AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಖಂಡ ಮನೆಗೆ ಬೆಂಕಿ ಹಚ್ಚಿದವರಿಗೆ ಅಮಾಯಕರೆಂಬ ಸರ್ಟಿಫಿಕೇಟ್ ಕೊಟ್ಟ ಪರಮೇಶ್ವರ್​​: ಮಾಜಿ ಸಚಿವ ಕಾರಜೋಳ ವಾಗ್ದಾಳಿ

ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದವರು ಅಮಾಯಕರು ಎಂದು ಗೃಹ ಸಚಿವರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. ಮತ ಕೊಟ್ಟ ಜನರಿಗೂ ಇವರು ಅಪಮಾನ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ಮಾಡಿದ್ದಾರೆ.

ಅಖಂಡ ಮನೆಗೆ ಬೆಂಕಿ ಹಚ್ಚಿದವರಿಗೆ ಅಮಾಯಕರೆಂಬ ಸರ್ಟಿಫಿಕೇಟ್ ಕೊಟ್ಟ ಪರಮೇಶ್ವರ್​​: ಮಾಜಿ ಸಚಿವ ಕಾರಜೋಳ ವಾಗ್ದಾಳಿ
ಮಾಜಿ ಸಚಿವ ಗೋವಿಂದ ಕಾರಜೋಳ
ಕಿರಣ್​ ಹನಿಯಡ್ಕ
| Edited By: |

Updated on: Jul 27, 2023 | 5:19 PM

Share

ಬೆಂಗಳೂರು, ಜುಲೈ 27: ಅಖಂಡ ಮನೆಗೆ ಬೆಂಕಿ ಹಚ್ಚಿದವರು ಅಮಾಯಕರು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್​​ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಗೋವಿಂದ ಕಾರಜೋಳ (Govind Karjol) ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಿಂದ ದಲಿತರಿಗೆ ಅವಮಾನ ಆಗಿದೆ. ಕೇಸ್​​ ವಾಪಸ್ ತೆಗೆದುಕೊಂಡರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತೆ ಎಂದು ಹೇಳಿದರು.

ಮತಕ್ಕಾಗಿ ರಾಜಕಾರಣ ಮಾಡುವುದು ಸರಿಯಲ್ಲ

ತನ್ವೀರ್ ಸೇಠ್​​ಗೆ SDPIನವರು ಚೂರಿ ಹಾಕಿ ಸಾಯಿಸಲು ಹೊರಟಿದ್ದರು. ಆಗ ಅವರನ್ನು​​ ನೋಡಲು ಯಾರೂ ಹೋಗಿರಲಿಲ್ಲ. ಆಗ ತನ್ವೀರ್ ಸೇಠ್​ ಮನೆಗೆ ಮಾಜಿ ಸಚಿವ ಸೋಮಣ್ಣ ಹೋಗಿದ್ದರು. ಮುಸ್ಲಿಮರ ಮತಕ್ಕೆ ಹೆದರಿ ಇಷ್ಟೊಂದು ಕೆಟ್ಟ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಮತಕ್ಕಾಗಿ ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಕೇಸ್​: ಸಿಎಂ ಸಿದ್ಧರಾಮಯ್ಯ ಭೇಟಿ ಮಾಡಿ​ ಸ್ಪಷ್ಟೀಕರಣ ನೀಡಿದ ಶಾಸಕ ತನ್ವೀರ್ ಸೇಠ್​

ಅಭಿವೃದ್ಧಿ ಮಾಡಲ್ಲ ಅಂದರೆ ಇವರು ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು. ಗ್ಯಾರಂಟಿಗಳಿಗೆ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ ಅಂತ ಮಾನ ಮರ್ಯಾದೆ ಇಲ್ಲದೇ ಇರುವವರು ಹೇಳುತ್ತಾರೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್​ ಉಗ್ರಗಾಮಿ ಸಂಘಟನೆ ಮುಖ್ಯಸ್ಥ: ಬಿಜೆಪಿ ಸಂಸದ ಎಸ್​ ಮುನಿಸ್ವಾಮಿ ತೀವ್ರ ವಾಗ್ದಾಳಿ

ಕಾಂಗ್ರೆಸ್ಸಿಗರೇ ಕಮಿಷನ್​ ದಂಧೆ ನಡೆಯುತ್ತಿದ್ದಾರೆ

ಕಾಂಗ್ರೆಸ್ಸಿಗರೇ 58% ಕಮಿಷನ್​ ದಂಧೆ ನಡೆಯುತ್ತಿದೆ ಅಂತಾ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು. ಉಡುಪಿ ಘಟನೆಗೆ ಕೋಮು ಬಣ್ಣ ಬೇಡವೆಂದು ಖುಷ್ಬೂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಖುಷ್ಬೂಗೆ ಉಡುಪಿ ಜಿಲ್ಲಾಡಳಿತ ತಪ್ಪು ಮಾಹಿತಿಯನ್ನು ಕೊಟ್ಟಿದೆ. ಹಾಗಾಗಿ ಖುಷ್ಬೂ ಸುಂದರ್​​ ಹಾಗೆ ಮಾತಾಡಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.