ಮಂಡ್ಯ: ರೈತರಿಗೆ ಒಂದು ಮಾತು ಕೊಟ್ಟ ಹೆಚ್ಡಿ ಕುಮಾರಸ್ವಾಮಿ; ಏನದು?
ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ಲಕ್ಷ್ಮಣ ಎಂಬುವವರ ಜಮೀನಿನಲ್ಲಿ ಇಂದು(ಭಾನುವಾರ) ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಭತ್ತವನ್ನ ನಾಟಿ ಮಾಡಿದರು. ಬಳಿಕ ಮಾತನಾಡಿದ ಅವರು, 2018ರಲ್ಲೂ ಕಾವೇರಿ ಮಾತೆಗೆ ಪೂಜೆ ಮಾಡಿ ಭತ್ತ ನಾಟಿ ಮಾಡಿದ್ದೆ, ಅದರಂತೆ KRS ಡ್ಯಾಂ ಭರ್ತಿಯಾಗಿದೆ ಈ ಬಾರಿಯೂ ಭತ್ತ ನಾಟಿಗೆ ಬರಲು ಮನವಿ ಬಂತು, ರೈತರ ಮನವಿ ಮೇರೆಗೆ ಭತ್ತ ನಾಟಿಗೆ ಬಂದಿದ್ದೇನೆ ಎಂದರು.
ಮಂಡ್ಯ, ಆ.11: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ಲಕ್ಷ್ಮಣ ಎಂಬುವವರ ಜಮೀನಿನಲ್ಲಿ ಇಂದು(ಭಾನುವಾರ) ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಭತ್ತವನ್ನ ನಾಟಿ ಮಾಡಿದರು. ಬಳಿಕ ಮಾತನಾಡಿದ ಅವರು, 2018ರಲ್ಲೂ ಕಾವೇರಿ ಮಾತೆಗೆ ಪೂಜೆ ಮಾಡಿ ಭತ್ತ ನಾಟಿ ಮಾಡಿದ್ದೆ, ಅದರಂತೆ KRS ಡ್ಯಾಂ ಭರ್ತಿಯಾಗಿದೆ ಈ ಬಾರಿಯೂ ಭತ್ತ ನಾಟಿಗೆ ಬರಲು ಮನವಿ ಬಂತು, ರೈತರ ಮನವಿ ಮೇರೆಗೆ ಭತ್ತ ನಾಟಿಗೆ ಬಂದಿದ್ದೇನೆ ಎಂದರು. ಜೊತೆಗೆ ನನಗೆ ಮೂರು ಬಾರಿ ತಾಯಿ ಚಾಮುಂಡೇಶ್ವರಿ ಜನ್ಮ ಕೊಟ್ಟಿದ್ದಾಳೆ. ನನಗೆ ನನ್ನ ಆರೋಗ್ಯದ ಬಗ್ಗೆ ಚಿಂತೆಯಿಲ್ಲ, ನನ್ನ ನಾಡಿನ ರೈತರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಹಾಗೂ ನಮ್ಮ ಯುವಕರಿಗೆ ಉದ್ಯೋಗ ಕಲ್ಪಿಸಲು ಪ್ರಾಮಾಣಿಕಾಗಿ ಪ್ರಯತ್ನ ಮಾಡುತ್ತೇನೆ. ಇನ್ನು ಮಂಡ್ಯದಲ್ಲಿ ನೂರಾರು ಯುವಕರು ಉದ್ಯೋಗಕ್ಕಾಗಿ ನನ್ನ ಬಳಿ ಮನವಿ ಸಲ್ಲಿಸಿದ್ದೀರಿ, ನಿಮಗೆ ಒಂದು ಮಾತು ಕೊಡುತ್ತೇನೆ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಮಾತುಕತೆ ನಡೆಸಿದ್ದೇನೆ, ಅಲ್ಲಿ ನಿಮಗೆ ಉದ್ಯೋಗ ಕಲ್ಪಿಸುತ್ತೇನೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ