ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದ ಮನೀಶ್ ಸಿಸೋಡಿಯಾ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಇಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಬಹುದು ಎಂದು ಆಮ್ ಆದ್ಮಿ ಪಕ್ಷದ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಮನೀಶ್ ಸಿಸೋಡಿಯಾ ಅವರು ಈ ಸಮನ್ಸ್ ಅನ್ನು ಗುಜರಾತ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಜೊತೆ ಜೋಡಿಸಿದ್ದಾರೆ.
ಹಿರಿಯ ಆಪ್ ನಾಯಕರಾಗಿರುವ ಮನೀಶ್ ಸಿಸೋಡಿಯಾ, ಚುನಾವಣೆಗೆ ಒಳಪಟ್ಟಿರುವ ರಾಜ್ಯದಲ್ಲಿ ಪ್ರಚಾರ ಮಾಡುವುದನ್ನು ತಡೆಯಲು ಬಿಜೆಪಿ ನನ್ನನ್ನು “ನಕಲಿ ಪ್ರಕರಣದಲ್ಲಿ ಬಂಧಿಸಬಹುದು” ಎಂದು ನಿನ್ನೆ ಆರೋಪಿಸಿದ್ದರು. ಮುಂದಿನ ದಿನಗಳಲ್ಲಿ ನಾನು ಚುನಾವಣಾ ಪ್ರಚಾರಕ್ಕಾಗಿ ಗುಜರಾತ್‌ಗೆ ಹೋಗಬೇಕಾಗಿತ್ತು. ನಾನು ಗುಜರಾತ್‌ಗೆ ಹೋಗುವುದನ್ನು ತಡೆಯುವುದು ಅವರ ಉದ್ದೇಶವಾಗಿದೆ ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ‘ಗುಜರಾತ್‌ನಲ್ಲಿ ಸೋಲುವುದು ಬಿಜೆಪಿಗೆ ಗೊತ್ತಿರುವುದರಿಂದ ಅವರಿಗೆ ಭಯವಾಗುತ್ತಿದೆ. ಹೀಗಾಗಿ, ಇಂತಹ ತಂತ್ರಗಳನ್ನು ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದರು.
ದೆಹಲಿ ಸರ್ಕಾರವು ಈಗ ಹಿಂತೆಗೆದುಕೊಂಡಿರುವ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರದ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಆಗಸ್ಟ್ 17ರಂದು ದಾಖಲಿಸಿದ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಆರೋಪಿ ಎಂದು ಹೆಸರಿಸಲಾಗಿತ್ತು.
जब जब मैं गुजरात गया, मैंने गुजरात के लोगों को यही कहा कि हम गुजरात में भी आपके बच्चों के लिए दिल्ली जैसे शानदार स्कूल बनायेंगे। लोग बहुत खुश हैं। लेकिन ये लोग नहीं चाहते कि गुजरात में भी अच्छे स्कूल बनें, गुजरात के लोग भी पढ़ें और तरक़्क़ी करें।
— Manish Sisodia (@msisodia) October 17, 2022
ನನ್ನ ಮನೆಯ ಮೇಲೆ 14 ಗಂಟೆಗಳ ಕಾಲ ದಾಳಿ ನಡೆಸಲಾಯಿತು. ಆದರೂ ಅವರಿಗೆ ಏನೂ ಸಾಕ್ಷಿಗಳು ಸಿಗಲಿಲ್ಲ. ನನ್ನ ಬ್ಯಾಂಕ್ ಲಾಕರ್ ಅನ್ನು ಸೀಜ್ ಮಾಡಲಾಗಿದೆ. ಆದರೂ ಏನೂ ಸಿಕ್ಕಿಲ್ಲ. ನನ್ನ ಗ್ರಾಮದಲ್ಲಿ ಹುಡುಕಾಟದ ಸಮಯದಲ್ಲಿಯೂ ಅವರಿಗೆ ಏನೂ ಸಿಗಲಿಲ್ಲ. ಈಗ ಇಂದು ಬೆಳಗ್ಗೆ 11 ಗಂಟೆಗೆ ಸಿಬಿಐ ಕೇಂದ್ರ ಕಚೇರಿಗೆ ನನ್ನನ್ನು ಕರೆಸುತ್ತಿದ್ದಾರೆ. ನಾನು ಹೋಗಿ ಅವರಿಗೆ ಎಲ್ಲ ಸಹಕಾರ ನೀಡುತ್ತೇನೆ ಎಂದು ಸಿಸೋಡಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
Published On - 10:11 am, Mon, 17 October 22