ತಮಗೆ ಇಷ್ಟವಿಲ್ಲದಿದ್ದರೂ ಮದುವೆ(Marriage)ಯಾಗಿದ್ದಾಳೆ ಎನ್ನುವ ಕೋಪದಲ್ಲಿ ಕುಟುಂಬದವರು ಮನೆಯ ಮಗಳನ್ನೇ ಕೊಂದು, ಸುಟ್ಟು ಹಾಕಿರುವ ಘಟನೆ ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ನಡೆದಿದೆ.
20 ವರ್ಷದ ಯುವತಿ ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು. ಇದಾದ ಒಂದು ವರ್ಷದ ಬಳಿಕ ಆಕೆಯನ್ನು ಹತ್ಯೆ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚಾಗಿ ನಡೆಯುತ್ತಿದೆ, ಮಗಳ ಸಂತೋಷವನ್ನು ಧಿಕ್ಕರಿಸಿ, ಕೇವಲ ಗೌರವದ ಬಗ್ಗೆ ಮಾತ್ರ ಆಲೋಚನೆ ಮಾಡಿ ತಪ್ಪು ದಾರಿ ಹಿಡಿಯುವವರ ಸಂಖ್ಯೆ ಹೆಚ್ಚಾಗಿದೆ.
ಎಟಿಎಂನಿಂದ ಹಣ ತೆಗೆಯುತ್ತಿದ್ದಾಗ ಆಕೆಯನ್ನು ಅಪಹರಿಸಿ ನಂತರ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಪತಿ ರವೀಂದ್ರ ಭಿಲ್ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ, ಅದರಲ್ಲಿ ಯುವತಿಯನ್ನು ಕೊಂದು ಆಕೆಯ ಅಂತ್ಯಸಂಸ್ಕಾರ ಮಾಡಿರುವುದು ತಿಳಿದುಬಂದಿದೆ. ಸಿಸಿಟಿವಿ ಫೂಟೇಜ್ನಲ್ಲಿ ನಾಲ್ವರು ವ್ಯಕ್ತಿಗಳು ಈ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ಮತ್ತಷ್ಟು ಓದಿ: Crime News: 10 ಜನರಿಂದ ಸಾಮೂಹಿಕ ಅತ್ಯಾಚಾರ; ಗರ್ಭಿಣಿಯಾದ 10 ವರ್ಷದ ಬಾಲಕಿ
ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಒಂದು ವರ್ಷದ ಹಿಂದೆ ಭಿಲ್ ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಶಿಮ್ಲಾ ಕುಶ್ವಾಹಳನ್ನು ವಿವಾಹವಾದರು, ಅಲ್ಲಿಂದ ಮಧ್ಯಪ್ರದೇಶಕ್ಕೆ ತೆರಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ