ಇವತ್ತೋ, ನಾಳೇನೋ BJP ಪಕ್ಷದಲ್ಲಿ JDS ವಿಲೀನ ಆಗುತ್ತೆ ಎಂದ ಪ್ರಿಯಾಂಕ್ ಖರ್ಗೆ

ವರ್ಗಾವರಣೆ ದಂಧೆ ಆರೋಪದ ಬಗ್ಗೆ ಮಾತನಾಡಿದ ಅವರು ಪೆನ್​ಡ್ರೈವ್​ ಇದೆ ಅಂತಾ ಹೇಳಿದ್ದರು. ಎಸ್​​​​ಪಿ ರೋಡ್​​ನಿಂದ ಪೆನ್ ಡ್ರೈವ್ ತಂದಿರೋದು ಅನ್ನಿಸುತ್ತದೆ‌ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಜೆಡಿಎಸ್ ನಾಯಕರ ಬಗ್ಗೆ ಕಟಕಿಯಾಡಿದರು,

ಇವತ್ತೋ, ನಾಳೇನೋ BJP ಪಕ್ಷದಲ್ಲಿ JDS ವಿಲೀನ ಆಗುತ್ತೆ ಎಂದ ಪ್ರಿಯಾಂಕ್ ಖರ್ಗೆ
| Updated By: ಸಾಧು ಶ್ರೀನಾಥ್​

Updated on: Jul 27, 2023 | 7:36 PM

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (IT BT Minister Priyank Kharge) ಅವರು ವಿಕಾಸಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ನ ಮಾತಡುತ್ತಾ JDS ವಿರುದ್ಧ ವಾಗ್ದಾಳಿ ನಡೆಸಿದರು. ಜಾತ್ಯತೀತ ಜನತಾ ದಳದವರಿಗೆ ಅಸ್ತಿತ್ವ ಇರುತ್ತೋ ಇಲ್ಲವೋ ಗೊತ್ತಿಲ್ಲ. ಬಿಜೆಪಿಯವರಿಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಪ್ಲೇಯಿಂಗ್​ 11ನಲ್ಲೂ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿಯವರು ಸಬ್​​ಸ್ಟಿಟ್ಯೂಟ್ ಆಯ್ಕೆ ಮಾಡ್ತಿದ್ದಾರೆ. ಬಿಜೆಪಿಯವರಿಗೂ (BJP) ಅಸ್ತಿತ್ವ ಇಲ್ಲ, ಜೆಡಿಎಸ್​ನವರಿಗೂ (JDS) ಅಸ್ತಿತ್ವ ಇಲ್ಲ. ಒರಿಜಿನಲ್ ಭಾರತೀಯ ಜನತಾ ಪಕ್ಷ ಇಲ್ಲ, ಜೆಡಿಎಸ್ ಸಹ ಇಲ್ಲ. ಹಾಗಾಗಿ ಇವತ್ತೋ, ನಾಳೇನೋ BJP ಪಕ್ಷದಲ್ಲಿ JDS ವಿಲೀನ ಆಗುತ್ತೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಹೇಳಿದರು.

ಇನ್ನು ವರ್ಗಾವರಣೆ ದಂಧೆ ಆರೋಪದ ಬಗ್ಗೆ ಮಾತನಾಡಿದ ಅವರು ಅದೇನೋ ಪೆನ್​ಡ್ರೈವ್​ ಇದೆ ಅಂತಾ ಹೇಳಿದ್ದರು. ಎಸ್​​​​ಪಿ ರೋಡ್​​ನಿಂದ ಪೆನ್ ಡ್ರೈವ್ ತಂದಿರೋದು ಅನ್ನಿಸುತ್ತದೆ‌ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜೆಡಿಎಸ್ ನಾಯಕರ ಬಗ್ಗೆ ಕಟಕಿಯಾಡಿದರು,

Follow us