Drusti Dosha: ದೃಷ್ಟಿ ದೋಷ ನಿವಾರಣೆ ಮಾಡಲು ಕಲ್ಲು ಉಪ್ಪನ್ನು ಈ ರೀತಿ ಬಳಸಿ

ನೀಚ ನೋಟ, ಅಸೂಯೆಯ ಭಾವನೆಯಿಂದ ದೃಷ್ಟಿದೋಷ ಉಂಟಾಗುತ್ತದೆ. ಇದರಿಂದ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಅವು ಯಶಸ್ಸು ಕಾಣುವುದಿಲ್ಲ. ಅಂಥ ಸಮಯದಲ್ಲಿ ಬಲ್ಲವರಿಂದ ದೃಷ್ಟಿದೋಷವನ್ನು ನಿವಾರಿಸಿಕೊಳ್ಳುವುದೇ ಸೂಕ್ತ. ಹಾಗಾದರೆ ದೃಷ್ಟಿದೋಷ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಇದಕ್ಕೆ ಕಲ್ಲು ಉಪ್ಪು ಹೇಗೆ ಸಹಕಾರಿ? ಇಲ್ಲಿದೆ ಮಾಹಿತಿ.

Drusti Dosha: ದೃಷ್ಟಿ ದೋಷ ನಿವಾರಣೆ ಮಾಡಲು ಕಲ್ಲು ಉಪ್ಪನ್ನು ಈ ರೀತಿ ಬಳಸಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 18, 2024 | 12:06 PM

ನರದೃಷ್ಟಿಗೆ ಕಲ್ಲು ಕೂಡಾ ಸಿಡಿದು ಚೂರಾಗುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ನೀಚ ನೋಟ, ಅಸೂಯೆಯ ಭಾವನೆಯಿಂದ ದೃಷ್ಟಿದೋಷ ಉಂಟಾಗುತ್ತದೆ. ಇದರಿಂದ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಅವು ಯಶಸ್ಸು ಕಾಣುವುದಿಲ್ಲ. ಅಂಥ ಸಮಯದಲ್ಲಿ ಬಲ್ಲವರಿಂದ ದೃಷ್ಠಿದೋಷವನ್ನು ನಿವಾರಿಸಿಕೊಳ್ಳುವುದೇ ಸೂಕ್ತ ಪರಿಹಾರ. ಇದನ್ನು ಆಡು ಭಾಷೆಯಲ್ಲಿ ದೃಷ್ಟಿ ತೆಗೆಯುವುದು ಎನ್ನುತ್ತೇವೆ. ಕೆಲವು ಊರುಗಳಲ್ಲಿ ಮಹಿಳೆಯರು ಈ ಕೆಲಸವನ್ನು ವಿವಿಧ ರೀತಿಯಲ್ಲಿ ಮಾಡುತ್ತಾರೆ. ಇದು ಕೆಲವರಿಗೆ ಮೂಢನಂಬಿಕೆ ಎನಿಸಬಹುದು ಆದರೆ ಈ ದೋಷವನ್ನು ಕಡೆಗಣಿಸುವಂತಿಲ್ಲ.

ದೃಷ್ಟಿದೋಷದ ಲಕ್ಷಣಗಳೇನು?

ಯಾವುದೇ ವ್ಯಕ್ತಿಗೆ ದೃಷ್ಟಿದೋಷ ತಗಲಿದ್ದರೆ ಆತನ ಆರೋಗ್ಯ ಹಾಳಾಗುತ್ತದೆ. ಕಣ್ಣು ಮತ್ತು ತಲೆ ಭಾರವಾಗುತ್ತದೆ. ಕಣ್ಣಿನಲ್ಲಿ ನೀರು ಸುರಿಯುತ್ತದೆ. ಜೊತೆಗೆ ಊಟ ಅಥವಾ ತಿಂಡಿ ತಿನ್ನಲು ಮನಸ್ಸಿರುವುದಿಲ್ಲ. ನಿದ್ದೆಯೂ ಸರಿಯಾಗಿ ಬರುವುದಿಲ್ಲ. ಅಂಗಡಿ ಅಥವಾ ವ್ಯಾಪಾರ ಸಂಸ್ಥೆಗೆ ದೃಷ್ಟಿ ತಗುಲಿದರೆ ವ್ಯಾಪಾರ ಕಡಿಮೆಯಾಗುತ್ತದೆ. ಮನೆಗೆ ದೃಷ್ಟಿ ತಗುಲಿದಾಗ ಗೋಡೆಗಳಿಗೆ ಬಿರುಕು ಕಾಣಿಸಿಕೊಳ್ಳುತ್ತವೆ. ಗಿಡ ಮರಗಳಿಗೆ ದೃಷ್ಟಿದೋಷ ತಗುಲಿದಾಗ ಅವು ಒಣಗಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ ಫಸಲು ನಿಂತು ಹೋಗಬಹುದು. ಚಿಕ್ಕ ಮಕ್ಕಳಿಗೆ ದೃಷ್ಟಿದೋಷ ಆದರೆ ದಿನಪೂರ್ತಿ ಅಳುವುದು, ವಾಂತಿ ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಜಾತಕದಲ್ಲಿ ಮಂಗಳ ದೋಷವಿದ್ದರೆ ವಿವಾಹದಲ್ಲಿ ಅಡೆತಡೆ ತಪ್ಪಿದ್ದಲ್ಲ! ಇದಕ್ಕೆ ಪರಿಹಾರವೇನು?

ಇದಕ್ಕೆ ಪರಿಹಾರವೇನು?

ಮನೆಯಲ್ಲಿಯೇ ಕಲ್ಲು ಉಪ್ಪನ್ನು ಬಳಸಿಕೊಂಡು ದೃಷ್ಟಿದೋಷದಿಂದ ಮುಕ್ತಿ ಪಡೆದುಕೊಳ್ಳಬಹುದು. ಹೊರಗೆ ಹೋಗಿ ಬಂದ ಸಂದರ್ಭದಲ್ಲಿ ಒಂದು ಗಾಜಿನ ಲೋಟಕ್ಕೆ ನೀರನ್ನು ಹಾಕಿ ಅದಕ್ಕೆ ಎರಡು ಚಮಚ ಕಲ್ಲು ಉಪ್ಪನ್ನು ಸೇರಿಸಿ ಅದಾದ ನಂತರ ನಿಮ್ಮ ಅಜ್ಜಿ ಅಥವಾ ಅಮ್ಮನ ಹತ್ತಿರ ಕೊಟ್ಟು ಅದನ್ನು ಎಡಗೈಯಲ್ಲಿ ಇಟ್ಟುಕೊಂಡು ಏಳು ಬಾರಿ ತಲೆಯಿಂದ ಕಾಲಿನವರೆಗೆ ನಿವಾಳಿಸಿ ಬಳಿಕ ಅದನ್ನು ಮೂರು ದಾರಿ ಕೂಡುವಲ್ಲಿ, ಇಲ್ಲವಾದಲ್ಲಿ ನಿಮ್ಮ ಮನೆಯ ಸಿಂಕ್ ಗಳಲ್ಲಿ ಚೆಲ್ಲಿರಿ. ಇದರಿಂದ ದೃಷ್ಠಿ ದೋಷ, ಶತ್ರು ಬಾಧೆ ಇದ್ದಲ್ಲಿ ನಿವಾರಣೆಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್