Manipur Violence: ಅನಿವಾರ್ಯವಾಗಿ ಮಹಿಳೆಯರ ಒತ್ತಾಯಕ್ಕೆ ಮಣಿದು 12 ಉಗ್ರರ ಬಿಡುಗಡೆ ಮಾಡಿದ ಸೇನೆ

|

Updated on: Jun 25, 2023 | 10:00 AM

ಮಣಿಪುರ(Manipur)ದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ಇನ್ನೂ ನಿಂತಿಲ್ಲ, ಹಿಂಸಾಚಾರ ನಿಯಂತ್ರಿಸಲು ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ.

Manipur Violence: ಅನಿವಾರ್ಯವಾಗಿ ಮಹಿಳೆಯರ ಒತ್ತಾಯಕ್ಕೆ ಮಣಿದು 12 ಉಗ್ರರ ಬಿಡುಗಡೆ ಮಾಡಿದ ಸೇನೆ
ಮಣಿಪುರ
Image Credit source: Indian Express
Follow us on

ಮಣಿಪುರ(Manipur)ದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ಇನ್ನೂ ನಿಂತಿಲ್ಲ, ಹಿಂಸಾಚಾರ ನಿಯಂತ್ರಿಸಲು ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ. ಶಾಂತಿಯನ್ನು ಪುನಃಸ್ಥಾಪಿಸಲು ಸರ್ಕಾರವು ಸೇನೆಯನ್ನು ಮುಂದಿರಿಸಿದೆ. ಮಹಿಳಾ ಗುಂಪಿನ ಒತ್ತಾಯದ ಮೇರೆಗೆ 12 ಉಗ್ರರನ್ನು ಅನಿವಾರ್ಯವಾಗಿ ಬಿಟ್ಟುಕಳುಹಿಸಬೇಕಾಯಿತು. ಭದ್ರತಾ ಪಡೆಗಳು ಉಗ್ರರಿಂದ ವಶಪಡಿಸಿಕೊಂಡ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಉಗ್ರರನ್ನು ರಕ್ಷಿಸಲು ಮಹಿಳೆಯರು ಮುಂದಾಗಿರುವುದು ಇದೇ ಮೊದಲೇನಲ್ಲ.ಈ ಹಿಂದೆಯೂ ಇಂತಹ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಮಹಿಳೆಯರ ನೇತೃತ್ವದ ಸುಮಾರು 1,500 ಜನರ ಗುಂಪೊಂದು ಅವರನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ವಿಫಲಗೊಳಿಸಿದ ನಂತರ 12 ಉಗ್ರರನ್ನು ಬಿಡಬೇಕಾಯಿತು.

ಮಣಿಪುರದಲ್ಲಿ ಮೀಸಲು ವಿಚಾರದಲ್ಲಿ ಆದಿವಾಸಿ ಪಂಗಡಗಳ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾಕಷ್ಟು ಗಲಭೆಗಳು ಸಂಭವಿಸಿವೆ. ನೂರಾರು ಮಂದಿ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: Manipur violence: ಮಣಿಪುರ ಹಿಂಸಾಚಾರ: ಸಚಿವರ ಒಡೆತನದ ಖಾಸಗಿ ಗೋಡೌನ್‌ಗೆ ಬೆಂಕಿ ಹಚ್ಚಿದ ಜನರ ಗುಂಪು

ಏಕಾಏಕಿ ಉಗ್ರರನ್ನು ವಶಕ್ಕೆ ಪಡೆದಿದ್ದನ್ನು ವಿರೋಧಿಸಿದ ಸೇನೆಯನ್ನು ಮಹಿಳೆಯರು ಭಾರಿ ಸಂಖ್ಯೆಯಲ್ಲಿ ಸುತ್ತುವರೆದಿದ್ದರು.
ಮಹಿಳೆಯರ ಒತ್ತಾಯಕ್ಕೆ ಮಣಿದ ಸೇನೆ ಎಲ್ಲಾ 12 ಉಗ್ರರನ್ನು ಬಿಡುಗಡೆ ಮಾಡಿದೆ.

ಹಲವು ದಾಳಿಗಳಲ್ಲಿ ಕೆಂಗ್ಲೆ ಯಾವೋಲ್ ಕನ್ನಾ ಲುಪ್ ಗುಂಪು ಭಾಗಿಯಾಗಿತ್ತು. 7 ವರ್ಷಗಳ ಹಿಂದೆ ನಡೆದ ಡೋಗ್ರಾ ಘಟಕದ ಮೇಲೂ ದಾಳಿ ಮಾಡಿತ್ತು, ಈ ಕುರಿತು ವಿಚಾರಣೆ ನಡೆಸಿ ಉಗ್ರರನ್ನು ವಶಕ್ಕೆ ಪಡೆಯಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ