ಮಣಿಪುರ(Manipur)ದಲ್ಲಿ ಭಾನುವಾರ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸ್ ಸೇರಿದಂತೆ 5 ಮಂದಿ ಮೃತಪಟ್ಟಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವು ಕನಿಷ್ಠ 70 ಮಂದಿಯನ್ನು ಬಲಿಪಡೆದಿದೆ.
ಹಿಂಸಾಚಾರ ಪೀಡಿತ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಗಂಟೆಗಳ ಮೊದಲು ಇದು ಸಂಭವಿಸಿದೆ. ಗೃಹ ಸಚಿವ ಅಮಿತ್ ಶಾ ಇಂದು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಅವರು ಶಾಂತ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಕೂಡ ಶನಿವಾರ ಮಣಿಪುರಕ್ಕೆ ತೆರಳಿ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿದರು.
ಹಿಂಸಾಚಾರ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಸರ್ಕಾರವು ಹಲವಾರು ಪ್ರದೇಶಗಳಲ್ಲಿ ಕರ್ಫ್ಯೂ ಮತ್ತು ಇಂಟರ್ನೆಟ್ ನಿಷೇಧವನ್ನು ವಿಧಿಸಿದೆ. ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರ ರಾಜ್ಯದ ಹಲವು ಪ್ರದೇಶಗಳಲ್ಲಿ ಎಂಟು ಗಂಟೆಗಳ ಕಾಲ ಪೊಲೀಸ್ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ 40 ಮಂದಿ ಬಂಡುಕೋರರನ್ನು ಹತ್ಯೆಮಾಡಲಾಗಿದೆ.
ಮತ್ತಷ್ಟು ಓದಿ: Manipur: ಮಣಿಪುರದಲ್ಲಿ ಕಮಾಂಡೋ ಕಾರ್ಯಾಚರಣೆ; ಕೆಲವೇ ಗಂಟೆಯಲ್ಲಿ 40 ಮಂದಿ ಎನ್ಕೌಂಟರ್
ಭಯೋತ್ಪಾದಕರು ನಾಗರಿಕರ ವಿರುದ್ಧ M-16 ಮತ್ತು AK-47 ರೈಫಲ್‌ಗಳು ಮತ್ತು ಸ್ನೈಪರ್ ಗನ್‌ಗಳನ್ನು ಬಳಸುತ್ತಿದ್ದಾರೆ. ಜನರ ಮನೆಗಳನ್ನು ಸುಟ್ಟುಹಾಕಲು ಹಳ್ಳಿಗಳಿಗೆ ನುಗ್ಗಿದ್ದರು. ನಾವು ಸೇನೆ ಮತ್ತು ಇತರ ಭದ್ರತಾ ಪಡೆಗಳ ಸಹಾಯದಿಂದ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ಸುಮಾರು 40 ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿರುವ ವರದಿಗಳು ನಮಗೆ ಸಿಕ್ಕಿವೆ” ಎಂದು ತಿಳಿಸಿದರು.
ಈ ಬೆಳವಣಿಗೆಯು ರಾಜ್ಯದಲ್ಲಿ ಮೈತಿ ಸಮುದಾಯ ಮತ್ತು ಗುಡ್ಡಗಾಡು ಬುಡಕಟ್ಟುಗಳ ನಡುವಿನ ಹಳೆಯ ಜನಾಂಗೀಯ ದ್ವೇಷವನ್ನು ಮತ್ತೆ ಕೆಣಕಿದಂತಾಗಿದೆ. ಹೆಚ್ಚಿನ ರಕ್ಷಣೆಗಾಗಿ ತಮ್ಮನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂದು ಮೈತಿಗಳು ಬಹುಕಾಲದಿಂದ ಬೇಡಿಕೆಯಿಟ್ಟಿದ್ದರೆ, ರಾಜ್ಯದ ಬುಡಕಟ್ಟು ಜನಾಂಗದವರು, ವಿಶೇಷವಾಗಿ ನಾಗಾಗಳು ಮತ್ತು ಕುಕಿಗಳು – ಇದನ್ನು ಬಲವಾಗಿ ವಿರೋಧಿಸಿದ್ದಾರೆ. ಮೈತಿಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಿದರೆ ಇದು ನಮ್ಮ ಭೂಮಿಯನ್ನು ಕಸಿದುಕೊಳ್ಳುತ್ತದೆ ಎಂದು ಬುಡಕಟ್ಟು ಜನಾಂಗದವರು ಹೇಳುತ್ತಾರೆ.
ಹಿಂಸಾಚಾರಕ್ಕೆ ತಕ್ಷಣದ ಪ್ರಚೋದನೆಯು ರಾಜ್ಯದ ಮೈತಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದನ್ನು ಪ್ರತಿಭಟಿಸಿ ನಡೆಸಿದ ಬುಡಕಟ್ಟು ಜನಾಂಗದ ಮೆರವಣಿಗೆಯಿಂದ ಹುಟ್ಟಿಕೊಂಡಿದೆಯಾದರೂ, ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕುಕಿ ಬುಡಕಟ್ಟು ಗುಂಪುಗಳು ಈ ಮೊದಲೇ ಅಸಮಾಧಾನ ಹೊಂದಿದ್ದವರು.
ಪೂರ್ವಜರ ಅರಣ್ಯ ಭೂಮಿ, ಚರ್ಚ್ ಧ್ವಂಸಗಳು, ಕುಕಿ ಬುಡಕಟ್ಟು ಜನರಲ್ಲಿ ನೆರೆಯ ಮ್ಯಾನ್ಮಾರ್‌ನ ಅಕ್ರಮ ವಲಸಿಗರು ಸೇರಿದ್ದಾರೆ ಎಂದು ಸರ್ಕಾರ ನಡೆಸಿದ ತೆರವು ಕಾರ್ಯಾಚರಣೆಗಳ ಬಗ್ಗೆ ಅತೃಪ್ತಿ ಹೊಂದಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ