Mangaluru Blast: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 3 ರಾಜ್ಯಗಳಲ್ಲಿ NIA ದಾಳಿ: 40 ಸ್ಥಳಗಳಲ್ಲಿ ಶೋಧ

| Updated By: ವಿವೇಕ ಬಿರಾದಾರ

Updated on: Feb 15, 2023 | 10:17 AM

ರಾಷ್ಟ್ರೀಯ ತನಿಖಾ ದಳ (ಎನ್​ಐಎ) ದಕ್ಷಿಣ ಭಾರತ ಮೂರು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಕಳೆದ ವರ್ಷದ ಕೊಯಮುತ್ತೂರು ಮತ್ತು ಮಂಗಳೂರು ಬ್ಲಾಸ್ಟ್​ ಪ್ರಕರಣಕ್ಕೆ ಸಂಬಧಿಸಿದಂತೆ ತಮಿಳನಾಡು, ಕೇರಳ ಮತ್ತು ಕರ್ನಾಟಕದ 40 ಸ್ಥಳಗಳಲ್ಲಿ ಏಕಕಾಲಕ್ಕೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Mangaluru Blast: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 3 ರಾಜ್ಯಗಳಲ್ಲಿ NIA ದಾಳಿ: 40 ಸ್ಥಳಗಳಲ್ಲಿ ಶೋಧ
ಎನ್​ಐಎ
Follow us on

ನವದೆಹಲಿ: ರಾಷ್ಟ್ರೀಯ ತನಿಖಾ ದಳ (NIA) ದಕ್ಷಿಣ ಭಾರತ ಮೂರು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಕಳೆದ ವರ್ಷದ ಕೊಯಮುತ್ತೂರು ಮತ್ತು ಮಂಗಳೂರು ಬ್ಲಾಸ್ಟ್​ ಪ್ರಕರಣಕ್ಕೆ ಸಂಬಧಿಸಿದಂತೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದ 40 ಪ್ರದೇಶಗಳ ಮೇಲೆ ಏಕಕಾಲಕ್ಕೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೇರಳದ ಪಲ್ಲಕಡನಲ್ಲಿ ದಾಳಿ ನಡೆಸಿದೆ. ದಾಳಿಯಲ್ಲಿ ಎಲೆಕ್ಟ್ರಾನಿಕ್​ ಡಿವೈಸ್​​ಗಳು​ ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಕೊಯಮುತ್ತೂರನ ಕೊಟ್ಟಯ್​ ಈಶ್ವರನ್​ ದೇವಸ್ಥಾನ ಎದುರುಗಡೆ ಸ್ಪೋಟಗೊಂಡ ಕಾರ್​ ಬ್ಲಾಸ್ಟ್​​ನಲ್ಲಿ ಜಮೀಶ್​ ಮುಬೀನ್ ಎಂಬುವನು ಸಾವನ್ನಪ್ಪಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್​ಐಎ ಕಳೆದ ವರ್ಷ ಅಕ್ಟೋಬರ್​ 23 ರಂದು ತಮಿಳನಾಡಿನ 43 ಸ್ಥಳಗಳಲ್ಲಿ ದಾಳಿ ಮಾಡಿತ್ತು.

ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ ಜೊತೆ ಜಮೀಶ್​ ಮುಬೀನ್ ನಂಟು ಹೊಂದಿದ್ದು. ಈತ ಆತ್ಮಾಹುತಿ ಬಾಂಬ್​ಗೆ ಧಾರ್ಮಿಕ ಕೇಂದ್ರಗಳು ಮತ್ತು ಸ್ಮಾರಕಗಳನ್ನು ಟಾರ್ಗೆಟ್​ ಮಾಡಿದ್ದನು ಎಂದು ಎನ್‌ಐಎ ಹೇಳಿದೆ. ಈ ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ. ಅಧಿಕಾರಿಗಳು ಸ್ಫೋಟವನ್ನು “ಲೋನ್ ವುಲ್ಫ್” ದಾಳಿ ಎಂದು ಕರೆದಿದ್ದಾರೆ.

ಇನ್ನೂ ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್​ ಬ್ಲಾಸ್ಟ್​ ಪ್ರಕರಣದಲ್ಲಿ ಆಟೋ ಚಾಲಕ ಮತ್ತು ಆರೋಪಿ ಮೊಹ್ಮದ್​ ಶಾರಿಕ್​ ಇಬ್ಬರು ಗಾಯಗೊಂಡಿದ್ದರು. ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ, ಶಾರಿಕ್ ಮತ್ತು ಆತನ ಸಹಚರರು ಕರ್ನಾಟಕದ ಅರಣ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಕ್ಯಾಂಪ್ ಸ್ಥಾಪಿಸಲು ಬಯಸಿದ್ದರು ಎಂದು ಎನ್ಐಎಗೆ ತಿಳಿದುಬಂದಿದೆ. ಅಲ್ಲದೇ ಮಂಗಳೂರು ಸುತ್ತಮುತ್ತಲಿನ ಕಾಡಿನಲ್ಲಿ ಮೊಹ್ಮದ್​ ಶಾರಿಕ್​ ಮತ್ತು ಆತನ ಸಹಚರರು ಇಸ್ಲಾಮಿಕ್ ಸ್ಟೇಟ್‌ ಕ್ಯಾಂಪ್​ನ್ನು ಹೂಡಿದ್ದು, ಅಲ್ಲಿ ಮೊಹ್ಮದ್​ ಶಾರಿಕ್ ತರಬೇತಿ ಪಡೆದಿದ್ದನು ಎಂದು ಎನ್​ಐಎ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ