ಅರುಣ್ ಗೋಯೆಲ್ ನೇಮಕಾತಿಗಾಗಿರುವ ಕಡತಕ್ಕೆ ಆತುರದಿಂದ ಅನುಮತಿ ಸಿಕ್ಕಿದೆ: ಸುಪ್ರೀಂಕೋರ್ಟ್

ಯಾವ ರೀತಿಯ ಮೌಲ್ಯಮಾಪನ ಇದು? ನಾವು ಅರುಣ್ ಗೋಯೆಲ್ ಅವರ ರುಜುವಾತುಗಳ ಅರ್ಹತೆಯನ್ನು ಪ್ರಶ್ನಿಸುತ್ತಿಲ್ಲ ಆದರೆ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿದೆ

ಅರುಣ್ ಗೋಯೆಲ್ ನೇಮಕಾತಿಗಾಗಿರುವ ಕಡತಕ್ಕೆ ಆತುರದಿಂದ ಅನುಮತಿ ಸಿಕ್ಕಿದೆ: ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 24, 2022 | 8:30 PM

ದೆಹಲಿ: ಅರುಣ್ ಗೋಯೆಲ್ (Arun Goel) ಅವರನ್ನು ಚುನಾವಣಾ ಆಯುಕ್ತರಾಗಿ (Election Commissioner) ನೇಮಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ (Supreme Court) ಗೋಯಲ್ ನೇಮಕಾತಿಗಾಗಿರುವ ಕಡತಕ್ಕೆ “ತರಾತುರಿ” ಮತ್ತು ಬಹಳ ಆತುರದಿಂದ ಅನುಮತಿ ಸಿಕ್ಕಿದೆ ಎಂದು ಗುರವಾರ ನಡೆಸಿದ ವಿಚಾರಣೆ ವೇಳೆ ಹೇಳಿದೆ. ಗೋಯೆಲ್ ಅವರ ನೇಮಕಾತಿಗೆ ಸಂಬಂಧಿಸಿದ ಕಡತಕ್ಕೆ “ಮಿಂಚಿನ ವೇಗ” ದಿಂದ ಒಪ್ಪಿಗೆ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮೂಲಕ ಕೇಂದ್ರವು ಈ ವಿಷಯವನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಮನವಿ ಮಾಡಿದೆ. ಯಾವ ರೀತಿಯ ಮೌಲ್ಯಮಾಪನ ಇದು? ನಾವು ಅರುಣ್ ಗೋಯೆಲ್ ಅವರ ರುಜುವಾತುಗಳ ಅರ್ಹತೆಯನ್ನು ಪ್ರಶ್ನಿಸುತ್ತಿಲ್ಲ ಆದರೆ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಕೆಎಂ ಜೋಸೆಫ್ (Justice KM Joseph) ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿದೆ. ವಿಚಾರಣೆಯ ಸಂದರ್ಭದಲ್ಲಿ, ಅಟಾರ್ನಿ ಜನರಲ್ ಮಾತನಾಡುತ್ತಿರುವಾಗ ವಕೀಲ ಪ್ರಶಾಂತ್ ಭೂಷಣ್ ಅವರು ಪೀಠದ ಮುಂದೆ ಸಲ್ಲಿಕೆಗಳನ್ನು ಮಾಡಲು ಪ್ರಯತ್ನಿಸಿದರು. ಆಗ ಅಟಾರ್ನಿ ಜನರಲ್, ದ ಯವಿಟ್ಟು ಸ್ವಲ್ಪ ಸಮಯ ಬಾಯ್ಮುಚ್ಚಿ ಎಂದು  ಭೂಷಣ್ ಅವರಿಗೆ ಹೇಳಿದ್ದಾರೆ. ಚುನಾವಣಾ ಆಯುಕ್ತರಾಗಿ  ಗೋಯೆಲ್ ಅವರ ನೇಮಕಾತಿಯ ಮೂಲ ಕಡತವನ್ನು ಅದು ಪರಿಶೀಲಿಸಿತು, ಇದನ್ನು ಸುಪ್ರೀಂ ಕೋರ್ಟ್ ಬುಧವಾರದ ನಿರ್ದೇಶನದ ಅನುಸಾರವಾಗಿ ಕೇಂದ್ರವು ಪೀಠದ ಮುಂದೆ ಇರಿಸಿದೆ.

ಪೀಠದ ಭಾಗವಾಗಿರುವ ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ವೆಂಕಟರಮಣಿ ಅವರಲ್ಲಿನೀವು ನ್ಯಾಯಾಲಯವನ್ನು ಎಚ್ಚರಿಕೆಯಿಂದ ಆಲಿಸಬೇಕು. ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಹೇಳಿದ್ದಾರೆ. ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸಲು ನಾನು ಬದ್ಧ ಎಂದು ಅಟಾರ್ನಿ ಜನರಲ್ ಹೇಳಿದರು.

1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಒಂದೇ ದಿನದಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಅವರ ಕಡತವನ್ನು ಕಾನೂನು ಸಚಿವಾಲಯ ಒಂದೇ ದಿನದಲ್ಲಿ ತೆರವುಗೊಳಿಸಿದೆ. ನಾಲ್ಕು ಹೆಸರುಗಳ ಸಮಿತಿಯನ್ನು ಪ್ರಧಾನಿ ಮುಂದೆ ಇರಿಸಲಾಯಿತು.ಗೋಯೆಲ್ ಅವರಿಗೆ 24 ಗಂಟೆಗಳ ಒಳಗೆ ರಾಷ್ಟ್ರಪತಿಯವರಿಂದ ಒಪ್ಪಿಗೆ ಸಿಕ್ಕಿತು ಎಂದು ಪೀಠ ಹೇಳಿದೆ.

ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಮಾದರಿಯ ವ್ಯವಸ್ಥೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಮತ್ತಷ್ಟು ರಾಷ್ಚ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Thu, 24 November 22