ಜಾರ್ಖಂಡ್‌ನಲ್ಲಿ ಹೈ ಪ್ರೊಫೈಲ್ ನಕ್ಸಲ್ ಸೇರಿದಂತೆ ಮೂವರು ಮಾವೋವಾದಿಗಳ ಎನ್​ಕೌಂಟರ್

ಜಾರ್ಖಂಡ್​​​ನಲ್ಲಿ ಪೊಲೀಸರಿಂದ ಕೊಲ್ಲಲ್ಪಟ್ಟ 3 ನಕ್ಸಲರಲ್ಲಿ ಒಬ್ಬನನ್ನು ಹಿಡಿದುಕೊಟ್ಟವರಿಗೆ 1 ಕೋಟಿ ರೂ. ಬಹುಮಾನವನ್ನು ಕೂಡ ಘೋಷಿಸಲಾಗಿತ್ತು. ಇನ್ನೂ ಶೋಧ ಕಾರ್ಯ ನಡೆಯುತ್ತಿದೆ. ಗೋರ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಟಿತ್ರಿ ಅರಣ್ಯದಲ್ಲಿ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಿಷೇಧಿತ ಸಿಪಿಐ (ಮಾವೋವಾದಿ)ನ ಸಹದೇವ್ ಸೊರೆನ್ ತಂಡದ ಮೇಲೆ ಭದ್ರತಾ ಪಡೆ ಎನ್‌ಕೌಂಟರ್ ಕಾರ್ಯಾಚರಣೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಹೈ ಪ್ರೊಫೈಲ್ ನಕ್ಸಲ್ ಸೇರಿದಂತೆ ಮೂವರು ಮಾವೋವಾದಿಗಳ ಎನ್​ಕೌಂಟರ್
Maoist

Updated on: Sep 15, 2025 | 3:05 PM

ರಾಂಚಿ, ಸೆಪ್ಟೆಂಬರ್ 15: ಜಾರ್ಖಂಡ್‌ನ (Jharkhand) ಹಜಾರಿಬಾಗ್ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 1 ಕೋಟಿ ರೂ. ಬಹುಮಾನ ಘೋಷಿಸಲ್ಪಟ್ಟಿದ್ದ ಒಬ್ಬ ಮಾವೋವಾದಿ ಸೇರಿದಂತೆ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಗೊರ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಟಿತ್ರಿ ಅರಣ್ಯದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ನಿಷೇಧಿತ ಸಿಪಿಐ (ಮಾವೋವಾದಿ)ನ ಸಹದೇವ್ ಸೊರೆನ್ ತಂಡ ಮತ್ತು ಭದ್ರತಾ ಪಡೆ ನಡುವೆ ಎನ್‌ಕೌಂಟರ್ ಕಾರ್ಯಾಚರಣೆ ನಡೆದಿದೆ.

“ಶೋಧ ಕಾರ್ಯಾಚರಣೆಯ ಸಮಯದಲ್ಲಿ 1 ಕೋಟಿ ರೂ. ಬಹುಮಾನ ಹೊತ್ತಿದ್ದ ಸಹದೇವ್ ಸೊರೆನ್ ಮತ್ತು ಇತರ ಇಬ್ಬರು ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಪೊಲೀಸರು ಹೇಳಿದರು. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಸಿಲಿಂಡರ್ ತುಂಬಿದ ಟ್ರಕ್‌ಗೆ ಕನ್ವಾರಿಯಾಗಳನ್ನು ಕರೆದೊಯ್ಯುತ್ತಿದ್ದ ಬಸ್ ಡಿಕ್ಕಿ ಹೊಡೆದು 18 ಜನ ಸಾವು


“ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಜಾರ್ಖಂಡ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರನ್ನು ಹತ್ಯೆ ಮಾಡಿ ಮೂರು ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಹತ್ಯೆಯಾದವರಲ್ಲಿ ಸಹದೇವ್ ಸೊರೆನ್ (ಕೇಂದ್ರ ಸಮಿತಿ ಸದಸ್ಯರಿಗೆ 1 ಕೋಟಿ ರೂ. ಬಹುಮಾನ), ರಘುನಾಥ್ ಹೆಂಬ್ರಾಮ್ (ವಿಶೇಷ ಪ್ರದೇಶ ಸಮಿತಿ ಸದಸ್ಯರಿಗೆ 25 ಲಕ್ಷ ರೂ. ಬಹುಮಾನ), ಮತ್ತು ವೀರ್ಸೆನ್ ಗಂಜು (ವಲಯ ಸಮಿತಿ ಸದಸ್ಯರಿಗೆ 10 ಲಕ್ಷ ರೂ. ಬಹುಮಾನ) ಸೇರಿದ್ದಾರೆ. ಇಂದು ಮುಂಜಾನೆ ಹಜಾರಿಬಾಗ್‌ನ ಗೋರ್ಹಾರ್ ಪ್ರದೇಶದ ಪಂಟಿತ್ರಿ ಅರಣ್ಯದಲ್ಲಿ ಬೆಳಿಗ್ಗೆ 4.20ರ ಸುಮಾರಿಗೆ ಈ ಕಾರ್ಯಾಚರಣೆ ನಡೆಸಲಾಯಿತು” ಎಂದು ಸಿಆರ್‌ಪಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಜಾರ್ಖಂಡ್​: ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಸಿಡಿಲು ಬಡಿದು ಸಿಆರ್​ಪಿಎಫ್​ ಅಧಿಕಾರಿ ಸಾವು, ಮೂವರಿಗೆ ಗಾಯ

2025ರಲ್ಲಿ 209 ಕೋಬ್ರಾದ ವೀರ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿವೆ. ಇಬ್ಬರು ಕೇಂದ್ರ ಸಮಿತಿ ಸದಸ್ಯರು, ಇಬ್ಬರು ಬಿಜೆಎಸ್ಎಸಿ ಸದಸ್ಯರು, 4 ವಲಯ ಸಮಿತಿ ಸದಸ್ಯರು (ಝಡ್‌ಸಿಎಂಗಳು), ಇಬ್ಬರು ಉಪ-ವಲಯ ಸಮಿತಿ ಸದಸ್ಯರು (ಎಸ್‌ಝಡ್‌ಸಿಎಂಗಳು), ಮೂವರು ಪ್ರದೇಶ ಸಮಿತಿ ಸದಸ್ಯರು (ಎಸಿಎಂಗಳು) ಮತ್ತು ಹಲವಾರು ಇತರ ಕುಖ್ಯಾತ ನಕ್ಸಲ್ ಕಾರ್ಯಕರ್ತರು ಸೇರಿದಂತೆ 20 ಕಟ್ಟಾ ನಕ್ಸಲ್‌ಗಳನ್ನು ಹತ್ಯೆ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Mon, 15 September 25