Monkeypox: ಕೇರಳದಲ್ಲಿ ಮಂಕಿಪಾಕ್ಸ್ ಲಕ್ಷಣಗಳಿದ್ದ ವ್ಯಕ್ತಿ ಸಾವು; ಉನ್ನತ ಮಟ್ಟದ ತನಿಖೆಗೆ ಆದೇಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 01, 2022 | 10:57 AM

ಚಿಕಿತ್ಸೆ ಪಡೆಯಲು ಈ ಯುವಕ ತಡವಾಗಿ ಬಂದಿದ್ದೇಕೆ ಎನ್ನುವ ಬಗ್ಗೆಯೂ ತನಿಖೆ ಆಗಬೇಕಿದೆ. ಪುನ್ನಯೂರ್​ನಲ್ಲಿ ಈ ಸಂಬಂಧ ವಿಶೇಷ ಆರೋಗ್ಯ ಇಲಾಖೆಯು ಅಧಿಕಾರಿಗಳ ಸಭೆ ಕರೆದಿದೆ.

Monkeypox: ಕೇರಳದಲ್ಲಿ ಮಂಕಿಪಾಕ್ಸ್ ಲಕ್ಷಣಗಳಿದ್ದ ವ್ಯಕ್ತಿ ಸಾವು; ಉನ್ನತ ಮಟ್ಟದ ತನಿಖೆಗೆ ಆದೇಶ
ಕೇರಳದಲ್ಲಿ ವಿದೇಶಗಳಿಂದ ಬರುವವರನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ (ಸಂಗ್ರಹ ಚಿತ್ರ)
Follow us on

ಪತ್ತನಂತಿಟ್ಟ: ಮಂಕಿಪಾಕ್ಸ್​ ಲಕ್ಷಣಗಳಿಂದ (Monkeypox) ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George)keral ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ತ್ರಿಶೂರ್​ ಜಿಲ್ಲೆ ಚಾವಕ್ಕಾಡ್ ಕುರಂಜಿಯೂರ್​ ಮೂಲದ ಈ ಯುವಕನು ವಿದೇಶದಲ್ಲಿ ಮಾಡಿಸಿಕೊಂಡಿದ್ದ ಮಂಕಿಪಾಕ್ಸ್​ ತಪಾಸಣೆಯ ವರದಿ ಪಾಸಿಟಿವ್ ಬಂದಿತ್ತು. ‘ಹೊರದೇಶದಲ್ಲಿ ಮಾಡಿದ್ದ ಪರೀಕ್ಷೆಯು ಪಾಸಿಟಿವ್ ಬಂದಿತ್ತು. ತ್ರಿಶೂರ್​ನಲ್ಲಿ ಅವನು ಚಿಕಿತ್ಸೆಗೆ ಬಂದಿದ್ದ. ವಿಪರೀತ ಸುಸ್ತು ಮತ್ತು ಮಿದುಳಿನ ಉರಿಯೂತದಿಂದ ಬಳಲುತ್ತಿದ್ದ. ಮಂಕಿಪಾಕ್ಸ್​ ಸಾವು ತರುವ ರೋಗವಲ್ಲ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು’ ಎಂದು ಸಚಿವೆ ಜಾರ್ಜ್ ಹೇಳಿದರು.

ಚಿಕಿತ್ಸೆ ಪಡೆಯಲು ಈ ಯುವಕ ತಡವಾಗಿ ಬಂದಿದ್ದೇಕೆ ಎನ್ನುವ ಬಗ್ಗೆಯೂ ತನಿಖೆ ಆಗಬೇಕಿದೆ. ಪುನ್ನಯೂರ್​ನಲ್ಲಿ ಈ ಸಂಬಂಧ ವಿಶೇಷ ಆರೋಗ್ಯ ಇಲಾಖೆಯು ಅಧಿಕಾರಿಗಳ ಸಭೆ ಕರೆದಿದೆ. ಈ ಯುವಕ ಯಾರೆಲ್ಲರ ಸಂಪರ್ಕ ಬಂದಿರಬಹುದು ಎನ್ನುವ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ಎಲ್ಲ ಸಂಪರ್ಕಿತರೂ ಕಡ್ಡಾಯವಾಗಿ ಐಸೊಲೇಶನ್​ಗೆ ಹೋಗಬೇಕು ಎಂದು ಸೂಚಿಸಲಾಗಿದೆ.

ಭಾರತದಲ್ಲಿ ಈವರೆಗೆ ಐದು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಮೂರು ಕೇರಳದಿಂದಲೇ ವರದಿಯಾಗಿವೆ. ಒಂದು ದೆಹಲಿಯಲ್ಲಿ ಮತ್ತೊಂದು ಆಂಧ್ರ ಪ್ರದೇಶದಲ್ಲಿ ಗುಂಟೂರಿನಲ್ಲಿ ವರದಿಯಾಗಿದೆ. ವಿಶ್ವದ ವಿವಿಧೆಡೆ ಮಂಕಿಪಾಕ್ಸ್​ ಸೋಂಕಿತರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.

‘ಅನಗತ್ಯ ಭೀತಿ ಭೇಡ. ದೇಶ ಮತ್ತುಉ ಸಮಾಜವು ಎಚ್ಚರದಿಂದ ಇದ್ದರೆ ಸಾಕು. ಮಂಕಿಪಾಕ್ಸ್​ ಲಕ್ಷಣಗಳು ಕಂಡುಬಂದ ತಕ್ಷಣ ಸೋಂಕಿತರು ಆರೋಗ್ಯ ಇಲಾಖೆಗೆ ಮಾಹಿತಿ ಕೊಡಬೇಕು’ ಎಂದು ಎಎನ್​ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ ವಿ.ಕೆ.ಪೌಲ್ ತಿಳಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ (World Health Organization – WHO) 78 ದೇಶಗಳ 18,000 ಮಂದಿಯಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ.

‘ದೇಶಗಳು, ಸಮುದಾಯಗಳು ಮತ್ತು ವ್ಯಕ್ತಿಗಳು ಎಚ್ಚರಿಕೆ ವಹಿಸಿದರೆ ಮಂಕಿಪಾಕ್ಸ್​ ಸೋಂಕು ನಿಯಂತ್ರಿಸಬಹುದು. ಸೋಂಕಿನ ಆತಂಕ ಎದುರಿಸುತ್ತಿರುವ ಗುಂಪುಗಳನ್ನು ಗುರುತಿಸಿ, ರೋಗ ಹರಡುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ ಟೆಡ್ರೊಸ್ ಹೇಳಿದ್ದರು.

ಪ್ರಾಣಿಗಳಿಂದ ಹರಡುವ ಮಂಕಿಪಾಕ್ಸ್​ ರೋಗಕ್ಕೆ ವೈರಾಣು ಮುಖ್ಯ ಕಾರಣ. ಸ್ಮಾಲ್​ಪಾಕ್ಸ್​ ಕಾಯಿಲೆ ಉಂಟುಮಾಡುವ ವೈರಸ್ ಕುಟುಂಬಕ್ಕೆ ಸೇರಿದ್ದ ವೈರಸ್​ನಿಂದಲೇ ಮಂಕಿಪಾಕ್ಸ್ ಸಹ ಹರಡುತ್ತದೆ. ಮಂಕಿಪಾಕ್ಸ್ ಕಾಯಿಲೆಯು ಪಶ್ಚಿಮ ಮತ್ತು ಕೇಂದ್ರ ಆಫ್ರಿಕಾ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಹೊಸ ದೇಶಗಳಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿದೆ.

Published On - 10:57 am, Mon, 1 August 22