ಹೈದರಾಬಾದ್: ಯುವತಿಯೊಬ್ಬಳು ಆಕೆಯ ಪ್ರಿಯಕರನಿಂದ ಬರ್ಬರವಾಗಿ ಹಲ್ಲೆಗೊಳಗಾಗಿದ್ದಾಳೆ. ಯುವತಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದೇ ಈ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ. ಆದರೆ ಆಕೆಯ ಮೇಲೆ ಯುವಕ ಮಾಡಿದ ಹಲ್ಲೆಯ ಭೀಕರತೆ ನಿಜಕ್ಕೂ ಶಾಕ್ ತರುವಂತಿದೆ. ಆ ವ್ಯಕ್ತಿ ಯುವತಿಗೆ ಬರೋಬ್ಬರಿ 18 ಬಾರಿ ಇರಿದಿದ್ದಾನೆ.
ಈ ಘಟನೆ ನಡೆದದ್ದು ಗ್ರೇಟರ್ ಹೈದರಾಬಾದ್ ವ್ಯಾಪ್ತಿಯ ಹಸ್ತಿನಾಪುರಂನಲ್ಲಿ. ಎಲ್ಬಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಈ ನಗರದಲ್ಲಿ ಬಾಡಿಗೆ ರೂಂನಲ್ಲಿ ಆಕೆ ವಾಸವಾಗಿದ್ದಳು. ಯುವತಿಯ ಹೆಸರು ಶಿರೀಷಾ. ಆರೋಪಿ ಬಸವರಾಜ್. ಇವರಿಬ್ಬರೂ ವಿಕಾರಾಬಾದ್ ಜಿಲ್ಲೆಯ ದೌಲತಾಬಾದ್ ನಿವಾಸಿಗಳಾಗಿದ್ದು, ಕಳೆದ ಕೆಲವು ವರ್ಷಗಳಿಂದಲೂ ರಿಲೇಶನ್ಶಿಪ್ನಲ್ಲಿ ಇದ್ದರು. ಆದರೆ ಎರಡು ತಿಂಗಳಿಂದ ಶಿರೀಷಾ ಬೇರೊಬ್ಬನ ಸಂಘ ಮಾಡಿದ್ದೇ ಬಸವರಾಜ್ ಕೋಪಕ್ಕೆ ಕಾರಣ. ಶಿರೀಷಾ ಇತ್ತೀಚೆಗೆ ಶ್ರೀಧರ್ ಎಂಬುವನೊಂದಿಗೆ ತುಂಬ ಕ್ಲೋಸ್ ಆಗಿದ್ದಳು. ಹೀಗಾಗಿ ಬಸವರಾಜ್ನನ್ನು ಮದುವೆಯಾಗುವುದಿಲ್ಲ ಎನ್ನುತ್ತಿದ್ದಳು. ಇದೇ ಕಾರಣಕ್ಕೆ ಕೋಪಗೊಂಡ ಬಸವರಾಜ್ ಶಿರೀಷಾಳಿಗೆ 18 ಬಾರಿ ಚಾಕುವಿನಿಂದ ಇರಿದಿದ್ದಾನೆ. ಆಕೆಯೀಗ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಇದನ್ನೂ ಓದಿ: ಸಕ್ರೆಬೈಲು ಆನೆ ಮರಿಗೆ ಪುನೀತ್ ಹೆಸರು; ವನ್ಯಜೀವಿಗಳ ಬಗ್ಗೆ ಅಪ್ಪುಗೆ ಇತ್ತು ವಿಶೇಷ ಕಾಳಜಿ
Published On - 9:29 am, Thu, 11 November 21