AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದೆಲ್ಲೆಡೆ ಭಾರತೀಯ ಮೂಲದ ನಿವಾಸಿಗಳು ವಾಸವಾಗಿರುವುದು ಸತ್ಯ, ಆದರೆ ಪಾಕಿಸ್ತಾನದಲ್ಲಿ ಒಬ್ಬೇಒಬ್ಬ ಭಾರತೀಯ ಪ್ರಜೆ ವಾಸವಾಗಿಲ್ಲ!

ನಾವೆಲ್ಲ ಊಹಿಸಿಕೊಳ್ಳಲಾಗದ ಪ್ರದೇಶಗಳಲ್ಲೂ ಭಾರತೀಯ ಮೂಲದ ನಿವಾಸಿಗಳು ವಾಸವಾಗಿದ್ದಾರೆ. ಅರುಬಾ, ಬೆಲಿಜೆ, ಬೊನೇರ್, ಕೇಪ್ ವರ್ದೆ ಐಲ್ಯಾಂಡ್ಸ್, ಕುರಕಾವೊ, ಮಲಾವಿ, ನೌರಾ ಮತ್ತು ಸಮೋಯ ಮೊದಲಾದ ಅಪರಚಿತ ದೇಶಗಳಲ್ಲೂ ಭಾರತೀಯ ಮೂಲದ ನಿವಾಸಿಗಳು ವಾಸವಾಗಿದ್ದಾರೆ.

ವಿಶ್ವದೆಲ್ಲೆಡೆ ಭಾರತೀಯ ಮೂಲದ ನಿವಾಸಿಗಳು ವಾಸವಾಗಿರುವುದು ಸತ್ಯ, ಆದರೆ ಪಾಕಿಸ್ತಾನದಲ್ಲಿ ಒಬ್ಬೇಒಬ್ಬ ಭಾರತೀಯ ಪ್ರಜೆ ವಾಸವಾಗಿಲ್ಲ!
ವ್ಯಾಟಿಕನ್ ಸಿಟಿಯಲ್ಲಿ ಭಾರತೀಯ ಮೂಲದ ಜನರಿಲ್ಲ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Nov 23, 2022 | 1:29 PM

Share

ನವದೆಹಲಿ: ಭಾರತೀಯ ಸಂಜಾತರಿಲ್ಲದ ದೇಶ ವಿಶ್ವದಲ್ಲಿ ಯಾವುದಾದರು ಇದೆಯಾ? ಸುಮಾರು 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಪ್ರಜೆಗಳು ವಿಶ್ವದ ಎಲ್ಲ ದೇಶಗಳಲ್ಲಿ ವಾಸವಾಗಿದ್ದಾರೆ ಎಂದು ನೀವು ಭಾವಿಸಿರಬಹುದು. ಭಾರತದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಣೆಯೊಂದರ ಪ್ರಕಾರ, ವಿಶ್ವದ 210 ದೇಶಗಳಲ್ಲಿ ಭಾರತೀಯ ಮೂಲದ ನಿವಾಸಿಗಳು ವಾಸವಾಗಿದ್ದಾರೆ. ಯುಎಸ್, ಯುಕೆ, ಆಸ್ಟ್ರೇಲಿಯ, ಅರ್ಜೆಂಟೀನಾ, ದಕ್ಷಿಣ ಆಫ್ರಿಕ, ಕೋಸ್ಟಾ ರಿಕಾ ಮೊದಲಾದ 196 ಪ್ರಮುಖ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಮೂಲದ ನಿವಾಸಿಗಳನ್ನು ಕಾಣಬಹುದು. ಇವರನ್ನು ಅನಿವಾಸಿ ಭಾರತೀಯರು (ಎನ್ ಆರ್ ಐಗಳು) (NRI), ಭಾರತೀಯ ಮೂಲದ ಜನ (ಪೀಪಲ್ ಆಫ್ ಇಂಡಿಯನ್ ಒರಿಜಿನ್) (POI) ಮತ್ತು ವಿದೇಶಗಳಲ್ಲಿರುವ ಭಾರತೀಯ ಪ್ರಜೆಗಳೆಂದು (Overseas Citizens Of India) ಉಲ್ಲೇಖಿಸಲಾಗುತ್ತದೆ.

ನಾವೆಲ್ಲ ಊಹಿಸಿಕೊಳ್ಳಲಾಗದ ಪ್ರದೇಶಗಳಲ್ಲೂ ಭಾರತೀಯ ಮೂಲದ ನಿವಾಸಿಗಳು ವಾಸವಾಗಿದ್ದಾರೆ. ಅರುಬಾ, ಬೆಲಿಜೆ, ಬೊನೇರ್, ಕೇಪ್ ವರ್ದೆ ಐಲ್ಯಾಂಡ್ಸ್, ಕುರಕಾವೊ, ಮಲಾವಿ, ನೌರಾ ಮತ್ತು ಸಮೋಯ ಮೊದಲಾದ ಅಪರಚಿತ ದೇಶಗಳಲ್ಲೂ ಭಾರತೀಯ ಮೂಲದ ನಿವಾಸಿಗಳು ವಾಸವಾಗಿದ್ದಾರೆ. ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ 3.20 ಕೋಟಿ ಭಾರತೀಯರು ಎನ್ ಅರ್ ಐ ಮತ್ತು ಒಸಿಐಗಳಾಗಿ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ವಾಸವಾಗಿದ್ದಾರೆ. ಹಾಗಾಗಿ ಭಾರತ, ವಿದೇಶಗಳಲ್ಲಿ ಅತಿಹೆಚ್ಚು ಸಂಜಾತರನ್ನು ಹೊಂದಿರುವ ದೇಶವೆನಿಸಿಕೊಂಡಿದೆ. 2020 ರ ವಿಶ್ವಸಂಸ್ಥೆ ವರದಿ ಪ್ರಕಾರ 1.80 ಕೋಟಿ ಭಾರತೀಯರು ತಾಯ್ನಾಡಿನಿಂದ ಹೊರಹೋಗಿ ವಿದೇಶಗಳಲ್ಲಿ ವಾಸವಾಗಿದ್ದಾರೆ.

ಆದರೆ, ಭಾರತೀಯ ಮೂಲದ ಜನರಿಲ್ಲದ ಕೆಲ ದೇಶಗಳು ಕೂಡ ಒಂದಷ್ಟಿವೆ. ಅವುಗಳಲ್ಲಿ ಕೆಲವನ್ನು ನೋಡೋಣ:

ವ್ಯಾಟಿಕನ್ ಸಿಟಿ:  

ರೋಮ್ ನಗರದಿಂದ ಆವೃತವಾಗಿರುವ ವ್ಯಾಟಿಕನ್ ಸಿಟಿ ವಿಶ್ವದ ಅತ್ಯಂಚ ಚಿಕ್ಕ ರಾಷ್ಟ್ರ. ವಿಶ್ವದ ಕೋಟ್ಯಾಂತರ ರೋಮನ್ ಕೆಥೋಲಿಕ್ ಕ್ರೈಸ್ತರಿಗೆ ವ್ಯಾಟಿಕನ್ ಸಿಟಿ ಪುಣ್ಯಸ್ಥಳವಾಗಿದೆ.  ಇಲ್ಲಿ ನಮಗೆ ಒಬ್ಬೇಒಬ್ಬ ಭಾರತೀಯ ಮೂಲದ ನಿವಾಸಿ ಸಿಕ್ಕಲಾರ.

ಸ್ಯಾನ್ ಮಾರಿನೋ

ಸ್ಯಾನ್ ಮಾರಿಯೋ ಗಣತಂತ್ರ ಇಟಲಿಯಿಂದ ಆವರಿಸಲ್ಪಟ್ಟಿರುವ ಒಂದು ಪುಟ್ಟ ದೇಶವಾಗಿದ್ದು ಅಲ್ಲಿನ ಜನಸಂಖ್ಯೆ 3,35,620 ಮಾತ್ರ. ಈ ದೇಶದಲ್ಲೂ ಭಾರತೀಯ ಮೂಲದ ನಿವಾಸಿಗಳು ವಾಸವಾಗಿಲ್ಲ.

ತುವಾಲು

ತುವಾಲು ಆಸ್ಟ್ರೇಲಿಯದ ಈಶಾನ್ಯ ಭಾಗಕ್ಕಿರುವ ಪೆಸಿಫಿಕ್ ಸಮುದ್ರ ಭಾಗದಲ್ಲಿರುವ ದ್ವೀಪ ಸಮೂಹವಾಗಿದೆ. ಮೊದಲು ಎಲಿಸ್ ಐಲ್ಯಾಂಡ್ ಎಂದು ಕರೆಸಿಕೊಳ್ಳುತ್ತಿದ್ದ ದ್ವೀಪರಾಷ್ಟ್ರದ ಜನಸಂಖ್ಯೆ ಕೇವಲ 10,000 ಮಾತ್ರ. ಇಲ್ಲೂ ಭಾರತೀಯರಿಲ್ಲ.

ಪಾಕಿಸ್ತಾನ

ಇದು ವಿಚಿತ್ರ ಅನಿಸಿದರೂ ಸತ್ಯ. ಅಧಿಕೃತ ಮೂಲಗಳ ಪ್ರಕಾರ ಒಬ್ಬೇಒಬ್ಬ ಭಾರತೀಯ ಮೂಲದ ವ್ಯಕ್ತಿ ಪಾಕಿಸ್ತಾನದಲ್ಲಿ ವಾಸವಾಗಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಸೆರೆವಾಸ ಅನುಭವಿಸುತ್ತಿರುವ ಮತ್ತು ಭಾರತೀಯ ಡಿಪ್ಲೋಮ್ಯಾಟ್ ಗಳನ್ನು ಇದರಲ್ಲಿ ಪರಿಗಣಿಸಲಾಗಿಲ್ಲ.

ಬಲ್ಗೇರಿಯ

ಬಲ್ಕಾನ್ಸ್ ಪ್ರದೇಶ ಆಗ್ನೇಯ ಭಾಗಕ್ಕಿರುವ ಬಲ್ಗೇರಿಯ ದೇಶವು ಭಿನ್ನ ಬೌಗೋಳಿಕ ಅಂಶಗಳನ್ನು ಹೊಂದಿದೆ. ಉತ್ತರಕ್ಕಿರುವ ದನುಬೆ ನದಿಯು ದೇಶದ ಒಂದು ಗಡಿಭಾಗವಾಗಿ ಕೆಲಸ ಮಾಡುತ್ತದೆ. ಅದಕ್ಕೆ ತದ್ವಿರುದ್ಧವಾಗಿ ಬಲ್ಗೇರಿಯಾದ ದಕ್ಷಿಣ ಭಾಗವು ಎತ್ತರದ ಪ್ರದೇಶಗಳಿಂದ ಆವೃತವಾಗಿದೆ. ಈ ದೇಶದಲ್ಲೂ ಭಾರತೀಯ ಮೂಲದ ನಾಗರಿಕರು ವಾಸವಾಗಿಲ್ಲ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ