ಮೆಸ್ಸಿ ಹುಟ್ಟಿದ್ದು ಅಸ್ಸಾಂನಲ್ಲಿ ಎಂದ ಕಾಂಗ್ರೆಸ್ ಸಂಸದ, ನೆಟ್ಟಿಗರು ಕಾಲೆಳೆದ ನಂತರ ಟ್ವೀಟ್ ಡಿಲೀಟ್
Lionel Messi ಕತಾರ್ ನಲ್ಲಿ ನಡೆದ ವಿಶ್ವಕಪ್ ಪುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆಲುವಿಗೆ ಅಭಿನಂದಿಸಿದ ಅಬ್ದುಲ್, ಹೃದಯದಾಳದಿಂದ ಅಭಿನಂದನೆಗಳು. ನಿಮ್ಮ ಅಸ್ಸಾಂ ಸಂಬಂಧ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದು ಮೆಸ್ಸಿಯ ಫೋಟೊ ಟ್ವೀಟ್ ಮಾಡಿದ್ದರು
ಅರ್ಜೆಂಟಿನಾದ ಕಾಲ್ಚೆಂಡು ವೀರ ಲಿಯೊನೆಲ್ ಮೆಸ್ಸಿ (Lionel Messi) ಅಸ್ಸಾಂನಲ್ಲಿ ಹುಟ್ಟಿದ್ದು ಎಂದು ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ (Abdul Khaleque) ಟ್ವೀಟ್ ಮಾಡಿ ನಗೆಪಾಟಲಿಗೀಡಾಗಿದ್ದಾರೆ. ಅಸ್ಸಾಂನ (Assam) ಬರ್ಪೇಟಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ ಅಬ್ದುಲ್ ಖಲೀಕ್. ಕತಾರ್ ನಲ್ಲಿ ನಡೆದ ವಿಶ್ವಕಪ್ ಪುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆಲುವಿಗೆ ಅಭಿನಂದಿಸಿದ ಅಬ್ದುಲ್, ಹೃದಯದಾಳದಿಂದ ಅಭಿನಂದನೆಗಳು. ನಿಮ್ಮ ಅಸ್ಸಾಂ ಸಂಬಂಧ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದು ಮೆಸ್ಸಿಯ ಫೋಟೊ ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಆದಿತ್ಯ ಶರ್ಮಾ ಎಂಬ ಟ್ವೀಟಿಗರು ಅಸ್ಸಾಂಗೂ ಇವರಿಗೂ ಸಂಬಂಧ? ಎಂದು ಪ್ರಶ್ನಿಸಿದಾಗ, ಹೌದು ಅವರು ಅಸ್ಸಾಂನಲ್ಲಿ ಹುಟ್ಟಿದ್ದು ಎಂದು ಸಂಸದರು ಉತ್ತರಿಸಿದ್ದಾರೆ. ಕೆಲವು ಹೊತ್ತಿನ ನಂತರ ತಮ್ಮ ಎಡವಟ್ಟು ಅರ್ಥ ಮಾಡಿಕೊಂಡ ಸಂಸದರು ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಸಂಸದರ ಕಾಲೆಳೆದ ನೆಟ್ಟಿಗರೊಬ್ಬರು “ಹೌದು ಸರ್, ಅವರು ನನ್ನ ಸಹಪಾಠಿ” ಎಂದು ಬರೆದಿದ್ದಾರೆ. ವಿಶ್ವಕಪ್ ನಂತರ, ಮೆಸ್ಸಿ ಮತ್ತು ಅವರ ಪತ್ನಿ ಅಸ್ಸಾಂಗೆ ಭೇಟಿ ನೀಡಿದರು, ನೀವು ಎಲ್ಲಿಂದ ಬಂದಿದ್ದೀರಿ ಎಂಬುದನ್ನು ಎಂದಿಗೂ ಮರೆಯಬೇಡಿ ಎಂದು ಮತ್ತೊಬ್ಬರು ಮೆಸ್ಸಿಯ ಎಡಿಟ್ ಮಾಡಿದ ಫೋಟೋ ಟ್ವೀಟ್ ಮಾಡಿದ್ದಾರೆ. “ನಾನು ಅಸ್ಸಾಂನಲ್ಲಿ ಜನಿಸಿದ್ದು ಎಂದು ಈಗಷ್ಚೇ ತಿಳಿಯಿತು” ಎಂದು ಮತ್ತೊಬ್ಬ ಬಳಕೆದಾರರು ಮೆಸ್ಸಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಮತ್ತೊಂದೆಡೆ, ಅನೇಕ ಬಳಕೆದಾರರು ಮೆಸ್ಸಿ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಹೋಲಿಕೆ ಮಾಡಿದ್ದಾರೆ. ಅರ್ಜೆಂಟೀನಾದ ಆಟಗಾರನಿಗೆ ‘ಮಹಾರಾಷ್ಟ್ರ ಸಂಪರ್ಕ’ ಇದೆ.ಯಾಕೆಂದರೆ ತೆಂಡೂಲ್ಕರ್ ಮತ್ತು ಮೆಸ್ಸಿ ಇಬ್ಬರೂ ತಮ್ಮ ಜೆರ್ಸಿಯಲ್ಲಿ 10 ನೇ ಸಂಖ್ಯೆಯನ್ನು ಧರಿಸುತ್ತಾರೆ.
ಇದನ್ನೂ ಓದಿ: ವಿಶ್ವಕಪ್ ಬಹುಮಾನದ ಮೊತ್ತ 3600 ಕೋಟಿ! ಮೆಸ್ಸಿ ತಂಡಕ್ಕೆ ಸಿಕ್ಕಿದೆಷ್ಟು? ಫ್ರಾನ್ಸ್ ಗೆದ್ದಿದ್ದೆಷ್ಟು? ಇಲ್ಲಿದೆ ವಿವರ
ಭಾನುವಾರ ಲುಸೇಲ್ ಸ್ಟೇಡಿಯಂನಲ್ಲಿ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-2 ಗೋಲುಗಳಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಮಣಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ