ಕೆಲವೊಮ್ಮೆ ಮನುಷ್ಯರು ಎಷ್ಟು ಕ್ರೂರತೆಯನ್ನು ಪ್ರದರ್ಶಿಸುತ್ತಾರೆಂದರೆ ಇವರಿಗಿಂತ ಕಾಡು ಪ್ರಾಣಿಗಳೇ ಎಷ್ಟೋ ವಾಸಿ ಎನಿಸಿಬಿಡುತ್ತದೆ.
ಪ್ರಾಣಿಗಳಿಗೂ ಕುಟುಂಬವಿರುತ್ತೆ, ಅವುಗಳಿಗೂ ಜೀವ ಇದೆ, ಬದುಕುವ ಹಕ್ಕಿದೆ ಎಂಬುದನ್ನು ಮರೆದು ರಕ್ಕಸರಂತೆ ನಡೆದುಕೊಂಡುಬಿಡುತ್ತಾರೆ.
ಅಂಥಹದಲ್ಲೇ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಒಂದು ಅಂಗಡಿ ಮುಂದೆ ವ್ಯಕ್ತಿಯೊಬ್ಬ ಸುಮ್ಮನೆ ಕುಳಿತುಕೊಂಡಿರುತ್ತಾನೆ ಅವನ ಎದುರು ಎರಡು ನಾಯಿಮರಿಗಳಿರುತ್ತವೆ, ಏಕಾಏಕಿ ಕೋಪಗೊಂದು ಆ ನಾಯಿ ಮರಿಗಳನ್ನು ಎತ್ತಿ ನೆಲಕ್ಕೆ ಎಸೆಯುತ್ತಾನೆ, ಜತೆಗೆ ಕಾಲಿನಲ್ಲಿ ಮರಿಗಳನ್ನು ಹಿಸುಕಿ ವ್ಯಾಘ್ರರೂಪ ತಾಳುತ್ತಾನೆ. ಆದರೆ ಆ ಪುಟ್ಟ ಮರಿಗಳು ನಿಮಗೇನು ಮಾಡಿದ್ದವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಪ್ರಶ್ನೆ ಮಾಡುತ್ತಿದ್ದಾರೆ.
20 ಸೆಕೆಂಡುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆಯ ವೇಳೆ ಅಂಗಡಿಯೊಂದರಲ್ಲಿದ್ದ ಮತ್ತೊಬ್ಬ ವ್ಯಕ್ತಿ ನಾಯಿ ಮರಿ ಕಿರುಚಾಟ ಕೇಳಿ ಹೊರಗೆ ಓಡಿ ಬರುತ್ತಿರುವುದು ಕಂಡು ಬಂದಿದೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಟ್ಯಾಗ್ ಮಾಡುವ ಮೂಲಕ ಮರು ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ಓದಿ: Bihar News: ಬಿಹಾರದಲ್ಲಿ 30 ಬೀದಿ ನಾಯಿಗಳಿಗೆ ಶೂಟ್ ಮಾಡಿ ಹತ್ಯೆ; ಕಾರಣ ಇಲ್ಲಿದೆ
ಇದು ಭಯಾನಕ ಮತ್ತು ಗೊಂದಲದ ಸಂಗತಿಯಾಗಿದೆ. ಈ ಅನಾಗರಿಕತೆಗೆ ಮನುಷ್ಯನಿಗೆ ಶಿಕ್ಷೆಯಾಗಬೇಕು ಎಂಬುದರಲ್ಲಿ ಸಂದೇಹವಿಲ್ಲ. ಶಿವರಾಜ್ ಸಿಂಗ್ ಚೌಹಾಣ್ ಅವರೇ, ದಯವಿಟ್ಟು ನೋಡಿ ಎಂದು ಬರೆದಿದ್ದಾರೆ.
ಬಳಿಕ ವಿಡಿಯೋವನ್ನು ಗಮನಿಸಿದ ಮುಖ್ಯಮಂತ್ರಿ ನ್ಯಾಯ ದೊರಕಿಸಲು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನ್ಯಾಯ ಒದಗಿಸಲು ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಅನಾಗರಿಕ ಕೃತ್ಯಗಳನ್ನು ನಾವು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ ಮತ್ತು ಜವಾಬ್ದಾರಿಯುತ ವ್ಯಕ್ತಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಚೌಹಾಣ್ ಎಕ್ಸ್ನಲ್ಲಿ ಬರೆದಿದ್ದಾರೆ.
ಸ್ಥಳೀಯ ಪೊಲೀಸರು ಕೂಡ ಘಟನೆಯನ್ನು ಗಮನಿಸಿ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು. ಇದೀಗ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Sun, 10 December 23