Manipur violence: ಮಣಿಪುರ ಪೊಲೀಸ್ ಮುಖ್ಯಸ್ಥ ಪಿ ಡೌಂಗೆಲ್ ವರ್ಗಾವಣೆ, ನೂತನ ಡಿಜಿಪಿಯಾಗಿ ರಾಜೀವ್ ಸಿಂಗ್ ನೇಮಕ

|

Updated on: Jun 01, 2023 | 1:26 PM

ಮಣಿಪುರ ಪೊಲೀಸ್ ಮುಖ್ಯಸ್ಥ (ಡಿಜಿಪಿ) ಪಿ ಡೌಂಗೆಲ್ ಅವರನ್ನು ಪೊಲೀಸ್ ಪಡೆ ಮುಖ್ಯಸ್ಥರನ್ನಾಗಿ ವರ್ಗಾವಣೆ ಮಾಡಲಾಗಿದೆ, ಇದೀಗ ಅವರ ಸ್ಥಾನಕ್ಕೆ ಅಂದರೆ ಮಣಿಪುರ ನೂತನ ಪೊಲೀಸ್ ಮುಖ್ಯಸ್ಥರಾಗಿ ರಾಜೀವ್ ಸಿಂಗ್ ನೇಮಕ ಮಾಡಲಾಗಿದೆ

Manipur violence: ಮಣಿಪುರ ಪೊಲೀಸ್ ಮುಖ್ಯಸ್ಥ ಪಿ ಡೌಂಗೆಲ್ ವರ್ಗಾವಣೆ, ನೂತನ ಡಿಜಿಪಿಯಾಗಿ ರಾಜೀವ್ ಸಿಂಗ್ ನೇಮಕ
ಸಾಂದರ್ಭಿಕ ಚಿತ್ರ
Follow us on

ಇಂಫಾಲ್: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಮಣಿಪುರ ಪೊಲೀಸ್ ಮುಖ್ಯಸ್ಥ (ಡಿಜಿಪಿ) ಪಿ ಡೌಂಗೆಲ್ ಅವರನ್ನು ಪೊಲೀಸ್ ಪಡೆ ಮುಖ್ಯಸ್ಥರನ್ನಾಗಿ ವರ್ಗಾವಣೆ ಮಾಡಲಾಗಿದೆ, ಇದೀಗ ಅವರ ಸ್ಥಾನಕ್ಕೆ ಅಂದರೆ ಮಣಿಪುರ ನೂತನ ಪೊಲೀಸ್ ಮುಖ್ಯಸ್ಥರಾಗಿ ರಾಜೀವ್ ಸಿಂಗ್ ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಮಣಿಪುರಕ್ಕೆ ಭೇಟಿ ಸಭೆಯನ್ನು ನಡೆಸಿ, ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ, ನ್ಯಾಯಂಗ ತನಿಖೆಗೆ ಆದೇಶ ನೀಡಿದ್ದಾರೆ. ಹೈಕೋರ್ಟ್​ನ ನಿವೃತ್ತಿ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸುವಂತೆ ಹೇಳಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ ಮಣಿಪುರದಲ್ಲಿ ಪೊಲೀಸ್ ಮುಖ್ಯಸ್ಥರ ಬದಲಾವಣೆಯಾಗಿದೆ. ತ್ರಿಪುರಾ ಕೇಡರ್‌ನ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಅಧಿಕಾರಿ ರಾಜೀವ್ ಸಿಂಗ್ ಅವರನ್ನು ಈಶಾನ್ಯ ರಾಜ್ಯಕ್ಕೆ ಹೊಸ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ನೇಮಿಸಲಾಗಿದೆ.

ಈ ಹಿಂದೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನ (CRPF) ಇನ್ಸ್‌ಪೆಕ್ಟರ್ ಜನರಲ್ ಆಗಿದ್ದ ಸಿಂಗ್ ಅವರನ್ನು ಮೇ 29 ರಂದು ಕೇಂದ್ರದಿಂದ ಮಣಿಪುರಕ್ಕೆ ಇಂಟರ್-ಕೇಡರ್ ಡೆಪ್ಯುಟೇಶನ್‌ನಲ್ಲಿ ಕಳುಹಿಸಲಾಗಿದೆ. ಈ ಕ್ರಮವನ್ನು ಗೃಹ ಸಚಿವಾಲಯದ (MHA) ಕಾರ್ಯತಂತ್ರ ಎಂದು ಹೇಳಲಾಗಿದೆ. ಹಿಂಸಾಚರವನ್ನು ತಡೆಗಟ್ಟಲು ಬುಡಕಟ್ಟು ಅಲ್ಲದ, ಮೈಟೆಯೇತರ ಪೊಲೀಸ್ ಮುಖ್ಯಸ್ಥರನ್ನು ಇಲ್ಲಿ ನೇಮಕ ಮಾಡುವುದು ಸೂಕ್ತ ಎಂದು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Manipur Violence Explainer: ದ್ವೇಷದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ ಮಣಿಪುರ, ಹಿಂಸಾಚಾರಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ಈಗಾಗಲೇ ಈಶಾನ್ಯ ರಾಜ್ಯ ಮಣಿಪುರದಲ್ಲಿ ಹಿಂಸಾಚಾರ ಪ್ರಕರಣಕ್ಕೆ  ಸಂಬಂಧಿಸಿದಂತೆ ಮಣಿಪುರ ಹಿಂಸಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶ ನೀಡಿದ್ದಾರೆ. ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾಜಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ ಮತ್ತು ಶಾಂತಿ ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ. ರಾಜ್ಯಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ ಅಮಿತ್​ ಶಾ ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ನಿರಾಶ್ರಿತರನ್ನು ಅವರ ಮನೆಗಳಿಗೆ ಹಿಂದಿರುಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಮಣಿಪುರ ಶಾಂತವಾಗಿದೆ . ನಾವು ಜನರಿಗೆ ಅಭಿವೃದ್ಧಿ ಮತ್ತು ಕಲ್ಯಾಣವನ್ನು ತಲುಪಿಸುತ್ತಿದ್ದೇವೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Thu, 1 June 23