
ತಿರುವನಂತಪುರಂ: ಮಲಗುವ ವೇಳೆ ತಲೆದಿಂಬಿನ ಕೆಳಗೆ ಇಟ್ಟಿದ್ದ ಮೊಬೈಲ್ ಇದ್ದಕ್ಕಿದಂತೆ ಹೊತ್ತಿ ಉರಿದ ಪರಿಣಾಮ ವ್ಯಕ್ತಿಯೊಬ್ಬನಿಗೆ ಗಾಯಗಳಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ಮೊಬೈಲ್ ಹೊತ್ತುರಿದ ಪರಿಣಾಮ 53 ವರ್ಷದ ವ್ಯಕ್ತಿಯೊಬ್ಬನಿಗೆ ಸುಟ್ಟುಗಾಯಗಳಾಗಿದೆ.
ಅಂದ ಹಾಗೆ, ಗಾಯಾಳು ತನ್ನ ಮೊಬೈಲ್ನ ಚಾರ್ಜಿಂಗ್ ಸಹ ಹಾಕಿರಲಿಲ್ಲ ಎಂದು ಹೇಳಿದ್ದಾರೆ. ಆದರೂ, ಈ ಮಟ್ಟಿಗೆ ಅವಘಡ ಸಂಭವಿಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.