Manipur: ಮನೆಯ ಹೊರಗೆ ಭಾರಿ ಸ್ಫೋಟ, ಮಣಿಪುರ ಮಾಜಿ ಶಾಸಕರ ಪತ್ನಿ ಸಾವು

|

Updated on: Aug 12, 2024 | 8:16 AM

ಮಣಿಪುರದಲ್ಲಿ ಮಾಜಿ ಶಾಸಕರೊಬ್ಬರ ಮನೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಶಾಸಕರ ಪತ್ನಿ ಸಾವನ್ನಪ್ಪಿದ್ದಾರೆ. ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ತಮ್ಮ ಮನೆಯ ಹೊರಗೆ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಆಗಸ್ಟ್ 10 ರಂದು (ಶನಿವಾರ) ಏಕೌ ಮುಲ್ಲಾಮ್ ಗ್ರಾಮದ ಸಾಯಿಕುಲ್‌ನ ಮಾಜಿ ಶಾಸಕ ಹೌಕಿಪ್ ಅವರ ಮನೆಯ ಬಳಿ ಸಂಭವಿಸಿದೆ.

Manipur: ಮನೆಯ ಹೊರಗೆ ಭಾರಿ ಸ್ಫೋಟ, ಮಣಿಪುರ ಮಾಜಿ ಶಾಸಕರ ಪತ್ನಿ ಸಾವು
ಸಪಂ
Image Credit source: India Today
Follow us on

ಮನೆಯ ಹೊರಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಮಣಿಪುರ ಮಾಜಿ ಶಾಸಕ ಯಾಮ್​ಥಾಂಗ್ ಹಾಕಿಪ್ ಅವರ ಪತ್ನಿ ಸಾವನ್ನಪ್ಪಿದ್ದಾರೆ. ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ತಮ್ಮ ಮನೆಯ ಹೊರಗೆ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಆಗಸ್ಟ್ 10 ರಂದು (ಶನಿವಾರ) ಏಕೌ ಮುಲ್ಲಾಮ್ ಗ್ರಾಮದ ಸಾಯಿಕುಲ್‌ನ ಮಾಜಿ ಶಾಸಕ ಹೌಕಿಪ್ ಅವರ ಮನೆಯ ಬಳಿ ಸಂಭವಿಸಿದೆ.

ಸಪಂ ಚಾರುಬಾಲಾ (59) ಸೇರಿದಂತೆ ಕುಟುಂಬವು ಮನೆಯ ಹೊರಗೆ ಶುಚಿಗೊಳಿಸುವ ಕೆಲಸದಲ್ಲಿ ತೊಡಗಿದ್ದಾಗ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಸೈಖುಲ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಚಾರುಬಾಲಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಮತ್ತು ಉಳಿದವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಉಸ್ತುವಾರಿ ಅಧಿಕಾರಿ ತಿಳಿಸಿದ್ದಾರೆ.

ಪಕ್ಕದ ಮನೆಯ ಕಾಂಪೌಂಡ್‌ನಲ್ಲಿ ಚಾರುಬಾಲಾ ಕೆಲವು ತ್ಯಾಜ್ಯ ವಸ್ತುಗಳನ್ನು ಸುಡುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದೆ ಎಂದು ಕಂಡುಬಂದಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

ತನಿಖೆ ನಡೆಯುತ್ತಿದ್ದು, ಹಾಕಿಪ್ ಮನೆಯ ಸಮೀಪ ಬಾಂಬ್ ಇಟ್ಟವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಹಾಕಿಪ್ ಮತ್ತು ಅವರ ಕುಟುಂಬಕ್ಕೆ ಯಾವುದೇ ಬೆದರಿಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: Bomb Blast: ಹೂಗ್ಲಿಯಲ್ಲಿ ಬಾಂಬ್​ ಸ್ಫೋಟ, ಓರ್ವ ಸಾವು, ಇಬ್ಬರಿಗೆ ಗಾಯ

ಕಳೆದ ವರ್ಷ ಮೇ 3 ರಂದು ಇಂಫಾಲ್ ಕಣಿವೆ ಮೂಲದ ಮೈಥಿ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿಗಳ ನಡುವೆ ನಡೆದ ಜನಾಂಗೀಯ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ