PM Modi Mann Ki Baat: ಪರಸ್ಪರ ಸಹಾಯ, ಒಳಿತು ಮಾಡುವ ಮನೋಭಾವ ದೇಶದ ತಾಕತ್ತು: ಪ್ರಧಾನಿ ಮೋದಿ

|

Updated on: Jul 30, 2023 | 11:36 AM

ಪರಸ್ಪರ ಸಹಾಯ ಮಾಡುವ, ಒಳಿತು ಮಾಡುವ ಮನೋಭಾವ ದೇಶದ ತಾಕತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್' (Mann Ki Baat) ನ 103 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು.

PM Modi Mann Ki Baat: ಪರಸ್ಪರ ಸಹಾಯ, ಒಳಿತು ಮಾಡುವ ಮನೋಭಾವ ದೇಶದ ತಾಕತ್ತು: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಪರಸ್ಪರ ಸಹಾಯ ಮಾಡುವ, ಒಳಿತು ಮಾಡುವ ಮನೋಭಾವ ದೇಶದ ತಾಕತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ (Mann Ki Baat) ನ 103 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಯಮುನಾ ನದಿ ಸೇರಿದಂತೆ ದೇಶದ ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ, ಎನ್​ಡಿಆರ್​ಆರ್​ಎಫ್ ಸಿಬ್ಬಂದಿ ಜತೆಗೆ ಸ್ಥಳೀಯರು ತುಂಬಾ ಸಹಾಯ ಮಾಡುತ್ತಿದ್ದಾರೆ, ಇದೇ ಮನೋಭಾವ ದೇಶದ ತಾಕತ್ತು ಎಂದರು.

ಮತ್ತೊಂದೆಡೆ ಮನ್ ಕಿ ಬಾತ್ ನ 100ನೇ ಸಂಚಿಕೆಗೂ ಮುನ್ನ ನಡೆಸಿದ ಐಐಎಂ ಸಮೀಕ್ಷೆಯಲ್ಲಿ ಮನ್ ಕಿ ಬಾತ್ 100 ಕೋಟಿ ಕೇಳುಗರನ್ನು ತಲುಪಿರುವುದು ಕಂಡುಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಬಗ್ಗೆ ಜನಸಂಖ್ಯೆಯ ತೊಂಬತ್ತಾರು ಪ್ರತಿಶತದಷ್ಟು ಜನರಿಗೆ ತಿಳಿದಿದೆ. ಈ ಕಾರ್ಯಕ್ರಮವು 100 ಕೋಟಿ ಜನರನ್ನು ತಲುಪಿದೆ, ಅವರು ಒಮ್ಮೆಯಾದರೂ ಈ ಕಾರ್ಯಕ್ರಮವನ್ನು ಆಲಿಸಿದ್ದಾರೆ.

ಮನ್ ಕಿ ಬಾತ್ ನ 102ನೇ ಸಂಚಿಕೆಯನ್ನು ಜೂನ್ 18 ರಂದು ಪ್ರಸಾರ ಮಾಡಲಾಯಿತು. ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ಉತ್ತರ ಪ್ರದೇಶದ ಗೋಧಾದಲ್ಲಿ ಸುಮಾರು 2,604 ಬೂತ್‌ಗಳಲ್ಲಿ ಕೇಳಲಾಗುತ್ತದೆ. ಗೊಂಡಾ ಮತ್ತು ಹಲವು ಜಿಲ್ಲೆಗಳಲ್ಲಿ ಬಿಜೆಪಿ ನಡೆಸುತ್ತಿರುವ ಜನಸಂಪರ್ಕ ಅಭಿಯಾನದ ಅಂಗವಾಗಿ ಭಾನುವಾರ ಗೊಂಡಾ ಜಿಲ್ಲೆಯ ಎರಡು 2,604 ಬೂತ್‌ಗಳಲ್ಲಿ ಟಿವಿ ಮತ್ತು ರೋಡಿಗಳ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿತ್ತು.

ಉತ್ತರ ಪ್ರದೇಶದಲ್ಲಿ 30 ಕೋಟಿ ಮರಗಳನ್ನು ನೆಟ್ಟ ದಾಖಲೆ – ಪ್ರಧಾನಿ ಮೋದಿ
ಮಳೆಯ ನೀರು ಈಗ ಈ ಬಾವಿಗಳಿಗೆ ಸೇರುತ್ತಿದೆ, ಮತ್ತು ಈ ಬಾವಿಗಳ ನೀರು ಭೂಮಿಯ ಒಳಕ್ಕೆ ಹೋಗುತ್ತಿದೆ, ಇದರಿಂದಾಗಿ ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟವು ಕ್ರಮೇಣ ಸುಧಾರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈಗ ಇಡೀ ಪ್ರದೇಶದಲ್ಲಿ ಸುಮಾರು 800 ಬಾವಿಗಳನ್ನು ರೀಚಾರ್ಜ್‌ಗೆ ಬಳಸಿಕೊಳ್ಳುವ ಗುರಿಯನ್ನು ಗ್ರಾಮಸ್ಥರೆಲ್ಲರೂ ಹೊಂದಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ 30 ಕೋಟಿ ಮರಗಳನ್ನು ನೆಟ್ಟು ದಾಖಲೆ ಮಾಡಿದ್ದೇವೆ.

ಸಂಪ್ರದಾಯಗಳು ಮತ್ತು ಪರಂಪರೆಯನ್ನು ಜೀವಂತವಾಗಿಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ – ಪ್ರಧಾನಿ ಮೋದಿ
ನಮ್ಮ ಈ ಹಬ್ಬಗಳು ಮತ್ತು ಸಂಪ್ರದಾಯಗಳು ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತವೆ. ನಮ್ಮ ಸಂಪ್ರದಾಯಗಳನ್ನು ಮತ್ತು ಪರಂಪರೆಯನ್ನು ಜೀವಂತವಾಗಿಡಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ತಮ್ಮ ಅಮೆರಿಕ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ನಮ್ಮ ಪ್ರಾಚೀನ ಕಲಾಕೃತಿಗಳು ಮತ್ತು ಅಮೂಲ್ಯವಾದ ಪರಂಪರೆಯನ್ನು ಹಿಂದಿರುಗಿಸಿದ ಅಮೆರಿಕ ಸರ್ಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಹಜ್ ಯಾತ್ರೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಹಜ್ ಯಾತ್ರೆಗೆ ಸಂಬಂಧಿಸಿದಂತೆ, ಈ ಬಾರಿಯ ಮನ್ ಕಿ ಬಾತ್‌ನಲ್ಲಿ ನನಗೂ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಗಳು ಬಂದಿವೆ, ಅದು ಮನಸ್ಸಿಗೆ ಸಾಕಷ್ಟು ತೃಪ್ತಿಯನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಇತ್ತೀಚೆಗೆ ಹಜ್ ಯಾತ್ರೆ ಮುಗಿಸಿ ಬಂದ ಮುಸ್ಲಿಂ ಮಹಿಳೆಯರು ಈ ಪತ್ರಗಳನ್ನು ಬರೆದಿದ್ದಾರೆ. ಅವರ ಈ ಪಯಣ ಹಲವು ರೀತಿಯಲ್ಲಿ ವಿಶೇಷವಾಗಿದೆ. ಹಿಂದಿನ ಮುಸ್ಲಿಂ ಮಹಿಳೆಯರಿಗೆ ಮೆಹ್ರಮ್ ಇಲ್ಲದೆ ಹಜ್ ಮಾಡಲು ಅವಕಾಶವಿರಲಿಲ್ಲ. ನಾನು ಸೌದಿ ಅರೇಬಿಯಾ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಹ ವ್ಯಕ್ತಪಡಿಸುತ್ತೇನೆ. ಮೆಹ್ರಮ್ ಇಲ್ಲದೆ ಹಜ್‌ಗೆ ಹೋಗುವ ಮಹಿಳೆಯರಿಗೆ ವಿಶೇಷವಾಗಿ ಮಹಿಳಾ ಸಂಯೋಜಕರನ್ನು ನೇಮಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಹಜ್ ನೀತಿಯಲ್ಲಿ ಮಾಡಲಾದ ಬದಲಾವಣೆಗಳನ್ನು ಹೆಚ್ಚು ಪ್ರಶಂಸಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಈ ಬಗ್ಗೆ ನನಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದಾರೆ. ಈಗ ಹೆಚ್ಚು ಹೆಚ್ಚು ಜನರಿಗೆ ಹಜ್‌ಗೆ ಹೋಗಲು ಅವಕಾಶ ಸಿಗುತ್ತಿದೆ.

ಕಳೆದ ವರ್ಷದಂತೆ ಈ ವರ್ಷವೂ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು. ಈ ಸಂಪ್ರದಾಯ ಮುಂದೆಯೂ ಮುಂದುವರಿಯಲಿದೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:23 am, Sun, 30 July 23