ಹಿಂದೂಗಳ ಹೆಸರೇಳಿ ಉಗ್ರ ಕೃತ್ಯ ಈ ಹಿಂದೆಯೂ ನಡೆದಿದೆ, ಮಂಗಳೂರಿನ ಸ್ಫೋಟ ಲಘುವಾಗಿ ಪರಿಗಣಿಸುವಂತಿಲ್ಲ: ಸಿ.ಟಿ.ರವಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 24, 2022 | 2:59 PM

ಹಿಂದುಗಳ ಹೆಸರೇಳಿ ಉಗ್ರ ಕೃತ್ಯ ಈ ಹಿಂದೆಯೂ ನಡೆದಿದೆ. ಮಂಗಳೂರಿನ ಸ್ಫೋಟ ಪ್ರಕರಣ ಲಘುವಾಗಿ ಪರಿಗಣಿಸುವಂತಿಲ್ಲ. ಸ್ಫೋಟ ಪ್ರಕರಣ ಎನ್​ಐಎಗೆ ಕೊಡುವ ಬಗ್ಗೆ ಸಿಎಂ ಹೇಳಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.

ಹಿಂದೂಗಳ ಹೆಸರೇಳಿ ಉಗ್ರ ಕೃತ್ಯ ಈ ಹಿಂದೆಯೂ ನಡೆದಿದೆ, ಮಂಗಳೂರಿನ ಸ್ಫೋಟ ಲಘುವಾಗಿ ಪರಿಗಣಿಸುವಂತಿಲ್ಲ: ಸಿ.ಟಿ.ರವಿ
ಬಿಜೆಪಿ ನಾಯಕ ಸಿ.ಟಿ.ರವಿ
Follow us on

ದೆಹಲಿ: ಹಿಂದುಗಳ ಹೆಸರೇಳಿ ಉಗ್ರ ಕೃತ್ಯ ಈ ಹಿಂದೆಯೂ ನಡೆದಿದೆ. ಮಂಗಳೂರಿನ ಸ್ಫೋಟ ಪ್ರಕರಣ ಲಘುವಾಗಿ ಪರಿಗಣಿಸುವಂತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡಿದ್ದೇನೆ. ಸ್ಫೋಟ ಪ್ರಕರಣ ಎನ್​ಐಎಗೆ ಕೊಡುವ ಬಗ್ಗೆ ಸಿಎಂ ಹೇಳಿದ್ದಾರೆ. ಇದೊಂದು ಜಿಹಾದಿ ಕೃತ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ಮಾಡಿದರು. ಕೊಯಮತ್ತೂರು ಮತ್ತು ಮಂಗಳೂರು ಸ್ಫೋಟಕ್ಕೆ ಲಿಂಕ್ ಇದೆ. ಕಾನೂನು ನೆರವು ನೀಡುವವರನ್ನು ಸಹ ವಿಚಾರಣೆ ನಡೆಸಬೇಕು. ಇಡೀ ಸಮಾಜ ಸಂಘಟನಾತ್ಮಕವಾಗಿ ಎದುರಿಸಬೇಕಾಗಿದೆ ಎಂದು ಹೇಳಿದರು.

ಈ ಬಗ್ಗೆ ಏನು ಉತ್ತರ ಕೊಡಬೇಕೋ ಅದನ್ನು ಸಿಎಂ ಕೊಟ್ಟಿದ್ದಾರೆ

ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಪದೇಪದೆ ಕ್ಯಾತೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಏನು ಉತ್ತರ ಕೊಡಬೇಕೋ ಅದನ್ನು ಸಿಎಂ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಮರಾಠಿಗರು ಸುರಕ್ಷಿತವಾಗಿದ್ದಾರೆ. ವಿವಾದದ ನಡುವೆಯೂ ಮಹಾರಾಷ್ಟ್ರದಲ್ಲಿ ನಮ್ಮ ಕನ್ನಡಿಗರು ಕೂಡ ಸೇಫ್ ಆಗಿದ್ದಾರೆ. ನಾವು ಪಿಒಕೆಗೆ ಮೊದಲ ಪ್ರಾಮುಖ್ಯತೆ ಕೊಡುತ್ತೇವೆ. ಅದನ್ನ ಹೇಗೆ ವಾಪಸ್ ತಗೋಬೇಕು ಅನ್ನೋದು ನಮ್ಮ ಆದ್ಯತೆ. ಪಿಒಕೆ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತವಾಗಿಲ್ಲ. ಹಾಗಾಗಿ ನಾವು ಹೆಚ್ಚು ಪಿಒಕೆಗೆ ಆದ್ಯತೆ ನೀಡುತ್ತೇವೆ ಎಂದರು.

ವೋಟರ್ ಐಡಿ ಪರಿಷ್ಕರಣೆ ಅಕ್ರಮದ ಬಗ್ಗೆ ತನಿಖೆ ಆಗಲಿ

ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಕೇಸ್ ವಿಚಾರವಾಗಿ ಅವರು ಮಾತನಾಡಿದ್ದು, ಚಿಲುಮೆ ಸಂಸ್ಥೆಗೆ ವೋಟರ್​ ID ಪರಿಷ್ಕರಣೆಗೆ ಸಿದ್ದರಾಮಯ್ಯ ಅವಧಿಯಲ್ಲೇ ಸಂಸ್ಥೆಗೆ ಅವಕಾಶ ನೀಡಿದ ಆರೋಪವಿದೆ. ವೋಟರ್ ಐಡಿ ಪರಿಷ್ಕರಣೆ ಅಕ್ರಮದ ಬಗ್ಗೆ ತನಿಖೆ ಆಗಲಿ. ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಿದೆ. ಕರಡು ಪಟ್ಟಿಯಲ್ಲಿ ಹೆಸರು ತಪ್ಪಿದ್ರೆ ದೂರು ನೀಡಬಹುದು. ಬಿಎಲ್​ಒಗೆ ಅಂತಿಮ ಪಟ್ಟಿ ಪರಿಷ್ಕರಿಸುವ ಅಧಿಕಾರ ಇದೆ. ಇದಕ್ಕೆ ಬಿಎಲ್​​ಒ ಉತ್ತರದಾಯಿ ಎಂದು ತಿಳಿಸಿದರು.

ಬಿ.ಎಲ್​.ಸಂತೋಷ್ ದೇಶಕ್ಕೆ ಬದುಕು ಅರ್ಪಿಸಿದ ನಾಯಕ

ಬಿ.ಎಲ್​.ಸಂತೋಷ್​ಗೆ ಎಸ್​ಐಟಿಯಿಂದ ಸಮನ್ಸ್​ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿ.ಎಲ್​.ಸಂತೋಷ್ ದೇಶಕ್ಕೆ ಬದುಕು ಅರ್ಪಿಸಿದ ನಾಯಕ. ಕಾನೂನಾತ್ಮಾಕವಾಗಿ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಂತೆ ನಾವು ಬೀದಿ ರಂಪ ಮಾಡಿಲ್ಲ. ಕಾನೂನು ಪರಿಮಿತಿಯಲ್ಲಿ ಅವರು ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:55 pm, Thu, 24 November 22