Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಸೆಯ ಮೇಲೆ ಮೋಹ ಬೆಳೆಸಿಕೊಂಡ ಚಿಕ್ಕಪ್ಪ.. ಮಗ ಮನೆಯಲ್ಲಿ ಇಲ್ಲದಾಗ ಸುಖ ಸಂತೋಷ ಅನುಭವಿಸಿದ! ಕೊನೆಗೆ ದುರಂತಗಳು ನಡೆದೇ ಹೋದವು

illicit relation: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಸಿಟ್ಟಿಗೆದ್ದ ಮಗ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇನ್ನೊಂದು ವಿಷಯ ಏನೆಂದರೆ, ಈ ವಿಷಯ ತಿಳಿದ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ!

ಸೊಸೆಯ ಮೇಲೆ ಮೋಹ ಬೆಳೆಸಿಕೊಂಡ ಚಿಕ್ಕಪ್ಪ.. ಮಗ ಮನೆಯಲ್ಲಿ ಇಲ್ಲದಾಗ ಸುಖ ಸಂತೋಷ ಅನುಭವಿಸಿದ! ಕೊನೆಗೆ ದುರಂತಗಳು ನಡೆದೇ ಹೋದವು
ವಿಷಯ ತಿಳಿದ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 29, 2023 | 5:40 PM

ಇಂದಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೆಂಡತಿಗೆ ತಿಳಿಯದಂತೆ ಗಂಡ .. ಗಂಡನಿಗೆ ತಿಳಿಯದಂತೆ ಹೆಂಡತಿ ಇಂತಹ ಸಂಬಂಧಗಳನ್ನು ಇಟ್ಟುಕೊಂಡು ಕಾಮಸುಖದ ಲೋಲುಪತೆಯಲ್ಲಿ (illicit relation) ಓಲಾಡುತ್ತಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ಇಂತಹುದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ವಂತ ಸೊಸೆಯ ಮೇಲೆಯೇ ಮನಸೋತಿದ್ದ ಚಿಕ್ಕಪ್ಪನನ್ನು ಮಗನೇ (Son, Father) ಬರ್ಬರವಾಗಿ ಕೊಂದಿದ್ದಾನೆ (Murder). ವಿವರಗಳಿಗೆ ಹೋಗುವುದಾದರೆ, ಉತ್ತರ ಪ್ರದೇಶದ ಭೂತ್ ಬಂಧನಿ ಗ್ರಾಮದ (Uttar Pradesh) ದರೋಗ್ ಸಿಂಗ್ ಎಂಬ ವ್ಯಕ್ತಿಯ ಮಗ ಧುರ್ವೆಯಲ್ಲಿ ಸಂಜಯ್ ಜೊತೆ ವಾಸಿಸುತ್ತಿದ್ದಾನೆ. ಆದರೆ ಸಂಜಯ್ ಈ ಹಿಂದೆ ಯುವತಿಯನ್ನು ಮದುವೆಯಾಗಿದ್ದ. ಅಂದಿನಿಂದ ಮೂವರೂ ಒಟ್ಟಿಗೆ ಇದ್ದರು. ಮಗ ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುತ್ತಿದ್ದ. ಹೀಗಿರುವಾಗ ಚಿಕ್ಕಪ್ಪ ಸುಂದರ ಸೊಸೆಯ ಮೇಲೆ ಕಣ್ಣು ಹಾಕಿಬಿಟ್ಟ. ಮನಸು ಅವಳ ಮೇಲೆ ನೆಟ್ಟ. ವರ್ಷಗಳು ಕಳೆದಂತೆ ಸೊಸೆಗೂ ಚಿಕ್ಕಪ್ಪನ ಮೇಲೆ ಒಲವು ಮೂಡಿತು. ಮಗ ಇಲ್ಲದಿದ್ದಾಗ ತಂದೆ-ಸೊಸೆ ಸಮಾಗಮವಾಗಿ, ಖುಷಿಯಿಂದ ಕಾಲ ಕಳೆಯುತ್ತಿದ್ದರು.

ವಿಷಯ ತಿಳಿದ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ!

ಆದರೆ ಕೆಲವು ವರ್ಷಗಳ ನಂತರ ಸಂಜಯ್ ತನ್ನ ತಂದೆ ಮತ್ತು ಹೆಂಡತಿಯ ಮೇಲೆ ಅನುಮಾನಗೊಂಡನು. ಕೊನೆಗೆ ಅವರ ಮೇಲೆ ಬೇಹುಗಾರಿಕೆ ನಡೆಸಿದ. ತಂದೆಯೇ ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ತಿಳಿದು ಕೋಪೋದ್ರಿಕ್ತಗೊಂಡನು. ತನ್ನ ತಂದೆಯನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ಪ್ಲಾನ್ ಮಾಡಿದ ಸಂಜಯ್, ದರೋಗ್ ಜೊತೆ ಮಾತನಾಡಲು ಒಂದು ಸ್ಥಳಕ್ಕೆ ಕರೆದೊಯ್ದ.

ಅಲ್ಲಿಗೆ ಹೋದ ಬಳಿಕ ತಂದೆಯನ್ನು ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಸಿಟ್ಟಿಗೆದ್ದ ಮಗ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇನ್ನೊಂದು ವಿಷಯ ಏನೆಂದರೆ, ಈ ವಿಷಯ ತಿಳಿದ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ! ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಆರೋಪಿ ಸಂಜಯ್‌ನನ್ನು ಬಂಧಿಸಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ