AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಬಂದಿದ್ದ 16 ಮಂದಿಯ ದೃಷ್ಟಿಯೇ ಹೋಯ್ತು

ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದ 16 ಮಂದಿ ರೋಗಿಗಳು ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಬಂದಿದ್ದ 16 ಮಂದಿಯ ದೃಷ್ಟಿಯೇ ಹೋಯ್ತು
ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ
ನಯನಾ ರಾಜೀವ್
|

Updated on: Jul 05, 2024 | 2:05 PM

Share

ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆಂದು ಬಂದಿದ್ದ 16 ಮಂದಿ ದೃಷ್ಟಿ ಕಳೆದುಕೊಂಡಿರುವ ಘಟನೆ ಕೋಲ್ಕತ್ತಾದ ಮೆಟಿಯಾಬ್ರುಜ್​ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆಯಿಂದ ರಾಜ್ಯದ ವೈದ್ಯಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ, ಈ ನಡುವೆ ಶುಕ್ರವಾರ ಆರೋಗ್ಯ ಭವನದಲ್ಲಿ ತುರ್ತು ಸಭೆಯನ್ನೂ ಕರೆಯಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯಿಂದ 16 ಮಂದಿಗೆ ದೃಷ್ಟಿದೋಷ ಉಂಟಾಗಿದೆ ಎನ್ನಲಾಗಿದೆ.  ಜೂನ್ 26 ಮತ್ತು ಜೂನ್ 29 ರ ನಡುವೆ ಅವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಫಂಗಸ್‌ನಿಂದ ಸೋಂಕು ಉಂಟಾಗಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ ರೋಗಿಯ ಕಣ್ಣಿನಲ್ಲಿ ಶಿಲೀಂಧ್ರ ಸೋಂಕು ಹೇಗೆ ಕಾಣಿಸಿಕೊಂಡಿತು? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಸೋಂಕಿನ ಹರಡುವಿಕೆಯ ಹಿಂದೆ ಅನೇಕ ಸಾಧ್ಯತೆಗಳಿವೆ ಎಂದು ನೇತ್ರಶಾಸ್ತ್ರಜ್ಞರು ಹೇಳುತ್ತಾರೆ. ಮೆಟ್ಯಾಬುರೊಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ OT ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿದೆ. ಹೀಗಾದಲ್ಲಿ ಒಟಿ ರೂಮಿಗೆ ಸೋಂಕು ತಗಲುವ ಸಾಧ್ಯತೆ ಕಡಿಮೆ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.

ಹಾಗಾದರೆ ಕ್ಯಾಟರಾಕ್ಟ್ ಆಪರೇಷನ್ ನಂತರ, ಮನೆಗೆ ಹಿಂದಿರುಗಿದ ನಂತರ ರೋಗಿಗಳು ಸೋಂಕಿಗೆ ಒಳಗಾಗಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ. ನೇತ್ರಜ್ಞರು ಸೋಂಕಿನ ಮೂಲವು ಶಸ್ತ್ರಚಿಕಿತ್ಸೆಯ ಡ್ರಾಪ್ಸ್​ ಅಥವಾ ವೈದ್ಯಕೀಯ ಸಾಧನವಾಗಿರಬಹುದು ಎಂದು ಊಹಿಸಿದ್ದಾರೆ.

ಮತ್ತಷ್ಟು ಓದಿ: Drusti Dosha: ದೃಷ್ಟಿ ದೋಷ ನಿವಾರಣೆ ಮಾಡಲು ಕಲ್ಲು ಉಪ್ಪನ್ನು ಈ ರೀತಿ ಬಳಸಿ

ಆರೋಗ್ಯ ಕಾರ್ಯದರ್ಶಿ ನಾರಾಯಣ್ ಸ್ವರೂಪ್ ನಿಗಮ್ ಅವರು ಕಣ್ಣಿನ ಪೊರೆ ಕಾರ್ಯಾಚರಣೆ ಪ್ರಕರಣದ ಕುರಿತು ತುರ್ತು ವಾಸ್ತವ ಸಭೆ ನಡೆಸಿದರು. ರಾಜ್ಯದ 104 ನೇತ್ರಾಲಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಅಂಧತ್ವ ನಿರ್ಮೂಲನಾ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆಪರೇಷನ್ ಥಿಯೇಟರ್‌ನಿಂದ ಎಲ್ಲಾ ಉಪಕರಣಗಳು ಮತ್ತು ಔಷಧಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 7 ರಿಂದ 10 ದಿನಗಳಲ್ಲಿ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ

ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥರು ಕೂಡ ಸಭೆಯಲ್ಲಿ ಹಾಜರಿರಲು ತಿಳಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಜವಾಬ್ದಾರರಾಗಿರುವ ನರ್ಸ್​ಗಳು ಕೂಡ ವಿಡಿಯೋ ಕಾನ್ಫರೆನ್ಸ್‌ಗೆ ಸೇರುವ ನಿರೀಕ್ಷೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ