Gurugram Floods: ಜಲಗ್ರಾಮವಾದ ಗುರುಗ್ರಾಮ; ಭಾರೀ ಮಳೆಯಿಂದ ಕೆರೆಯಂತಾದ ರಸ್ತೆಗಳು
ಭಾರೀ ಮಳೆಯ ನಂತರ ಗುರುಗ್ರಾಮದಲ್ಲಿ ಮೋಟಾರುರಹಿತ ಸಾರಿಗೆ (NMT) ಮತ್ತು ಪಾದಚಾರಿಗಳಿಗೆ ಸುರಂಗಮಾರ್ಗಗಳು ಮತ್ತು ಅಂಡರ್‌ಪಾಸ್‌ಗಳನ್ನು ಮುಚ್ಚಿದ್ದರಿಂದ ನಗರದ ನಿವಾಸಿಗಳು ಮನೆಯೊಳಗೆ ಉಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಗುರುಗ್ರಾಮದ ರಸ್ತೆಗಳೆಲ್ಲ ಸಂಪೂರ್ಣ ಜಲಾವ್ರತವಾಗಿತ್ತು.
ಗುರುಗ್ರಾಮ: ಗುರುಗ್ರಾಮದಲ್ಲಿ ಇಂದು ಮುಂಜಾನೆ ಸುರಿದ ಭಾರೀ ಮಳೆಯು ಅನಾಹುತವನ್ನು ಉಂಟುಮಾಡಿದೆ. ಇದು ನಗರದ ರಸ್ತೆಗಳು ಮತ್ತು ಹೆದ್ದಾರಿಗಳು ಬಂದ್ ಆಗಿದ್ದು, ಹಲವಾರು ಪ್ರದೇಶಗಳಲ್ಲಿ ಭಾರೀ ಜಲಾವೃತವಾಗಿದೆ. ಗುರುಗ್ರಾಮ-ದೆಹಲಿ ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವಾರು ಪ್ರದೇಶಗಳು ಮತ್ತು ಅನೇಕ ಸುರಂಗಮಾರ್ಗಗಳು ಪರಿಣಾಮ ಬೀರಿದ್ದು, ನಗರದಲ್ಲಿ ನಿತ್ಯ ಪ್ರಯಾಣಿಕರಿಗೆ ತೊಂದರೆಯಾಗಿದೆ.
ಗುರುಗ್ರಾಮದಲ್ಲಿ ಜಲಾವೃತಗೊಂಡ ಬೀದಿಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತತೆ ಕೂಡ ಕಂಡುಬಂದಿದೆ. ಪ್ರಯಾಣಿಕರು ಮೊಣಕಾಲು ಮಟ್ಟದ ನೀರಿನಲ್ಲಿ ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜಲಾವೃತ ಮತ್ತು ಟ್ರಾಫಿಕ್ ಜಾಮ್ ಪರಿಸ್ಥಿತಿಯನ್ನು ನಿರ್ವಹಿಸಲು ನಗರದಾದ್ಯಂತ ತುರ್ತು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಗುರುಗ್ರಾಮ್ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಹೇಳಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos