AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತರೆ ರಜೆ ಸಿಗುತ್ತೆ ಎಂದು ಮದರಸಾದಲ್ಲಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಬಾಲಕರು

ಈಶಾನ್ಯ ದೆಹಲಿಯ ದಯಾಲ್‌ಪುರದ ಮುಸ್ತಫಾಬಾದ್-ಬಾಬು ನಗರ ಪ್ರದೇಶದ ಮದರಸಾದಲ್ಲಿ ಐದು ವರ್ಷದ ಅಮಾಯಕ ಬಾಲಕನನ್ನು ಕೆಲವು ವಿದ್ಯಾರ್ಥಿಗಳು ಕೊಲೆ ಮಾಡಿದ್ದಾರೆ. ಯಾರಾದರೂ ಸತ್ತರೆ ಶಾಲೆಗೆ ರಜೆ ಸಿಗುತ್ತದೆ ಎಂದು ಭಾವಿಸಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.

ಸತ್ತರೆ ರಜೆ ಸಿಗುತ್ತೆ ಎಂದು ಮದರಸಾದಲ್ಲಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಬಾಲಕರು
ಮದರಸಾ-ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on: Aug 25, 2024 | 10:55 AM

Share

ರಜೆಗಾಗಿ ಐದು ವರ್ಷದ ವಿದ್ಯಾರ್ಥಿಯನ್ನು ಮೂವರು ಬಾಲಕರು ಹೊಡೆದು ಕೊಲೆ ಮಾಡಿರುವ ಘಟನೆ ದೆಹಲಿಯ ಮದರಸಾದಲ್ಲಿ ನಡೆದಿದೆ. ರೋಹನ್ ತನ್ನ ತಾಯಿ ನಜಿನ್ ಖಾತೂನ್ ಮತ್ತು ಏಳು ವರ್ಷದ ಸಹೋದರಿಯೊಂದಿಗೆ ಸರಸ್ವತಿ ವಿಹಾರ್‌ನ ಶಂಕರ್ ಬಸ್ತಿಯ ಕೊಳೆಗೇರಿಯಲ್ಲಿ ವಾಸವಾಗಿದ್ದ. ತಂದೆ ತಾಲಿಬ್ ಕಳೆದ ಐದು ವರ್ಷಗಳಿಂದ ವಜೀರಾಬಾದ್‌ನಲ್ಲಿ ಕುಟುಂಬದಿಂದ ದೂರ ವಾಸಿಸುತ್ತಿದ್ದಾರೆ. ತಾಯಿ ದುಡಿದು ಸಂಸಾರ ನಡೆಸುತ್ತಿದ್ದಾರೆ.

ನಜಿನ್ ಅವರ ಇನ್ನೊಬ್ಬ ಮಗ ತನ್ನ ಅಜ್ಜಿಯೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಾನೆ. ಸುಮಾರು ಐದು ತಿಂಗಳ ಹಿಂದೆ ನಜಿನ್ ತನ್ನ ಮಗನನ್ನು ತಾಲಿಮ್-ಉಲ್-ಕುರಾನ್ ಮದರಸಾಗೆ ಸೇರಿಸಿದ್ದರು. ಮದರಸಾದಲ್ಲಿ ಬಾಲಕ ಅಸ್ವಸ್ಥನಾಗಿರುವ ಕುರಿತು ತಾಯಿಗೆ ಮಾಹಿತಿ ಸಿಕ್ಕಿತ್ತು, ತಕ್ಷಣ ಮದರಸಾಗೆ ಹೋಗಿ ಅಲ್ಲಿಂದ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು.

ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಮಗನ ಮೈಮೇಲೆ ಗಾಯದ ಗುರುತುಗಳಿರುವುದನ್ನು ಕಂಡು ಅನುಮಾನ ಬಂದಿತ್ತು. ನಜಿನ್ ಮಗನ ಶವದೊಂದಿಗೆ ಮದರಸಾ ತಲುಪಿ ಗಲಾಟೆ ಮಾಡಿದರು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಮೃತದೇಹವನ್ನು ವಶಕ್ಕೆ ಪಡೆದು ಜಿಟಿಬಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮತ್ತಷ್ಟು ಓದಿ: ಉಡುಪಿ: ಯುವತಿಗೆ ಮಾದಕ ಪದಾರ್ಥ ನೀಡಿ ಅತ್ಯಾಚಾರವೆಸಗಿದ ಅಲ್ತಾಫ್​

ಆರಂಭದಲ್ಲಿ ಚಿಕನ್​ಗುನ್ಯಾದಿಂದ ಮೃತಪಟ್ಟಿರಬಹುದು ಎಂದು ಅನುಮಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅವರಿಗೆ ಯಕೃತ್ತಿನ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಅವರ ಹೊಟ್ಟೆಯಲ್ಲಿ ರಕ್ತಸ್ರಾವವಾಗುವುದಲ್ಲದೆ, ಅವರ ಶ್ವಾಸಕೋಶಕ್ಕೂ ಪೆಟ್ಟು ಬಿದ್ದಿತ್ತು.

ಮೂವರು ಆರೋಪಿಗಳು ಮತ್ತು ರೋಹನ್ ನಡುವಿನ ಜಗಳದ ಬಗ್ಗೆ ಮಕ್ಕಳು ಬಾಯ್ಬಿಟ್ಟಿದ್ದಾರೆ.ಇಬ್ಬರು ಹುಡುಗರಿಗೆ 11 ವರ್ಷ, ಒಬ್ಬರಿಗೆ 9 ವರ್ಷ. ತಮ್ಮ ಪುತ್ರರು ಇಂತಹ ಅಪರಾಧ ಎಸಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಅವರ ಕುಟುಂಬ ಸದಸ್ಯರು ಸಿದ್ಧರಿಲ್ಲ.

ಮದರಸಾದಲ್ಲಿ 250ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಇವರಲ್ಲಿ 150ಕ್ಕೂ ಹೆಚ್ಚು ಮಕ್ಕಳು ಯುಪಿಯ ನಿವಾಸಿಗಳು. ಕಳೆದ ವಾರ ಮಗ ತನ್ನ ಅನಾರೋಗ್ಯದ ಬಗ್ಗೆ ಫೋನ್‌ನಲ್ಲಿ ಮಾತನಾಡಿದ್ದ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ. ನಜಿನ್ ತನ್ನ ಮಗನನ್ನು ಕರೆದುಕೊಂಡು ಹೋಗಲು ಮದರಸಾಕ್ಕೆ ಬಂದಿದ್ದಳು, ಆದರೆ ಅವನನ್ನು ಕಳುಹಿಸಲಿಲ್ಲ. ಅವರು ಹಿಂದಿರುಗಿದ್ದರು.

ಈ ಮಧ್ಯೆ ಶುಕ್ರವಾರ ಸಂಜೆ ನಜಿನ್ ಮದರಸಾಕ್ಕೆ ಕರೆ ಮಾಡಿ ಮಗನ ಜತೆ ಮಾತನಾಡಲು ಹೇಳಿದಾಗ ಆಟವಾಡಲು ಹೊರಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಯಾರಾದರೂ ಶಾಲೆಯಲ್ಲಿ ಮೃತಪಟ್ಟರೆ ರಜೆ ಸಿಗುತ್ತೆ ಎಂದು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಉತ್ತರ ಕೇಳಿ ಎಲ್ಲರೂ ಆತಂಕಗೊಂಡಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ