AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan 14th Instalment Release: ಪಿಎಂ ಕಿಸಾನ್: 14ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

PM Narendra Modi Announces Release of 14th Installment: ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಪ್ರಕಟಿಸಿದ್ದಾರೆ. 20,000 ಕೋಟಿ ರೂಗೂ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ಯೋಜನೆಯ ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಿದೆ.

PM Kisan 14th Instalment Release: ಪಿಎಂ ಕಿಸಾನ್: 14ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 27, 2023 | 12:18 PM

Share

ಸಿಕರ್, ರಾಜಸ್ಥಾನ, ಜುಲೈ 27: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 14ನೇ ಕಂತಿನ ಹಣ ಬಿಡುಗಡೆ ಆಗಿದೆ. ರಾಜಸ್ಥಾನದ ಸಿಕರ್​ನಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 14ನೇ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದಾರೆ. 9 ಕೋಟಿಗೂ ಹೆಚ್ಚು ಮಂದಿ ರೈತರ ಖಾತೆಗಳಿಗೆ ಇಂದು ತಲಾ 2,000 ರೂ ಹಣ ವರ್ಗಾವಣೆ ಆಗುತ್ತಿದೆ. 14ನೇ ಕಂತಿನ ಹಣಕ್ಕೆ ಕೇಂದ್ರ ಸರ್ಕಾರಕ್ಕೆ 20,000 ಕೋಟಿಗೂ ಹೆಚ್ಚು ವ್ಯಯವಾಗಿದೆ. ಪ್ರಧಾನಿ ನರೇಂದ್ರ ಮೋದಿ 2023ರ ಫೆಬ್ರುವರಿ 27ರಂದು ಬೆಳಗಾವಿಯ ಸಮಾವೇಶವೊಂದರಲ್ಲಿ 13ನೇ ಕಂತಿನ ಹಣ ಬಿಡುಗಡೆ ಮಾಡಿದ್ದರು.

ಏನಿದು ಪಿಎಂ ಕಿಸಾನ್ ಯೋಜನೆ?

2019ರ ಫೆಬ್ರುವರಿ 24ರಂದು ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸ್ಕೀಮ್ ಆರಂಭಿಸಿತು. ಆರಂಭದಲ್ಲಿ ಇದು 5 ಎಕರೆಯೊಳಗಿನ ಜಮೀನು ಹೊಂದಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ಧನಸಹಾಯವಾಗಿ ಯೋಜನೆ ಆರಂಭಿಸಲಾಯಿತು. ಬಳಿಕ ಎಲ್ಲಾ ರೈತರಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ.

ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ವರ್ಷಕ್ಕೆ 3 ಕಂತುಗಳಲ್ಲಿ ತಲಾ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತದೆ. ಡಿಸೆಂಬರ್​ನಿಂದ ಮಾರ್ಚ್, ಏಪ್ರಿಲ್​ನಿಂದ ಜುಲೈ, ಹಾಗು ಆಗಸ್ಟ್​ನಿಂದ ನವೆಂಬರ್ ಹೀಗೆ ಪ್ರತೀ 4 ತಿಂಗಳ ಅವಧಿಯಲ್ಲಿ ಸರ್ಕಾರ 2,000 ರೂ ನೀಡುತ್ತದೆ. 2018ರ ಡಿಸೆಂಬರ್​ನಿಂದ ಶುರುವಾಗಿ ಈವರೆಗೆ 14 ಕಂತುಗಳನ್ನು ರೈತರಿಗೆ ನೀಡಲಾಗಿದೆ.

ಇದನ್ನೂ ಓದಿ: PM Kisan eKYC: ಪಿಎಂ ಕಿಸಾನ್ ಸ್ಕೀಮ್: ಇಕೆವೈಸಿ ಅಪ್​ಡೇಟ್ ಬಹಳ ಸುಲಭ; ಇಲ್ಲಿವೆ ವಿವಿಧ ವಿಧಾನಗಳು

ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರ ಇನ್ನೆರಡು ಹೆಚ್ಚುವರಿ ಕಂತುಗಳನ್ನು ಸೇರಿಸಿಕೊಡುತ್ತಿತ್ತು. ಈಗಿನ ರಾಜ್ಯ ಸರ್ಕಾರ ಈ ಸೌಲಭ್ಯ ಮುಂದುವರಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮೂಲಗಳ ಪ್ರಕಾರ ರಾಜ್ಯ ಸರ್ಕಾರ ಪಿಎಂ ಕಿಸಾನ್ ಯೋಜನೆಯಲ್ಲಿ ಹೆಚ್ಚುವರಿ ಕಂತುಗಳನ್ನು ನೀಡುವ ಸಾಧ್ಯತೆ ಇಲ್ಲ.

ಪಿಎಂ ಕಿಸಾನ್ ಸ್ಕೀಮ್​ನ ಫಲಾನುಭವಿಗಳ ಪಟ್ಟಿ ವೀಕ್ಷಿಸಿ

  • ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ: pmkisan.gov.in
  • ಅಲ್ಲಿ ಫಾರ್ಮರ್ಸ್ ಕಾರ್ನರ್​ನಲ್ಲಿ ಬೆನಿಫಿಷಿಯರಿ ಲಿಸ್ಟ್ ಕ್ಲಿಕ್ ಮಾಡಿ
  • ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರು ಇತ್ಯಾದಿ ಆಯ್ಕೆ ಮಾಡಿ
  • ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ.

ಯೋಜನೆಯ ಆರಂಭದಿಂದ ಈವರೆಗೂ ಪಿಎಂ ಕಿಸಾನ್ ಯೋಜನೆಯ ಹಣ ಪಡೆದ ರೈತರ ಸಂಖ್ಯೆ

  • 2018-19, ಡಿಸೆಂಬರ್​ನಿಂದ ಮಾರ್ಚ್: 3,16,14,880
  • 2019-20, ಏಪ್ರಿಲ್​ನಿಂದ ಜುಲೈ: 6,63,58,256
  • 2019-20, ಆಗಸ್ಟ್​ನಿಂದ ನವೆಂಬರ್: 8,76,32,318
  • 2019-20, ಡಿಸೆಂಬರ್​ನಿಂದ ಮಾರ್ಚ್: 8,96,95,039
  • 2020-21, ಏಪ್ರಿಲ್​ನಿಂದ ಜುಲೈ: 10,49,40,402
  • 2020-21, ಆಗಸ್ಟ್​ನಿಂದ ನವೆಂಬರ್: 10,23,47,795
  • 2020-21, ಡಿಸೆಂಬರ್​ನಿಂದ ಮಾರ್ಚ್: 10,23,59,684
  • 2021-22, ಏಪ್ರಿಲ್​ನಿಂದ ಜುಲೈ: 11,16,87,398
  • 2021-22, ಆಗಸ್ಟ್​ನಿಂದ ನವೆಂಬರ್: 11,19,47,339
  • 2021-22, ಡಿಸೆಂಬರ್​ನಿಂದ ಮಾರ್ಚ್: 11,16,08,563
  • 2022-23, ಏಪ್ರಿಲ್​ನಿಂದ ಜುಲೈ: 11,27,80,670
  • 2022-23, ಆಗಸ್ಟ್​ನಿಂದ ನವೆಂಬರ್: 9,00,52,829
  • 2022-23, ಡಿಸೆಂಬರ್​ನಿಂದ ಮಾರ್ಚ್: 8,80,28,357
  • 2023-24, ಏಪ್ರಿಲ್​ನಿಂದ ಜುಲೈ:

ಇದನ್ನೂ ಓದಿ: PM Kisan: ಪಿಎಂ ಕಿಸಾನ್ ಯೋಜನೆ; ಒಂದೇ ಕುಟುಂಬದ ಇಬ್ಬರು ವರ್ಷಕ್ಕೆ 6,000 ರೂ ಪಡೆಯಬಹುದಾ?

ಕರ್ನಾಟಕದಲ್ಲಿ 58 ಲಕ್ಷಕ್ಕೂ ಹೆಚ್ಚು ರೈತರು ಯೋಜನೆಗೆ ನೊಂದಾಯಿಸಿದ್ದಾರೆ. ಕಳೆದ ಬಾರಿ 13ನೇ ಕಂತಿನಲ್ಲಿ ರಾಜ್ಯದ ಶೇ. 88ರಷ್ಟು ಫಲಾನುಭವಿಗಳಿಗೆ ಹಣ ಸಿಕ್ಕಿದೆ. ಇಕೆವೈಸಿ ಮಾಡದ ಇತರರಿಗೆ ಹಣ ಸಿಕ್ಕಿಲ್ಲ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಫಲಾನುಭವಿಗಳು 13ನೇ ಕಂತಿನ ಹಣ ಪಡೆದ ಸಂಖ್ಯೆ ಶೇ. 50ಕ್ಕಿಂತಲೂ ಕಡಿಮೆ ಇದೆ. ಶೇ. 88ರಷ್ಟು ಮಂದಿ ಹಣ ಪಡೆದ ಕರ್ನಾಟಕವೇ ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Thu, 27 July 23

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ