Maharashtra: ಮಹಾರಾಷ್ಟ್ರದಲ್ಲಿ ಬಸ್‌ಗೆ ಬೆಂಕಿ, ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರು
ಮಹಾರಾಷ್ಟ್ರದಲ್ಲಿ 50 ಮಂದಿ ಪ್ರಯಾಣಿಕರಿದ್ದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಾರಾಷ್ಟ್ರದಲ್ಲಿ 50 ಮಂದಿ ಪ್ರಯಾಣಿಕರಿದ್ದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್‌ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ಪಿಟಿಐಗೆ ತಿಳಿಸಿದ್ದಾರೆ.
45 ರಿಂದ 50 ಪ್ರಯಾಣಿಕರನ್ನು ಹೊತ್ತ ಥಾಣೆ ಮುನಿಸಿಪಲ್ ಟ್ರಾನ್ಸ್‌ಪೋರ್ಟ್ (ಟಿಎಂಟಿ) ಬಸ್ ನಾರ್ಪೋಲಿಯಿಂದ ಚೆಂದನಿ ಕೋಳಿವಾಡಕ್ಕೆ ತೆರಳುತ್ತಿದ್ದಾಗ ಇಲ್ಲಿನ ಸೆಂಟ್ರಲ್ ಮೈದಾನದ ಬಳಿ ಬೆಳಗ್ಗೆ 8.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಆಕಸ್ಮಿಕ ಬೆಂಕಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಬಸ್ ಚಾಲಕ ಮತ್ತು ಕಂಡಕ್ಟರ್ ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಿದರು ಎಂದು ಅವರು ಹೇಳಿದರು.
#WATCH | Maharashtra | Fire breaks out in the engine of a Thane Municipal Transport (TMT) bus near Central Ground in Thane. 40-50 passengers were travelling on the bus but they got off the vehicle on time. No injuries reported.
(Video: Thane Municipal Corporation) pic.twitter.com/IECuefbs35
— ANI (@ANI) July 30, 2023
ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ಘಟಕದ ತಂಡವು ಎಚ್ಚರಿಕೆ ನೀಡಿದ ನಂತರ ಸ್ಥಳಕ್ಕೆ ಧಾವಿಸಿ 15 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಬಸ್‌ಗೆ ಭಾಗಶಃ ಹಾನಿಯಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Sun, 30 July 23