ಚಂದ್ರನ ಮೇಲೆ ಇಳಿದ ಭಾರತದ ಸಾಧನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 113ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸಾಧನೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ.
ತಂತ್ರಜ್ಞಾನದಿಂದ ದೇಶಕ್ಕೆ ಆಗುವ ಲಾಭಗಳ ಬಗ್ಗೆ ಮಾತನಾಡುತ್ತೇವೆ, ಬಾಹ್ಯಾಕಾಶ ಕ್ಷೇತ್ರದ ಅನುಭವಿಗಳೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಪ್ರಧಾನಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯ ಬಲಗೊಳ್ಳುತ್ತಿದೆ. ಈ ಆಗಸ್ಟ್ 23 ರಂದು, ನಾವೆಲ್ಲರೂ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿದ್ದೇವೆ. ಇಂದು ಯುವಕರು ಸ್ಟಾರ್ಟ್‌ಅಪ್‌ಗಳ ಮೂಲಕ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.
ಈ ಮನವಿಯಿಂದಾಗಿ ಕಾಶ್ಮೀರದಿಂದ ಅರುಣಾಚಲದವರೆಗೆ ತಿರಂಗಾ ಯಾತ್ರೆ ನಡೆದು ಏಕ ಭಾರತ ಶ್ರೇಷ್ಠ ಭಾರತ ದರ್ಶನವಾಗಿದೆ ಎಂದರು. ಹರ್ ಘರ್ ತ್ರಿವರ್ಣ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಜನರು ತ್ರಿವರ್ಣ ಧ್ವಜದೊಂದಿಗೆ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು.
ಮತ್ತಷ್ಟು ಓದಿ:National Space Day 2024 : ಭಾರತಕ್ಕೆ ಹೆಮ್ಮೆ ತಂದ ಇಸ್ರೋ, ಈ ಸಾಹಸದ ಹಿಂದಿದೆ ಹಲವು ವಿಜ್ಞಾನಿಗಳ ಶ್ರಮ
ರಾಜಕೀಯ ಹಿನ್ನೆಲೆ ಇಲ್ಲದ ಒಂದು ಲಕ್ಷ ಯುವಕರನ್ನು ರಾಜಕೀಯ ವ್ಯವಸ್ಥೆಯೊಂದಿಗೆ ಸಂಪರ್ಕಿಸಲು ಈ ವರ್ಷ ನಾನು ಕರೆ ನೀಡಿದ್ದೇನೆ.
ಇದು ನಮ್ಮ ಯುವಕರು ಎಷ್ಟು ದೊಡ್ಡ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಲು ಸಿದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅವರು ಸರಿಯಾದ ಅವಕಾಶ ಮತ್ತು ಸರಿಯಾದ ಮಾರ್ಗದರ್ಶನಕ್ಕಾಗಿ ಹುಡುಕುತ್ತಿದ್ದಾರೆ ಎಂದರು.
‘ಮನ್ ಕಿ ಬಾತ್’ ನ ಮೊದಲ ಸಂಚಿಕೆ 3 ಅಕ್ಟೋಬರ್ 2014 ರಂದು ಪ್ರಸಾರವಾಯಿತು. ಈ ಕಾರ್ಯಕ್ರಮವು 14 ನಿಮಿಷಗಳದ್ದಾಗಿತ್ತು. ನಂತರ ಅದನ್ನು 30 ನಿಮಿಷಕ್ಕೆ ಹೆಚ್ಚಿಸಲಾಯಿತು. ಈ ಕಾರ್ಯಕ್ರಮದ 100ನೇ ಸಂಚಿಕೆಯನ್ನು 30 ಏಪ್ರಿಲ್ 2023 ರಂದು ಪ್ರಸಾರ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ