೇಳಿದರು.

ಎಸ್‌ಒಎಸ್ ತಂಡವು ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಯಿತು. ಅರಣ್ಯ ಮತ್ತು MARC (ಮಲಬಾರ್ ಅವೇರ್ನೆಸ್ ಮತ್ತು ರೆಸ್ಕ್ಯೂ ಸೆಂಟರ್ ಫಾರ್ ವೈಲ್ಡ್ ಲೈಫ್) ರಕ್ಷಕ ಅನಿಲ್ ತ್ರಿಚಂಬರಂ ಸ್ಥಳಕ್ಕೆ ಆಗಮಿಸಿ ನಾಗರ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:16 am, Sat, 20 July 24