Mann Ki Baat Conclave: ಮನ್​ ಕೀ ಬಾತ್​ ಸಮಾವೇಶದಲ್ಲಿ ವಿಶೇಷ ಅತಿಥಿಯಾಗಿ ಬಂದಿದ್ದ ಮಹಿಳೆಗೆ ವೇದಿಕೆಯಲ್ಲೇ ಕಾಣಿಸಿಕೊಂಡಿತ್ತು ಹೆರಿಗೆ ನೋವು

ಪ್ರಧಾನಿ ನರೇಂದ್ರ ಮೋದಿಯವರು ನಡೆಸಿಕೊಡುವ ಮನ್​ ಕೀ ಬಾತ್​ನ 100ನೇ ಸಂಚಿಕೆ ಇಂದು ಪ್ರಸಾರವಾಗಲಿದೆ. ಆ ಹಿನ್ನೆಲೆಯಲ್ಲಿ ಪ್ರಸಾರ ಭಾರತಿಯು ಮನ್​ ಕಿ ಬಾತ್ ಸಮಾವೇಶವನ್ನು ಆಯೋಜನೆ ಮಾಡಿತ್ತು.

Mann Ki Baat Conclave: ಮನ್​ ಕೀ ಬಾತ್​ ಸಮಾವೇಶದಲ್ಲಿ ವಿಶೇಷ ಅತಿಥಿಯಾಗಿ ಬಂದಿದ್ದ ಮಹಿಳೆಗೆ ವೇದಿಕೆಯಲ್ಲೇ ಕಾಣಿಸಿಕೊಂಡಿತ್ತು ಹೆರಿಗೆ ನೋವು
ಸಾಧಕ ಮಹಿಳೆImage Credit source: NDTV
Follow us
ನಯನಾ ರಾಜೀವ್
|

Updated on: Apr 30, 2023 | 9:31 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಯವರು ನಡೆಸಿಕೊಡುವ ಮನ್​ ಕೀ ಬಾತ್​ನ 100ನೇ ಸಂಚಿಕೆ ಇಂದು ಪ್ರಸಾರವಾಗಲಿದೆ. ಆ ಹಿನ್ನೆಲೆಯಲ್ಲಿ ಪ್ರಸಾರ ಭಾರತಿಯು ಮನ್​ ಕೀ ಬಾತ್ ಸಮಾವೇಶವನ್ನು ಆಯೋಜನೆ ಮಾಡಿತ್ತು. ಈ ಸಮಾವೇಶಕ್ಕೆ ಸಾಕಷ್ಟು ಸಾಧಕರನ್ನು ಆಹ್ವಾನಿಸಲಾಗಿತ್ತು, ಅದರಲ್ಲಿ ಪೂನಂ ದೇವಚಿ ಕೂಡ ಒಬ್ಬರು. ವೇದಿಕೆಯಲ್ಲಿ ಕುಳಿತಿರುವಾಗಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಡಾ., ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಪಿಎಂ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ ಸಂಚಿಕೆಯಲ್ಲಿ, ಪಿಎಂ ಮೋದಿ ಯುಪಿಯ ಲಖಿಂಪುರ ಖೇರಿಯಲ್ಲಿರುವ ಸಣ್ಣ ಹಳ್ಳಿಯೊಂದರ ನಿವಾಸಿ ಪೂನಂ ದೇವಿ ಅವರನ್ನು ಪ್ರಸ್ತಾಪಿಸಿದ್ದರು. ಅವರು ಬಾಳೆ ಗಿಡದ ತ್ಯಾಜ್ಯದಿಂದ ಹಲವು ಉತ್ಪನ್ನಗಳನ್ನು ತಯಾರಿಸುವ ಸ್ವಸಹಾಯ ಗುಂಪಿನ ಸದಸ್ಯರಾಗಿದ್ದಾರೆ.

ಮತ್ತಷ್ಟು ಓದಿ: Mann Ki Baat: ನಾಳೆ ಮನ್​ ಕೀ ಬಾತ್​ನ ನೂರನೇ ಆವೃತ್ತಿ; ತಮ್ಮದೇ ಮನದ ಮಾತು ಕೇಳಲು ಮೋದಿ ಎಲ್ಲಿರುತ್ತಾರೆ ಗೊತ್ತೇ?

ಇದೊಂದು ವಿಶಿಷ್ಟ ಉಪಕ್ರಮವಾಗಿದ್ದು, ಇದು ಹಳ್ಳಿಯ ಮಹಿಳೆಯರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುವುದಲ್ಲದೆ ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಕೊಡುಗೆ ನೀಡುತ್ತದೆ. ಅವರ ಸಂಸ್ಥೆಯ ಈ ಉಪಕ್ರಮವನ್ನು ಪ್ರದೇಶದ ಅನೇಕ ಸ್ವ-ಸಹಾಯ ಗುಂಪುಗಳು ವ್ಯಾಪಕವಾಗಿ ಅಳವಡಿಸಿಕೊಂಡಿವೆ.

ಮನ್ ಕೀ ಬಾತ್ ನ 100 ಸಂಚಿಕೆಗಳ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉಪಾಧ್ಯಕ್ಷ ಜಗದೀಪ್ ಧನಕರ್ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.

ಮನ್​ ಕೀ ಬಾತ್​​ನ ರಾಜ್ಯದ ಸಾಧಕರ ಬಗ್ಗೆ ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ್ದು, ರಾಜ್ಯದ ಸಾಧಕರಿಗೆ ರಾಜಭವನಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮನ್​ ಕೀ ಬಾತ್​​ನ 100ನೇ ಸಂಚಿಕೆಯ ಧ್ವನಿಮುದ್ರಣ ಪ್ರಯುಕ್ತ ಕರ್ನಾಟಕದ 7 ಮಂದಿ ಸಾಧಕರನ್ನು ಪ್ರಸಾರ ಭಾರತಿ ಆಹ್ವಾನಿಸಿದ್ದು, ಇವರು ಏಪ್ರಿಲ್ 26ರಂದು ದೆಹಲಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಏಪ್ರಿಲ್ 26 ರಂದು ಮನ್ ಕೀ ಬಾತ್ ಸಂಬಂಧಿತ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ರಾಜ್ಯದ ಸಾಧಕರು ಮರುದಿನ ಕರ್ತವ್ಯ ಪಥ, ರಾಷ್ಟ್ರಪತಿ ಭವನ ಮತ್ತು ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಏಪ್ರಿಲ್ 28 ರಂದು ಕೆಂಪು ಕೋಟೆ, ರಾಜ್‌ ಘಾಟ್​ ಮತ್ತು ಮಹಾತ್ಮಾ ಗಾಂಧಿ ಮ್ಯೂಸಿಯಂ ವೀಕ್ಷಿಸಿ ದೆಹಲಿಗೆ ವಾಪಸಾಗಿದ್ದಾರೆ. ಮನ್​ ಕೀ ಬಾತ್​ನ 100ನೇ ಸಂಚಿಕೆಯ ಪ್ರಸಾರವನ್ನು ರಾಜ್ಯದ ಸಾಧಕರು ಪ್ರಧಾನಿ ಅವರ ಜತೆಗೇ ಇದ್ದು ಕೇಳಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ