AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಕಳೆದ 24 ಗಂಟೆಗಳಲ್ಲಿ 6 ಮಂದಿ ಸಾವು

ಮಣಿಪುರ ಹಿಂಸಾಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಕಳೆದ 24 ಗಂಟೆಗಳಲ್ಲಿ 6 ಮಂದಿ ಸಾವು
ಮಣಿಪುರ ಹಿಂಸಾಚಾರImage Credit source: Mint
ನಯನಾ ರಾಜೀವ್
|

Updated on: Aug 06, 2023 | 11:08 AM

Share

ಮಣಿಪುರ ಹಿಂಸಾಚಾರ(Manipur Violence) ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಂದೆ-ಮಗ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ಮುಂಜಾನೆಯಿಂದ ಬಿಷ್ಣುಪುರ್-ಚುರಾಚಂದ್‌ಪುರ ಗಡಿ ಪ್ರದೇಶಗಳಲ್ಲಿ ಹಗಲಿಡೀ ನಡೆದ ದಾಳಿಗಳಲ್ಲಿ ಸುಮಾರು 16 ಜನರು ಗಾಯಗೊಂಡಿದ್ದಾರೆ .

ಸೇನೆಯು ಈ ಪ್ರದೇಶದಲ್ಲಿ ಪ್ರಮುಖ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಇಂದು ಯಾವುದೇ ಕರ್ಫ್ಯೂ ಸಡಿಲಿಕೆ ಇರುವುದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶನಿವಾರ ಮಣಿಪುರದಲ್ಲಿ ಹದಿನೈದು ದಿನಗಳಲ್ಲಿ ಅತ್ಯಂತ ಮಾರಣಾಂತಿಕ ದಿನವಾಗಿದೆ.

ಬಿಷ್ಣುಪುರ್ ಜಿಲ್ಲೆಯ ತೆರಾಖೋಂಗ್ಸಾಂಗ್ಬಿಯಲ್ಲಿ ಏಕಕಾಲದಲ್ಲಿ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸ್ ಕಮಾಂಡೋ ಸೇರಿದಂತೆ ಮೂವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, 3 ಜನ ಸಾವು

ಇಂಫಾಲ್ ಪೂರ್ವ ಜಿಲ್ಲೆಯ ಸನಾಸಾಬಿ ಮತ್ತು ಥಮ್ನಾಪೋಕ್ಪಿ ಗ್ರಾಮಗಳಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇಂಫಾಲ್ ಪಶ್ಚಿಮ ಜಿಲ್ಲೆಯ ಲಾಂಗೋಲ್‌ನಲ್ಲಿ ಅಪರಿಚಿತ ಗುಂಪುಗಳು ಮನೆಗಳನ್ನು ಸುಟ್ಟು ಹಾಕಿವೆ. ಈ ಹತ್ಯೆಯ ವಿರುದ್ಧ ಇಂಫಾಲದಲ್ಲೂ ಭಾರೀ ಪ್ರತಿಭಟನೆಗಳು ನಡೆದವು. ಮಣಿಪುರದಲ್ಲಿ ಕುಕಿ ಹಾಗೂ ಮೈಥಿ ಸಮುದಾಯದ ನಡುವೆ ಕಲಹ ಹುಟ್ಟಿಕೊಂಡಿದ್ದು, ಹಿಂಸಾಚಾರ ರೂಪ ತಳೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ