ಮಣಿಪುರ(Manipur)ದಲ್ಲಿ ಕಳೆದ ಒಂದು ತಿಂಗಳಿಂದ ಹಿಂಸಾಚಾರ ಭುಗಿಲೆದ್ದಿದೆ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದೀಗ ಮಣಿಪುರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಗಾಲ್ಯಾಂಡ್ನ ಕೊಹಿಮಾ ಬಳಿ ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಎರಡು ಪಿಸ್ತೂಲು, ನಾಲ್ಕು ಮ್ಯಾಗಜಿನ್ಗಳು, ಸ್ಫೋಟಕಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಸ್ಸಾಂ ರೈಫಲ್ಸ್ ಹಾಗೂ ಕೊಹಿಮಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಗುಪ್ತಚರ ಮಾಹಿತಿ ಮೇರೆಗೆ ಜೂನ್ 26ರಂದು ಬೆಳಗಿನ ಜಾವ 2 ಗಮಟೆ ವೇಳೆಗೆ ಅಸ್ಸಾಂ ರೈಫಲ್ಸ್ ಮತ್ತು ಕೊಹಿಮಾ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.ಕಾರ್ಯಾಚರಣೆಯಲ್ಲಿ ವಾಹನವನ್ನು ಮೊದಲು ಪತ್ತೆ ಹಚ್ಚಿದರು ಬಳಿಕ ಸತತ 4 ಗಂಟೆಗಳ ಕಾಲ ಕಣ್ಣಿಡಲಾಗಿತ್ತು.
ಮತ್ತಷ್ಟು ಓದಿ: Manipur violence: ಮಣಿಪುರ ಹಿಂಸಾಚಾರ: ಸಚಿವರ ಒಡೆತನದ ಖಾಸಗಿ ಗೋಡೌನ್‌ಗೆ ಬೆಂಕಿ ಹಚ್ಚಿದ ಜನರ ಗುಂಪು
ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಂಟಿ ತಂಡವು ವಾಹನವನ್ನು ಶೋಧಿಸಿ ಎರಡು ಪಿಸ್ತೂಲ್‌ಗಳು, ನಾಲ್ಕು ಮ್ಯಾಗಜೀನ್‌ಗಳು, ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಮಣಿಪುರದಲ್ಲಿ ಹಿಂಸಾಚಾರವನ್ನು ಮುಂದುವರೆಸಲು ನಡೆಸಿದ್ದ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ