ಫೋನ್ ಕದ್ದ ಕಳ್ಳನನ್ನು ಚಲಿಸುವ ರೈಲಿನಿಂದ ಹೊರಗೆ ನೂಕಿದ ಪ್ರಯಾಣಿಕರು; ಕಂಬಕ್ಕೆ ತಲೆ ಬಡಿದು ಸಾವು

ಅದೇ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಶಹಜಹಾನ್‌ಪುರ ರೈಲು ನಿಲ್ದಾಣದ ಬಳಿ ತನ್ನ ಫೋನ್ ಕಾಣೆಯಾಗಿದೆ ಎಂದು ದೂರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ ,ಕಳ್ಳನ ಕೈಯಿಂದ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಫೋನ್ ಕದ್ದ ಕಳ್ಳನನ್ನು ಚಲಿಸುವ ರೈಲಿನಿಂದ ಹೊರಗೆ ನೂಕಿದ ಪ್ರಯಾಣಿಕರು; ಕಂಬಕ್ಕೆ ತಲೆ ಬಡಿದು ಸಾವು
ಕಳ್ಳನಿಗೆ ಥಳಿಸುತ್ತಿರುವ ಪ್ರಯಾಣಿಕರು
Edited By:

Updated on: Dec 19, 2022 | 8:26 PM

ಶುಕ್ರವಾರ ರಾತ್ರಿ ದೆಹಲಿಗೆ (Delhi) ತೆರಳುತ್ತಿದ್ದ ಅಯೋಧ್ಯಾ ಕ್ಯಾಂಟ್ ಓಲ್ಡ್ ದೆಹಲಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರೊಬ್ಬರಿಂದ ಮೊಬೈಲ್ ಫೋನ್ (Mobile phone) ಕದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪ್ರಯಾಣಿಕರು ಚಲಿಸುವ ರೈಲಿನಿಂದ ಎಸೆದಿದ್ದಾರೆ. ಶಹಜಹಾನ್‌ಪುರದ ತಿಲ್ಹಾರ್ ರೈಲು ನಿಲ್ದಾಣದ ಬಳಿ ಓವರ್‌ಹೆಡ್ ಲೈನ್ ಕಂಬಕ್ಕೆ ತಲೆ ಬಡಿದು ಆತ ಮೃತಪಟ್ಟಿದ್ದಾನೆ. ಶನಿವಾರ ಪೊಲೀಸರು 66 ಸೆಕೆಂಡುಗಳ ವಿಡಿಯೊವನ್ನು ಪತ್ತೆ ಹಚ್ಚಿದ್ದು ಅದರಲ್ಲಿ ಒಂದೆರಡು ಜನರು ಕಳ್ಳನ ಸುತ್ತಲೂ ಕುಳಿತು ಆತನಿಗೆ ಥಳಿಸುತ್ತಿರುವುದು ಕಾಣಿಸುತ್ತದೆ. ಪ್ರಯಾಣಿಕರೊಬ್ಬರು ಯುವಕನನ್ನು ನಿರ್ದಯವಾಗಿ ಥಳಿಸುತ್ತಿರುವಾಗ ಕೆಲವರು ನಗುತ್ತಿರುವುದು ವಿಡಿಯೊದಲ್ಲಿದೆ. ಆದಾಗ್ಯೂ, ಕಳ್ಳನನ್ನು ಬೈದು ನೂಕುತ್ತಿರುವ ಪ್ರಯಾಣಿಕನ ಹೆಸರು ನರೇಂದ್ರ ದುಬೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅದೇ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಶಹಜಹಾನ್‌ಪುರ ರೈಲು ನಿಲ್ದಾಣದ ಬಳಿ ತನ್ನ ಫೋನ್ ಕಾಣೆಯಾಗಿದೆ ಎಂದು ದೂರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ,ಕಳ್ಳನ ಕೈಯಿಂದ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ನಂತರ ಆತನಿಗೆ ಥಳಿಸಲಾಯಿತು. ಕಳ್ಳ ಲಕ್ನೋದಿಂದ ರೈಲು ಹತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿ ಜೈಲಿಗೆ, ಸಂತ್ರಸ್ತನ ಗುರುತು ಪತ್ತೆಯಾಗಿಲ್ಲ

ಪೊಲೀಸರು  ಶವವನ್ನು ಟ್ರ್ಯಾಕ್‌ನಿಂದ ಹೊರತೆಗೆದಿದ್ದಾರೆ. ಆತನ ತಲೆಗೆ ಆಳವಾದ ಗಾಯವಿದ್ದು, ಒಂದು ಕಾಲು ತುಂಡಾಗಿತ್ತು. ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಅವರನ್ನು ರೈಲಿನಿಂದ ಎಸೆದ ದುಬೆಯನ್ನು ಜಿಆರ್‌ಪಿ ಕಾನ್‌ಸ್ಟೆಬಲ್‌ಗಳಾದ ಸತ್ಯವೀರ್ ಸಿಂಗ್, ಲೋಕೇಂದ್ರ ಸಿಂಗ್ ಮತ್ತು ನೌಶಾದ್ ಅಲಿ ಅವರು ಬರೇಲಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬರೇಲಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.ಆದರೆ ಘಟನೆಯು ಶಹಜಹಾನ್‌ಪುರ ಜಿಲ್ಲೆಯ ತಿಲ್ಹಾರ್ ಪ್ರದೇಶದಲ್ಲಿ ವರದಿಯಾಗಿದೆ. ಆದ್ದರಿಂದ, ನಾವು ಪ್ರಕರಣವನ್ನು ತಿಲ್ಹಾರ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದೇವೆ ಎಂದು ಎಸ್‌ಎಚ್‌ಒ (ಜಿಆರ್‌ಪಿ-ಬರೇಲಿ) ವಿನೋದ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಮೆಸ್ಸಿ ಹುಟ್ಟಿದ್ದು ಅಸ್ಸಾಂನಲ್ಲಿ ಎಂದ ಕಾಂಗ್ರೆಸ್ ಸಂಸದ, ನೆಟ್ಟಿಗರು ಕಾಲೆಳೆದ ನಂತರ ಟ್ವೀಟ್ ಡಿಲೀಟ್

ತಿಲ್ಹಾರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಜ್‌ಕುಮಾರ್ ಶರ್ಮಾ ಮಾತನಾಡಿ, ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಸಂತ್ರಸ್ತನನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Mon, 19 December 22