ಚುನಾವಣಾ ಆಯುಕ್ತ ಅರುಣ್ ಗೋಯೆಲ್ ನೇಮಕಾತಿಯ ನಿರ್ದಿಷ್ಟ ಕಡತಗಳನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ಅರುಣ್ ಗೋಯೆಲ್ ಅವರು ಗುರುವಾರದವರೆಗೆ ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ, ಶುಕ್ರವಾರ ಅವರು VRS ಪಡೆದರು. ಅವರನ್ನು ಚುನಾವಣಾ ಆಯುಕ್ತರಾಗಿ ನೇಮಿಸಲಾಯಿತು ಎಂದು ಪ್ರಶಾಂತ್ ಭೂಷಣ್ ಹೇಳಿದರು

ಚುನಾವಣಾ ಆಯುಕ್ತ ಅರುಣ್ ಗೋಯೆಲ್ ನೇಮಕಾತಿಯ ನಿರ್ದಿಷ್ಟ ಕಡತಗಳನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ
ಅರುಣ್ ಗೋಯೆಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 23, 2022 | 7:44 PM

ದೆಹಲಿ: ಭಾರತದ ಚುನಾವಣಾ ಆಯೋಗದ (Election Commission of India) ನೇಮಕಾತಿ ಪ್ರಕ್ರಿಯೆಯ ಕುರಿತು ಕೆಲವು ತೀಕ್ಷ್ಣವಾದ ಟೀಕೆ ಮತ್ತು ಪ್ರಶ್ನೆಗಳ ಜೊತೆಗೆ ಸುಪ್ರೀಂಕೋರ್ಟ್ (Supreme Court) ನವೆಂಬರ್ 19 ರಂದು ಅರುಣ್ ಗೋಯೆಲ್ (Arun Goel) ಅವರನ್ನು ಆಯೋಗಕ್ಕೆ ನೇಮಕ ಮಾಡಿರುವ ಕುರಿತು ನಿರ್ದಿಷ್ಟ ಕಡತಗಳನ್ನು ಕೇಳಿದೆ. ನಾಳೆಯೂ (ಗುರುವಾರ) ವಿಚಾರಣೆ ಮುಂದುವರಿಯಲಿದೆ. ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನೇಮಕಾತಿಯಲ್ಲಿ ಏನಾದರೂ ತೆರೆಮರೆಯ ಪ್ರಕ್ರಿಯೆ ನಡೆದಿದೆಯೇ ಎಂದು ತಿಳಿಯಲು ಬಯಸಿದೆ. ಯಾಕೆಂದರೆ ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದಿದ್ದ ಗೋಯೆಲ್ ಅವರನ್ನು ತಕ್ಷಣ ಚುನಾವಣಾ ಸಂಸ್ಥೆಗೆ ನೇಮಕ ಮಾಡಲಾಗಿತ್ತು. ಅರುಣ್ ಗೋಯೆಲ್ ಅವರ ನೇಮಕವನ್ನು ಕಾರ್ಯಕರ್ತ,ವಕೀಲ ಪ್ರಶಾಂತ್ ಭೂಷಣ್ ಅವರು ಪ್ರಕ್ರಿಯೆಯ ಮೇಲಿನ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಇತ್ತೀಚೆಗಷ್ಟೇ ನಿವೃತ್ತರಾದ ಐಎಎಸ್ ಅಧಿಕಾರಿ ಗೋಯೆಲ್ ಅವರನ್ನು ಮುಖ್ಯಸ್ಥ ರಾಜೀವ್ ಕುಮಾರ್ ಮತ್ತು ಅನುಪ್ ಚಂದ್ರ ಪಾಂಡೆ ಜೊತೆಗೆ ಮೂರು ಸದಸ್ಯರ ಚುನಾವಣಾ ಆಯೋಗದ ಭಾಗವಾಗಿ ಮಾಡಲಾಗಿದೆ.”ಅರುಣ್ ಗೋಯೆಲ್ ಅವರು ಗುರುವಾರದವರೆಗೆ ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ, ಶುಕ್ರವಾರ ಅವರು VRS ಪಡೆದರು. ಅವರನ್ನು ಚುನಾವಣಾ ಆಯುಕ್ತರಾಗಿ ನೇಮಿಸಲಾಯಿತು ಎಂದು ಪ್ರಶಾಂತ್ ಭೂಷಣ್ ಹೇಳಿದರು. ಸ್ವಯಂ ನಿವೃತ್ತರಾಗದೇ ಇರುತ್ತಿದ್ದರೆ ಗೋಯೆಲ್ ಡಿಸೆಂಬರ್ 31 ರಂದು 60 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕಿತ್ತು.

ಸರ್ಕಾರಿ ವಕೀಲರಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿದ್ದು, ವೈಯಕ್ತಿಕ ನಿದರ್ಶನಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದೆ.”ಯಾವ ಕಾರ್ಯವಿಧಾನ ಎಂಬುದನ್ನು ನಾವು ನೋಡಬಯಸುತ್ತೇವೆ. ನಾವು ಅದನ್ನು ಎದುರಾಳಿಯಾಗಿ ಪರಿಗಣಿಸುವುದಿಲ್ಲ.ಅದನ್ನು ನಮ್ಮ ದಾಖಲೆಗಾಗಿ ಇಡುವುದಿಲ್ಲ, ಆದರೆ ನೀವು ಎಲ್ಲವನ್ನೂ ಸರಿಯಾಗಿದೆ ಎಂದು ಹೇಳಿಕೊಳ್ಳುವುದರ ಬಗ್ಗೆ ನಾವು ತಿಳಿದುಕೊಳ್ಳಲು ಬಯಸುತ್ತೇವೆ ನಿಮಗೆ ನಾಳೆಯವರೆಗೆ ಸಮಯವಿದೆ” ಎಂದು ನ್ಯಾಯಾಲಯ ಸರ್ಕಾರಿ ವಕೀಲರಿಗೆ ಹೇಳಿದೆ.

ಆಯೋಗದ ವೆಬ್‌ಸೈಟ್ ಪ್ರಕಾರ, ಅರುಣ್ ಗೋಯೆಲ್ ಅವರು ಈ ಸೋಮವಾರ ಅಂದರೆ ನವೆಂಬರ್ 21 ರಂದು ಅಧಿಕಾರ ವಹಿಸಿಕೊಂಡರು. ಪಂಜಾಬ್ ಕೇಡರ್‌ನ 1985 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿದ್ದ ಅವರು 37 ವರ್ಷಗಳ ಸೇವೆಯ ನಂತರ ಕೇಂದ್ರ ಭಾರೀ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾದರು.

ಫೆಬ್ರವರಿ 2025 ರಲ್ಲಿ ರಾಜೀವ್ ಕುಮಾರ್ ಅಧಿಕಾರ ತ್ಯಜಿಸಿದ ನಂತರ ಅವರು ಈಗ ಮುಖ್ಯ ಚುನಾವಣಾ ಆಯುಕ್ತರಾಗಲು ಸಾಲಿನಲ್ಲಿದ್ದಾರೆ. ತನ್ನ ಸ್ವಾತಂತ್ರ್ಯದ ಬಗ್ಗೆ  ಕೇಂದ್ರ ಸರ್ಕಾರಕ್ಕೆ ಪ್ರಶ್ನೆಯೊಂದನ್ನು ಕೇಳಿದ ನ್ಯಾಯಾಲಯ ಚುನಾವಣಾ ಕಮಿಷನರ್ ಅವರು ಪ್ರಧಾನಿಗಿಂತ ಕಡಿಮೆಯಿಲ್ಲ ಎಂದು ಅಂದುಕೊಂಡಿದ್ದೀರಾ? ಇದು ಕೇವಲ ಒಂದು ಉದಾಹರಣೆಯಾಗಿದೆ. ಅವರಿಗೆ ಅದನ್ನು ಮಾಡಲು ಬರುವುದಿಲ್ಲ. ಇದು ವ್ಯವಸ್ಥೆಯ ಸಂಪೂರ್ಣ ಸ್ಥಗಿತದ ಸಂದರ್ಭವಾಗುವುದಿಲ್ಲವೇ?” ಎಂದಿದೆ.

“ಚುನಾವಣಾ ಕಮಿಷನರ್‌ಗಳಲ್ಲಿ ಒಬ್ಬರು ಹೇಗೆ ರಾಜೀನಾಮೆ ನೀಡಿದರು” ಎಂದು ಹೆಸರು ಉಲ್ಲೇಖಿಸದೆಯೇ ನ್ಯಾಯಾಲಯ ಪ್ರಶ್ನಿಸಿದೆ. ನೇಮಕಾತಿ ವ್ಯವಸ್ಥೆಯು ಹೆಸರುಗಳನ್ನು ನಿರ್ಧರಿಸಲು ಕೇವಲ ಕೇಂದ್ರ ಸಚಿವ ಸಂಪುಟಕ್ಕಿಂತ “ದೊಡ್ಡ ಸಂಸ್ಥೆಯ” ಅಗತ್ಯವಿದೆ ಎಂದ ನ್ಯಾಯಾಲಯ ಬದಲಾವಣೆಯ ಅವಶ್ಯಕತೆಯಿದೆ ಎಂದಿದೆ.

ಚುನಾವಣಾ ಆಯುಕ್ತರ ನೇಮಕದ ಬಗ್ಗೆ ಸಂವಿಧಾನದ 324 ನೇ ವಿಧಿ – ಕಾರ್ಯವಿಧಾನವನ್ನು ಹೇಗೆ ವಿವರಿಸುವುದಿಲ್ಲ ಎಂದು ನ್ಯಾಯಾಲಯವು ಈಗಾಗಲೇ ಹೇಳಿದೆ.

ಸರ್ಕಾರವು 1991 ರ ಕಾನೂನು ಮತ್ತು ನೇಮಕಾತಿಯ ಹಿಂದಿನ ಸಂಪ್ರದಾಯಗಳನ್ನು ಕೇಂದ್ರ ಸಚಿವ ಸಂಪುಟ ರಾಷ್ಟ್ರಪತಿಗೆ ಶಿಫಾರಸು ಮಾಡಿದೆ.ನಂತರ ಅವರು ಅಧಿಕಾರಿಯನ್ನು ಆಯ್ಕೆ ಮಾಡುತ್ತಾರೆ. “ನ್ಯಾಯಾಲಯವು ಮಧ್ಯಪ್ರವೇಶಿಸಲು ದಾರಿತಪ್ಪಿ ನಿದರ್ಶನಗಳು ಆಧಾರವಾಗಿರಬಾರದು. ಸ್ಥಾನವನ್ನು ಕಾಪಾಡುವುದು ನಮ್ಮ ಪ್ರಯತ್ನವಾಗಿದೆ, ”ಎಂದು ಸರ್ಕಾರದ ವಕೀಲರು ಹೇಳಿದ್ದಾರೆ. “ಮೊದಲು ಎಲ್ಲಾ ಹಿರಿಯ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ತದನಂತರ ಪಟ್ಟಿಯನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ ನಂತರ ಅದನ್ನು ಪ್ರಧಾನಿಗೆ ರವಾನಿಸಲಾಗುತ್ತದೆ” ಎಂದು ವಕೀಲರು ವಿವರಿಸಿದರು. ಅಸ್ತಿತ್ವದಲ್ಲಿರುವ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ನ್ಯಾಯಾಲಯವು ಮಧ್ಯಪ್ರವೇಶಿಸಲು ಯಾವುದೇ ಪ್ರಚೋದಕ ಅಂಶವಿಲ್ಲ ಎಂದು ವಕೀಲರು ಹೇಳಿದ್ದಾರೆ.

ವ್ಯವಸ್ಥೆ ಸರಿಯಿಲ್ಲ ಎಂದು ಹೇಳುತ್ತಿಲ್ಲ. ಪಾರದರ್ಶಕ ವ್ಯವಸ್ಥೆ ಇರಬೇಕು ಎಂದು ಹೇಳುತ್ತಿದ್ದೇವೆ ಎಂದು ನ್ಯಾಯಾಲಯ ಹೇಳಿದೆ. “ನ್ಯಾಯಾಲಯವು ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ .ಏಕೆಂದರೆ ನಾವು ನೇಮಕಾತಿಯನ್ನು ಹೇಗೆ ಮಾಡಲಾಗಿದೆ ಎಂಬುದರ ಬಗ್ಗೆ ಪ್ರತಿ ಫೈಲ್ ಮೂಲಕ ತೋರಿಸಲು ಸಾಧ್ಯವಿಲ್ಲ. ಕೆಲವು ತಪ್ಪು ನಡೆದಿರುವ ನಿದರ್ಶನಗಳನ್ನು ನೀವು ತೋರಿಸಬೇಕು. ಕೇವಲ ಸಂಭವನೀಯತೆ, ಆತಂಕದ ಮೇಲೆ, ನ್ಯಾಯಾಲಯದ ಹಸ್ತಕ್ಷೇಪ ಮಾಡುವಂತೆ ಹೇಳಲಾಗುವುದಿಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರುಣ್ ಗೋಯೆಲ್ ನೇಮಕಾತಿಯ ನಿರ್ದಿಷ್ಟ ಫೈಲ್ ಗಳನ್ನು ನ್ಯಾಯಾಲಯ ಕೇಳಿದೆ.

Published On - 7:39 pm, Wed, 23 November 22

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ