AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಹೆಂಡತಿಯನ್ನು ಕೊಂದಿರುವೆ, ನೀನೂ ಸಾಯಿ! ಅದರಿಂದ ನಿನ್ನ ಹೆಂಡತಿ ನನ್ನವಳಾಗುತ್ತಾಳೆ- ಎಂದು ಜೋಡಿ ಕೊಲೆ ಮಾಡಿದ ಆರೋಪಿ

paramour: ವಿಚಾರಣೆ ವೇಳೆ ರಾವತ್‌ನನ್ನು ಕೊಂದಿರುವುದಾಗಿ ಅಕ್ಷಯ್ ಒಪ್ಪಿಕೊಂಡಿದ್ದಾನೆ. ರಾವತ್ ಅಕ್ಷಯ್‌ನನ್ನು ಕೊಲ್ಲಲು ಯತ್ನಿಸಿದ್ದು, ಅಕ್ಷಯ್ ಸತ್ತರೆ ಆತನ ಪತ್ನಿ ಮೀನಾ ತನ್ನವಳಾಗುತ್ತಾಳೆ ಎಂದು ರಾವತ್ ಬೆದರಿಕೆ ಹಾಕಿದ್ದಾನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.

ನನ್ನ ಹೆಂಡತಿಯನ್ನು ಕೊಂದಿರುವೆ, ನೀನೂ ಸಾಯಿ! ಅದರಿಂದ ನಿನ್ನ ಹೆಂಡತಿ ನನ್ನವಳಾಗುತ್ತಾಳೆ- ಎಂದು ಜೋಡಿ ಕೊಲೆ ಮಾಡಿದ ಆರೋಪಿ
ಜೋಡಿ ಕೊಲೆ ಮಾಡಿದ ಆರೋಪಿ
ಸಾಧು ಶ್ರೀನಾಥ್​
|

Updated on: Jun 01, 2023 | 1:22 PM

Share

ಸೂರತ್: ಎರಡು ಸಂಸಾರಗಳಲ್ಲಿ ವಿವಾಹೇತರ ಸಂಬಂಧ ವಿಸ್ಫೋಟಗೊಂಡಿದೆ. ಪತಿ ತನ್ನ ಸ್ನೇಹಿತನ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ( illicit relation) ಹೊಂದಿದ್ದ. ಆದರೆ ಈ ಬಗ್ಗೆ ಪತ್ನಿಯನ್ನು ಕೇಳಿದಾಗ, ಆಕೆ ಅದನ್ನು ನಿರಾಕರಿಸಿದ್ದಾಳೆ. ಇದರಿಂದ ವ್ಯಗ್ರಗೊಂಡ ಪತಿರಾಯ ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮುಂದಿನ ಹಂತದಲ್ಲು ಕೆಲವೇ ಗಂಟೆಗಳಲ್ಲಿ ಸ್ನೇಹಿತನನ್ನೂ (paramour) ಕೊಂದಿದ್ದಾನೆ. ಸೋಮವಾರ ಗುಜರಾತ್ ನಲ್ಲಿ ಈ ಭಯಾನಕ ಘಟನೆ ನಡೆದಿದೆ. ಸೂರತ್ (Surat) ಪೊಲೀಸ್ ಕಮಿಷನರ್ ಅಜಯ್ ಕುಮಾರ್ ತೋಮರ್ ಅವರು ಬಹಿರಂಗಪಡಿಸಿದ ವಿವರಗಳ ಪ್ರಕಾರ…

ವಿಚಿತ್ರ ಏನೆಂದರೆ.. ಸೂರತ್‌ನ ಪಾಲನ್‌ಪುರ ಪ್ರದೇಶದ ಕಾಶಿಕ್ ರಾವತ್ ಮತ್ತು ಕಲ್ಪನಾ ಒಂದು ವರ್ಷದ ಹಿಂದೆ ವಿವಾಹವಾದರು. ಕೌಶಿಕ್ ರಾವತ್ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆದರೆ ರಾವತ್ ಗೆ ಅಕ್ಷಯ್ ಕತಾರ ಎಂಬ ಸ್ನೇಹಿತನಿದ್ದಾನೆ. ಇವ ವೃತ್ತಿಯಲ್ಲಿ ಪ್ಲಂಬರ್. ಅಕ್ಷಯ್ ಒಂದು ತಿಂಗಳ ಹಿಂದೆ ಮೀನಾ ಎಂಬಾಕೆಯನ್ನು ಮದುವೆಯಾಗಿದ್ದ. ಅಕ್ಷಯ್ ಕೂಡ ಸೂರತ್ ಗೆ ಬಂದು ತನ್ನ ಸ್ನೇಹಿತ ರಾವತ್ ಮನೆಯಲ್ಲಿ ತಂಗಿದ್ದ. ಹೀಗಿರುವಾಗ ರಾವತ್ ತನ್ನ ಸ್ನೇಹಿತನ ಪತ್ನಿ ಮೀನಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ.

ಈ ಮಧ್ಯೆ, ರಾವತ್ ನ ಪತ್ನಿ ಕಲ್ಪನಾ ತನ್ನ ಪತಿಯ ಅನೈತಿಕ ಸಂಬಂಧವನ್ನು ಕಂಡು ಖಂಡಿಸಿದ್ದಾಳೆ. ಈ ವಿಚಾರವಾಗಿ ರಾವತ್ ಮತ್ತು ಅವರ ಪತ್ನಿ ಕಲ್ಪನಾ ನಿತ್ಯ ಜಗಳವಾಡುತ್ತಿದ್ದರು. ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುವಂತೆ ಗಂಡನಿಗೆ ತಾಕೀತು ಮಾಡುತ್ತಿದ್ದಳು. ಎಷ್ಟು ಸಾರಿ ಹೇಳಿದರೂ ಬದಲಾಗಲಿಲ್ಲ ಕೊನೆಗೆ ಕಲ್ಪನಾ, ಅಕ್ಷಯ್ ನಿಗೆ ಇರುವ ವಿಷಯ ಹೇಳಿದಳು. ಸೋಮವಾರ ಈ ವಿಚಾರವಾಗಿ ಅಕ್ಷಯ್ ಮತ್ತು ಮೀನಾ ನಡುವೆ ಜಗಳವಾಗಿದ್ದು, ಮೀನಾ ತನ್ನ ತಾಯಿಯ ಮನೆಗೆ ಹೋಗಿದ್ದಳು. ಅಕ್ಷಯ್ ಕೂಡ ಹೆಂಡತಿಯೊಂದಿಗೆ ಹೊರಟು ಹೋದ.

ಜೋಡಿ ಕೊಲೆಗಳು ನಡೆದ ರೀತಿ… ಬಳಿಕ ಮನೆಯಲ್ಲಿದ್ದ ರಾವತ್ ಹಾಗೂ ಕಲ್ಪನಾ ಈ ವಿಚಾರವಾಗಿ ಮತ್ತೆ ಜಗಳವಾಡಿದ್ದಾರೆ. ಈ ವೇಳೆ ಕಲ್ಪನಾಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ಸೀಲಿಂಗ್ ಕೊಕ್ಕೆಯಿಂದ ಶವವನ್ನು ನೇಣು ಹಾಕಿದ್ದಾನೆ. ಅಕ್ಷಯ್ ಹಿಂತಿರುಗಿದಾಗ, ಕಲ್ಪನಾಳ ದೇಹವು ಸೀಲಿಂಗ್‌ನಿಂದ ನೇತಾಡುತ್ತಿತ್ತು. ಪಕ್ಕದಲ್ಲಿ ಕುಳಿತ ರಾವತ್ ನನ್ನು ನೋಡಿ… ಹೆಂಡತಿಯನ್ನು ಕೊಲೆ ಮಾಡಿರಬೇಕು ಎಂದುಕೊಂಡಿದ್ದಾನೆ. ಇಬ್ಬರೂ ಸ್ನೇಹಿತರು ಸೇರಿಕೊಂಡು ಕಲ್ಪನಾ ಮೃತದೇಹವನ್ನು ಗೋಣಿ ಚೀಲದಲ್ಲಿ ಹಾಕಿ ಚೌಕ್ ಬಜಾರ್‌ನ ಪೂಲ್ಪಾಡ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ತಾಪಿ ನದಿಯ ಅಣೆಕಟ್ಟಿನ ಗೋಡೆಯ ಬಳಿಯ ಪೊದೆಗಳಲ್ಲಿ ಮೃತದೇಹವನ್ನು ಎಸೆದಿದ್ದಾರೆ. ನಂತರ ಅಕ್ಷಯ್ ತನ್ನ ಸ್ನೇಹಿತ ರಾವತ್ ತಾಪಿಯನ್ನು ನದಿ ದಡಕ್ಕೆ ಕರೆದೊಯ್ದು ತಲೆಗೆ ಕಲ್ಲಿನಿಂದ ಹೊಡೆದು ಕೊಂದಿದ್ದಾನೆ.

Also Read: ಸೊಸೆಯ ಮೇಲೆ ಮೋಹ ಬೆಳೆಸಿಕೊಂಡ ಚಿಕ್ಕಪ್ಪ.. ಮಗ ಮನೆಯಲ್ಲಿ ಇಲ್ಲದಾಗ ಸುಖ ಸಂತೋಷ ಅನುಭವಿಸಿದ! ಕೊನೆಗೆ ದುರಂತಗಳು ನಡೆದೇ ಹೋದವು

ಚೌಕ್ ಬಜಾರ್ ಪೊಲೀಸರು ಸೂರತ್‌ನ ಪೂಲ್ಪಾಡಾ ಪ್ರದೇಶದ ಬಳಿಯ ತಾಪಿ ನದಿ ಅಣೆಕಟ್ಟಿನ ಗೋಡೆಯಿಂದ ಮಹಿಳೆಯ ಮೃತ ದೇಹವನ್ನು ವಶಪಡಿಸಿಕೊಂಡ ದಿನವೇ ಆರೋಪಿ ಅಕ್ಷಯ್‌ನನ್ನು ಬಂಧಿಸಿದ್ದಾರೆ. ನಂತರ ಪೊಲೀಸರಿಗೆ ತಾಪಿ ನದಿಯ ದಡದಲ್ಲಿ ಮತ್ತೊಬ್ಬ ವ್ಯಕ್ತಿಯ ಶವ ದೊರೆತಿದೆ. ಜೋಡಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಅವಳಿ ಕೊಲೆಗಳ ತನಿಖೆಯಲ್ಲಿ ದಾಹೋದ್‌ನ ಅಕ್ಷಯ್ ಕತಾರಾ ಆರೋಪಿ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಪೊಲೀಸರು ಅಕ್ಷಯ್ ನನ್ನು ಬಂಧಿಸಿದ್ದಾರೆ.

ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದ ಅಕ್ಷಯ್: ವಿಚಾರಣೆ ವೇಳೆ ರಾವತ್‌ನನ್ನು ಕೊಂದಿರುವುದಾಗಿ ಅಕ್ಷಯ್ ಒಪ್ಪಿಕೊಂಡಿದ್ದಾನೆ. ರಾವತ್ ಅಕ್ಷಯ್‌ನನ್ನು ಕೊಲ್ಲಲು ಯತ್ನಿಸಿದ್ದು, ಅಕ್ಷಯ್ ಸತ್ತರೆ ಆತನ ಪತ್ನಿ ಮೀನಾ ತನ್ನವಳಾಗುತ್ತಾಳೆ ಎಂದು ರಾವತ್ ಬೆದರಿಕೆ ಹಾಕಿದ್ದಾನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಅದರಿಂದ ರಕ್ಷಿಸಿಕೊಳ್ಳಲು ರಾವತ್‌ನನ್ನು ಕೊಂದಿರುವುದಾಗಿ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಪಿವೈ ಚಿಟ್ಟೆ ಬಳಿ ಆರೋಪಿ ಅಕ್ಷಯ್ ಹೇಳಿದ್ದಾನೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ