Pakistan: ನೀವು ಒಗ್ಗಟ್ಟಾದ್ರೆ ಪಾಕಿಸ್ತಾನವನ್ನೂ ಹಿಂದೂ ದೇಶ ಮಾಡಬಹುದು: ಬಾಗೇಶ್ವರ್ ಧಾಮ್ ಮುಖ್ಯಸ್ಥರ ಹೇಳಿಕೆ

Acharya Dhirendra Shastri: ಜನರು ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಮಾಡಬಹುದು. ಭಾರತ ಅಥವಾ ಪಾಕಿಸ್ತಾನವನ್ನು ಹಿಂದೂ ದೇಶವನ್ನಾಗಿಯೂ ಮಾಡಬಹುದು ಎಂದು ಬಾಗೇಶ್ವರ್ ಧಾಮ್ ಟ್ರಸ್ಟ್ ಮುಖ್ಯಸ್ಥ ಧೀರೇಂದ್ರ ಶಾಸ್ತ್ರಿ ಹೇಳಿದ್ದಾರೆ.

Pakistan: ನೀವು ಒಗ್ಗಟ್ಟಾದ್ರೆ ಪಾಕಿಸ್ತಾನವನ್ನೂ ಹಿಂದೂ ದೇಶ ಮಾಡಬಹುದು: ಬಾಗೇಶ್ವರ್ ಧಾಮ್ ಮುಖ್ಯಸ್ಥರ ಹೇಳಿಕೆ
ಆಚಾರ್ಯ ಧೀರೇಂದ್ರ ಶಾಸ್ತ್ರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2023 | 7:01 PM

ಸೂರತ್: ಮಧ್ಯಪ್ರದೇಶದ ಬಾಗೇಶ್ವರ್ ಧಾಮ್ ಟ್ರಸ್ಟ್​ನ ಮುಖ್ಯಸ್ಥ ಆಚಾರ್ಯ ಧೀರೇಂದ್ರ ಶಾಸ್ತ್ರಿ (Acharya Dhirendra Shastri) ಇದೀಗ ಮತ್ತೊಮ್ಮೆ ಹಿಂದುತ್ವದ ಪುನಶ್ಚೇತನದ ಬಗ್ಗೆ ಮಾತನಾಡಿದ್ದಾರೆ. ಗುಜರಾತ್​ನ ಸೂರತ್ ನಗರದಲ್ಲಿ ನಡೆಸಿದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಧಿರೇಂದ್ರ ಶಾಸ್ತ್ರಿ, ಪಾಕಿಸ್ತಾನವನ್ನು ಬೇಕಾದರೆ ಹಿಂದೂ ರಾಷ್ಟ್ರವಾಗಿ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಜನರು ಒಗ್ಗಟ್ಟು ತೋರಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವರು ಪಾಕಿಸ್ತಾನವನ್ನು ಹಿಂದೂ ರಾಷ್ಟ್ರವಾಗಿ ಮಾಡಬಹುದು ಎಂದು ನಿದರ್ಶನ ಕಲ್ಪಿಸಿದ್ದಾರೆ.

ಗುಜರಾತ್ ರಾಜ್ಯದ ಜನರಿಂದ ತನಗೆ ಹಣವಾಗಲೀ, ಹೆಸರಾಗಲೀ ಮಾಡುವ ಉದ್ದೇಶ ಇಲ್ಲ. ಹಿಂದುತ್ವದ ಅಡಿಯಲ್ಲಿ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸುವುದು ನನ್ನ ಪ್ರಯತ್ನ. ನೀವು ಹಿಂದೂಗಳು ಒಗ್ಗಟ್ಟಾಗಿದ್ದರೆ ಭಾರತವನ್ನಾಗಲೀ ಅಥವಾ ಪಾಕಿಸ್ತಾನವನ್ನಾಗಲೀ ಹಿಂದೂ ದೇಶವಾಗಿ ಮಾಡಬಹುದು ಎಂದು ಬಾಗೇಶ್ವರ್ ಧಾಮ್ ಸರ್ಕಾರ್ ಎಂದು ಖ್ಯಾತರಾಗಿರುವ ಧೀರೇಂದ್ರ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಕೆಲವರು ಭಾರತ ದೇಶವನ್ನು ಹಿಂದೂ ರಾಷ್ಟ್ರವಾಗಿ ಹೇಗೆ ಮಾಡುತ್ತೀರಿ ಎಂದು ಕೇಳುತ್ತಾರೆ. ಭಾರತ ಈಗಾಗಲೇ ಹಿಂದೂ ರಾಷ್ಟ್ರವೇ ಆಗಿದೆ. ಮುಂದೆಯೂ ಹಿಂದೂ ದೇಶವಾಗಿಯೇ ಮುಂದುವರಿಯುತ್ತದೆ ಎಂದು ಬಾಗೇಶ್ವರ್ ಧಾಮ್ ಪೀಠದ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿManipur: ಮಣಿಪುರದಲ್ಲಿ ಕಮಾಂಡೋ ಕಾರ್ಯಾಚರಣೆ; ಕೆಲವೇ ಗಂಟೆಯಲ್ಲಿ 40 ಮಂದಿ ಎನ್​ಕೌಂಟರ್

ಅಯೋಧ್ಯೆ ಆಯ್ತು, ಈಗ ಮಥುರಾದ ಸರದಿ ಎಂದ ಶಾಸ್ತ್ರಿ

ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣ ಆಗುತ್ತಿದೆ. ಇದು ಹಿಂದೂಗಳಿಗೆ ಸಿಕ್ಕ ಗೆಲುವು. ಈಗ ಮಥುರಾದ ಸರದಿ ಇದೆ. ಸನಾತನಿಗಳು ಮತ್ತೆ ಎಚ್ಚೆತ್ತು ಮಥುರಾದಲ್ಲಿ ಹಿಂದೂಗಳು ಕೃಷ್ಣ ಜನ್ಮಸ್ಥಾನವನ್ನು ಮರಳಿಪಡೆಯಬೇಕಿದೆ ಎಂದು ಧಿರೇಂದ್ರ ಶಾಸ್ತ್ರಿ ಕರೆ ನೀಡಿದ್ದಾರೆ.

ಇದೇ ವೇಳೆ, ಪಾಕಿಸ್ತಾನವನ್ನು ಹಿಂದೂ ದೇಶವಾಗಿ ಮಾಡಬಹುದು ಎಂಬ ಪೀಠಾಧಿಪತಿಯ ಹೇಳಿಕೆಗೆ ಹಲವು ಅಚ್ಚರಿ ವ್ಯಕ್ತಪಡಿಸುತ್ತಿರುವುದು ಹೌದು. ಬಹುತೇಕ ನೂರಕ್ಕೆ ನೂರು ಇಸ್ಲಾಮಿಕ್ ದೇಶವಾಗಿರುವ ಪಾಕಿಸ್ತಾನವನ್ನು ಹಿಂದೂ ದೇಶವಾಗಿ ಮಾಡುವ ಉಪಾಯವಾದರೂ ಏನು ಎಂಬುದನ್ನು ಸ್ವಾಮಿಗಳು ತಿಳಿಸಬೇಕು ಎಂದು ಕೆಲವರು ಕೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್