ಹಾವೇರಿ ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿ ಕೆಲಸಕ್ಕೂ ದರ ಫಿಕ್ಸ್ ಮಾಡಿದ ದಲ್ಲಾಳಿಗಳು
ಹಾವೇರಿ ತಹಶೀಲ್ದಾರರ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಮೀತಿಮೀರಿದ್ದು, ಹೆಜ್ಜೆ ಹೆಜ್ಜೆಗೂ ಅವರೇ ಸಿಗುತ್ತಾರೆ. ಇನ್ನು ಏಜೆಂಟ್ರ ಮೂಲಕ ಹೋದರೆ ಇಲ್ಲಿ ನಿಮಿಷಗಳಲ್ಲಿಯೇ ಕೆಲಸ ಆಗುತ್ತದೆ. ಇಲ್ಲದಿದ್ದರೆ ತಹಶೀಲ್ದಾರರ ಕಚೇರಿ ಅಲೆದು ಅಲೆದು ನಿಮ್ಮ ಚಪ್ಪಲಿ ಸವೆಯುತ್ತದೆ. ಈ ಮೂಲಕ ಏಜೆಂಟ್ರ ಮೂಲಕ ಹಗಲು ದರೋಡೆಗೆ ಇಳಿದ್ರಾ ಅಧಿಕಾರಿಗಳು? ಎಂಬ ಪ್ರಶ್ನೆ ಮೂಡಿದೆ.
ಹಾವೇರಿ, ಆ.11: ಹಾವೇರಿ ತಹಶೀಲ್ದಾರರ ಕಚೇರಿ(Haveri Tahsildar Office)ಯಲ್ಲಿ ದಲ್ಲಾಳಿಗಳ ಹಾವಳಿ ಮೀತಿಮೀರಿದ್ದು, ಹೆಜ್ಜೆ ಹೆಜ್ಜೆಗೂ ಅವರೇ ಸಿಗುತ್ತಾರೆ. ಇನ್ನು ಏಜೆಂಟ್ರ ಮೂಲಕ ಹೋದರೆ ಇಲ್ಲಿ ನಿಮಿಷಗಳಲ್ಲಿಯೇ ಕೆಲಸ ಆಗುತ್ತದೆ. ಇಲ್ಲದಿದ್ದರೆ ತಹಶೀಲ್ದಾರರ ಕಚೇರಿ ಅಲೆದು ಅಲೆದು ನಿಮ್ಮ ಚಪ್ಪಲಿ ಸವೆಯುತ್ತದೆ. ಈ ಮೂಲಕ ಏಜೆಂಟ್ರ ಮೂಲಕ ಹಗಲು ದರೋಡೆಗೆ ಇಳಿದ್ರಾ ಅಧಿಕಾರಿಗಳು? ಎಂಬ ಪ್ರಶ್ನೆ ಮೂಡಿದೆ. ವಿವಾಹ, ಆಸ್ತಿ ನೊಂದಣಿ , ಪಹಣಿ, ಸೇರಿದಂತೆ ವಿವಿಧ ದಾಖಲೆ ನೀಡಲು ಹೊಟೇಲ್ ಮೇನುದಂತೆ ದರ ನಿಗದಿ ಮಾಡಿಕೊಂಡಿದ್ದಾರೆ ಈ ದಲ್ಲಾಳಿಗಳು. ಮಧ್ಯವರ್ತಿಗಳು ಇಲ್ಲದೇ ನೇರವಾಗಿ ಅಧಿಕಾರಿಗಳ ಬಳಿ ಹೋದರೆ ದಾಖಲೆ ನೀಡಲು ವಿಳಂಬ. ಅದೇ ಏಜೆಂಟ್ರ ಮೂಲಕ ಹೋದರೆ ಒಂದೇ ದಿನದಲ್ಲಿ ಬೇಕಾದ ದಾಖಲೆ ಕೈ ಸೇರುತ್ತದೆ. ಈ ಮಧ್ಯವರ್ತಿಗಳ ಹಾವಳಿಗೆ ಸಾರ್ವಜನಿಕರು ಹೈರಾಣಾಗಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos