Mann Ki Baat: ಮನ್​ ಕೀ ಬಾತ್​ 100ನೇ ಸಂಚಿಕೆ ವಿಶೇಷ, ಕಲಾವಿದ ಸುದರ್ಶನ್ ಪಟ್ನಾಯಕ್ ಕೈಯಲ್ಲಿ ಮರಳಲ್ಲಿ ಮೂಡಿಬಂದ ಮೋದಿ

ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಕಡಲತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)  ಅವರ ಮಾಸಿಕ ರೇಡಿಯೊ ಪ್ರಸಾರವಾದ ಮನ್ ಕೀ ಬಾತ್​ನ 100 ನೇ ಸಂಚಿಕೆಯ ಅಂಗವಾಗಿ ಹಲವಾರು ರೇಡಿಯೊಗಳೊಂದಿಗೆ ಮರಳು ಶಿಲ್ಪವನ್ನು ರಚಿಸಿದ್ದಾರೆ.

Mann Ki Baat: ಮನ್​ ಕೀ ಬಾತ್​ 100ನೇ ಸಂಚಿಕೆ ವಿಶೇಷ, ಕಲಾವಿದ ಸುದರ್ಶನ್ ಪಟ್ನಾಯಕ್ ಕೈಯಲ್ಲಿ ಮರಳಲ್ಲಿ ಮೂಡಿಬಂದ ಮೋದಿ
ಮರಳು ಕಲೆ
Follow us
ನಯನಾ ರಾಜೀವ್
|

Updated on: Apr 30, 2023 | 10:45 AM

ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಕಡಲತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)  ಅವರ ಮಾಸಿಕ ರೇಡಿಯೊ ಪ್ರಸಾರವಾದ ಮನ್ ಕೀ ಬಾತ್​ನ 100 ನೇ ಸಂಚಿಕೆಯ ಅಂಗವಾಗಿ ಹಲವಾರು ರೇಡಿಯೊಗಳೊಂದಿಗೆ ಮರಳು ಶಿಲ್ಪವನ್ನು ರಚಿಸಿದ್ದಾರೆ. ಪಟ್ನಾಯಕ್ ಸುಮಾರು 7 ಟನ್ ಮರಳನ್ನು ಬಳಸಿ 100 ರೇಡಿಯೋಗಳೊಂದಿಗೆ ಪ್ರಧಾನಿಯನ್ನು ಒಳಗೊಂಡ ಎಂಟು ಅಡಿ ಎತ್ತರದ ಮರಳು ಕಲೆಯನ್ನು ರಚಿಸಿದ್ದಾರೆ.

ಅವರ ಮರಳು ಕಲಾ ಶಾಲೆಯ ವಿದ್ಯಾರ್ಥಿಗಳು ಕಲಾಕೃತಿಯನ್ನು ಪೂರ್ಣಗೊಳಿಸಲು ಸಹಾಯ ಮಾಡಿದರು. ‘ಮನ್ ಕಿ ಬಾತ್’ ನ 100ನೇ ಸಂಚಿಕೆ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.

ಮನ್​ ಕೀ ಬಾತ್​​ನ ರಾಜ್ಯದ ಸಾಧಕರ ಬಗ್ಗೆ ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ್ದು, ರಾಜ್ಯದ ಸಾಧಕರಿಗೆ ರಾಜಭವನಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮನ್​ ಕೀ ಬಾತ್​​ನ 100ನೇ ಸಂಚಿಕೆಯ ಧ್ವನಿಮುದ್ರಣ ಪ್ರಯುಕ್ತ ಕರ್ನಾಟಕದ 7 ಮಂದಿ ಸಾಧಕರನ್ನು ಪ್ರಸಾರ ಭಾರತಿ ಆಹ್ವಾನಿಸಿದ್ದು, ಇವರು ಏಪ್ರಿಲ್ 26ರಂದು ದೆಹಲಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಮತ್ತಷ್ಟು ಓದಿ: Mann Ki Baat​: ಮನದ ಮಾತಿಗೆ ಶತ ಸಂಭ್ರಮ, 100 ಕೋಟಿ ಜನರನ್ನು ತಲುಪಿದ ಮನ್ ಕೀ ಬಾತ್

ಮನ್​ ಕೀ ಬಾತ್​ನ 100ನೇ ಸಂಚಿಕೆಯ ಪ್ರಸಾರವನ್ನು ರಾಜ್ಯದ ಸಾಧಕರು ಪ್ರಧಾನಿ ಅವರ ಜತೆಗೇ ಇದ್ದು ಕೇಳಲಿದ್ದಾರೆ. 7 ಜನ ಅತಿಥಿಗಳನ್ನು ರಾಜಭವನಕ್ಕೆ ಆಹ್ವಾನಿಸಲಾಗಿದೆ. ಬೆಳಿಗ್ಗೆ ಸುಮಾರಿಗೆ ರಾಜಭವನದಲ್ಲಿ ಹಾಜರಿರುವಂತೆ ಅವರಿಗೆ ಆಹ್ವಾನ ಕಳುಹಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೆಂಗಳೂರಿನ ಸುರೇಶ್, ಗದಗದ ಕಾವೆಂಶ್ರೀ ಅವರು ಕಲಾ ಚೇತನ ದ ಮೂಲಕ ಮಾಡುವ ಕಲೆ ಮತ್ತು ಸಂಸ್ಕೃತಿ ಸೇವೆ, ಅಡಿಕೆ ನಾರಿನಿಂದ ತಯಾರಿಸಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪ್‌ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿರುವ ಶಿವಮೊಗ್ಗದ ಸುರೇಶ್ ಮತ್ತು ಅವರ ಪತ್ನಿ ಮೈಥಿಲಿ ಅವರ ಬಗ್ಗೆ ಮೋದಿ ಮನ್​ ಕೀ ಬಾತ್​ನ ವಿವಿಧ ಆವೃತ್ತಿಗಳಲ್ಲಿ ಉಲ್ಲೇಖಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ