AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾಗೆ ಹಿಂತಿರುಗುವುದರಲ್ಲಿ ಅರ್ಥವಿಲ್ಲ, ನಾನು ಭಾರತಕ್ಕೆ ಆದ್ಯತೆ ನೀಡುವೆ: ದಲೈಲಾಮಾ

Dalai Lama ಯುರೋಪ್, ಆಫ್ರಿಕಾ ಮತ್ತು ಏಷ್ಯಾದಲ್ಲಿ ಸಾಮಾನ್ಯವಾಗಿ ವಿಷಯಗಳು ಸುಧಾರಿಸುತ್ತಿವೆ.ಚೀನಾ ಕೂಡ ಹೊಂದಿಕೊಳ್ಳುತ್ತಿದೆ. ಆದರೆ ಚೀನಾಕ್ಕೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಭಾರತಕ್ಕೆ ಆದ್ಯತೆ ನೀಡುತ್ತೇನೆ. ಇದು ಅತ್ಯುತ್ತಮ ಸ್ಥಳ ಎಂದ ದಲೈಲಾಮಾ.

ಚೀನಾಗೆ ಹಿಂತಿರುಗುವುದರಲ್ಲಿ ಅರ್ಥವಿಲ್ಲ, ನಾನು ಭಾರತಕ್ಕೆ ಆದ್ಯತೆ ನೀಡುವೆ: ದಲೈಲಾಮಾ
ದಲೈ ಲಾಮಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Dec 19, 2022 | 2:40 PM

Share

ಹಿಮಾಚಲ ಪ್ರದೇಶದ (Himachal Pradesh) ಕಾಂಗ್ರಾ ತನ್ನ “ಶಾಶ್ವತ ನಿವಾಸ” ಎಂದು ಒತ್ತಿ ಹೇಳಿದ ದಲೈಲಾಮಾ (Dalai Lama) ಚೀನಾಕ್ಕೆ ಮರಳುವುದರ ಬಗ್ಗೆ ಚಿಂತಿಸುವುದಿಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಟಿಬೆಟ್‌ನ 14 ನೇ ದಲೈಲಾಮಾ ಅವರು 1959 ರಿಂದ ಹಿಮಾಚಲದ ಧರ್ಮಶಾಲಾದಲ್ಲಿ (Dharamshala) ವಾಸಿಸುತ್ತಿದ್ದಾರೆ. ಚೀನೀ ಪಡೆಗಳು ಲಾಸಾದಲ್ಲಿ ಟಿಬೆಟಿಯನ್ ಪ್ರಜೆಗಳನ್ನು ಕ್ರೂರವಾಗಿ ನಿಗ್ರಹಿಸಿದ ನಂತರ ಅಂದರೆ ತಪ್ಪಿಸಿಕೊಂಡು ಬಲವಂತವಾಗಿ ಗಡಿಪಾರಾಗಬೇಕಾಗಿ ಬಂದಾಗ ದಲೈಲಾಮಾ ಧರ್ಮಶಾಲಾಗೆ ಬಂದಿದ್ದಾರೆ ಎಂದು ಅವರ ಅಧಿಕೃತ ವೆಬ್​​ಸೈಟ್ ಹೇಳಿದೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ವರದಿಗಳ ನಂತರ ಚೀನಾಕ್ಕೆ ಸಂದೇಶವನ್ನು ನೀಡಲು ಅವರನ್ನು ಕೇಳಿದಾಗ ಅವರು ಯುರೋಪ್, ಆಫ್ರಿಕಾ ಮತ್ತು ಏಷ್ಯಾದಲ್ಲಿ ಸಾಮಾನ್ಯವಾಗಿ ವಿಷಯಗಳು ಸುಧಾರಿಸುತ್ತಿವೆ.ಚೀನಾ ಕೂಡ ಹೊಂದಿಕೊಳ್ಳುತ್ತಿದೆ. ಆದರೆ ಚೀನಾಕ್ಕೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಭಾರತಕ್ಕೆ ಆದ್ಯತೆ ನೀಡುತ್ತೇನೆ. ಇದು ಅತ್ಯುತ್ತಮ ಸ್ಥಳ ಎಂದು ಹೇಳಿರುವುದಾಗಿ ಎಎನ್ಐ ಟ್ವೀಟ್ ಮಾಡಿದೆ. “ಕಾಂಗ್ರಾ-ಪಂಡಿತ್ ನೆಹರು ಅವರ ಆಯ್ಕೆಯ ಜಾಗ. ಈ ಸ್ಥಳವು ನನ್ನ ಶಾಶ್ವತ ನಿವಾಸವಾಗಿದೆ ಎಂದಿದ್ದಾರೆ ದಲೈಲಾಮಾ. ಲಡಾಖ್‌ನ ಸೂಕ್ಷ್ಮ ಗಲ್ವಾನ್ ಪ್ರದೇಶದಲ್ಲಿ ಸೈನಿಕರ ನಡುವಿನ ಘರ್ಷಣೆಯ ನಂತರ ನಡೆದ ಇದೇ ಮೊದಲ ಬಾರಿ ಡಿಸೆಂಬರ್ 9 ರಂದು ತವಾಂಗ್‌ನಲ್ಲಿ ಚೀನಾ- ಭಾರತ ಸಂಘರ್ಷ ನಡೆದಿದೆ.

ದಲೈಲಾಮಾ ಅವರು “ಟಿಬೆಟ್‌ನ ಹಿಂದಿನ ಹದಿಮೂರು ದಲೈಲಾಮಾಗಳ ಪ್ರಸ್ತುತ ಅವತಾರ ಎಂದು ಹೇಳಲಾಗುತ್ತದೆ (ಮೊದಲನೆಯವರು 1391 CE ನಲ್ಲಿ ಜನಿಸಿದರು), ಅವರು ಅವಲೋಕಿತೇಶ್ವರ ಅಥವಾ ಚೆನ್ರೆಜಿಗ್, ಬಿಳಿ ಕಮಲ ಹೊಂದಿದ ಬೋಧಿಸತ್ವದ ಅಭಿವ್ಯಕ್ತಿಗಳು ಎಂದು ಪರಿಗಣಿಸಲ್ಪಟ್ಟಿದ್ದಾರೆ ಎಂದು ಅಧಿಕೃತ ವೆಬ್‌ಸೈಟ್ ಹೇಳುತ್ತದೆ. ಎರಡನೆ ವಯಸ್ಸಿನಲ್ಲಿ ಲಾಮೊ ಧೋಂಡುಪ್ ಎಂಬ ಹೆಸರಿದ್ದ ಇವರು ಹಿಂದಿನ 13 ನೇ ದಲೈಲಾಮಾ, ಥುಬ್ಟೆನ್ ಗ್ಯಾಟ್ಸೊ ಅವರ ಪುನರ್ಜನ್ಮ ಎಂದು ಗುರುತಿಸಲ್ಪಟ್ಟಿದ್ದರು.

ಇದನ್ನೂ ಓದಿ: ಹಸುವಿನ ಹಾಲು ಕರೆಯಲು ಎಲ್ಲರಿಗೂ ಸಾಧ್ಯ, ನಾವು ಎತ್ತಿನ ಹಾಲು ಕರೆದೆವು: ಗುಜರಾತ್ ಚುನಾವಣೆ ಬಗ್ಗೆ ಕೇಜ್ರಿವಾಲ್

“ಗಡಿಪಾರು ವಿಷಯದಲ್ಲಿ ಹಿಸ್ ಹೋಲಿನೆಸ್ ನೇತೃತ್ವದ ಕೇಂದ್ರ ಟಿಬೆಟಿಯನ್ ಆಡಳಿತವು ಟಿಬೆಟ್ ನ ಪ್ರಶ್ನೆಯನ್ನು ಪರಿಗಣಿಸಲು ವಿಶ್ವಸಂಸ್ಥೆಗೆ ಮನವಿ ಮಾಡಿತು. ಸಾಮಾನ್ಯ ಸಭೆಯು 1959, 1961 ಮತ್ತು 1965 ರಲ್ಲಿ ಟಿಬೆಟ್ ನಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಿತು ಎಂದು ವೆಬ್​​ಸೈಟ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ