ಮಹಿಳೆಯರು ಸೀರೆಯ ಸೆರಗಿನಲ್ಲಿ ಪ್ರಸಾದ, ಮಂತ್ರಾಕ್ಷತೆ ತೆಗೆದುಕೊಳ್ಳುವುದೇಕೆ? ಇದರ ಹಿನ್ನಲೆಯೇನು?

ಮಹಿಳೆಯರು ದೇವರು, ಗುರುಗಳ ಮುಂದೆ ನಿಂತಾಗ, ದೇವರ ಪ್ರಸಾದ ಅಥವಾ ಬಾಗಿನಗಳನ್ನು ತೆಗೆದುಕೊಳ್ಳುವಾಗ ಸೀರೆಯ ಸೆರಗನ್ನು ಭುಜದ ಮೇಲೆ ಹಾಕಿ ಅದರಲ್ಲಿಯೇ ಪ್ರಸಾದ, ಮಂತ್ರಾಕ್ಷತೆ ತೆಗೆದುಕೊಳ್ಳುವ ಕ್ರಮವಿದೆ. ಇದನ್ನು ಯಾಕಾಗಿ ಪಾಲನೆ ಮಾಡಲಾಗುತ್ತದೆ? ಹಿನ್ನೆಲೆಯೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಮಹಿಳೆಯರು ಸೀರೆಯ ಸೆರಗಿನಲ್ಲಿ ಪ್ರಸಾದ, ಮಂತ್ರಾಕ್ಷತೆ ತೆಗೆದುಕೊಳ್ಳುವುದೇಕೆ? ಇದರ ಹಿನ್ನಲೆಯೇನು?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 18, 2024 | 3:33 PM

ಹಿಂದೂ ಧರ್ಮದಲ್ಲಿ ನಾವು ಶಾಸ್ತ್ರಗಳ ಪಾಲನೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತೇವೆ. ಅದರ ಜೊತೆಗೆ ಕೆಲವು ರೂಢಿಯಲ್ಲಿ ಬಂದಂತಹ ಆಚರಣೆಗಳನ್ನು ಕೂಡ ಪಾಲಿಸುತ್ತೇವೆ. ಅದರಲ್ಲಿ ಮಹಿಳೆಯರು ದೇವರು, ಗುರುಗಳ ಮುಂದೆ ನಿಂತಾಗ, ದೇವರ ಪ್ರಸಾದ ಅಥವಾ ಬಾಗಿನಗಳನ್ನು ತೆಗೆದುಕೊಳ್ಳುವಾಗ ಸೀರೆಯ ಸೆರಗನ್ನು ಭುಜದ ಮೇಲೆ ಹಾಕಿ ಅದರಲ್ಲಿಯೇ ಪ್ರಸಾದ, ಮಂತ್ರಾಕ್ಷತೆ ತೆಗೆದುಕೊಳ್ಳುವ ಕ್ರಮವಿದೆ. ಇದನ್ನು ಯಾಕಾಗಿ ಪಾಲನೆ ಮಾಡಲಾಗುತ್ತದೆ? ಹಿನ್ನೆಲೆಯೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹಿಂದೆ ನಮ್ಮ ಪೂರ್ವಜರು ಮಾಡಿಕೊಂಡು ಬಂದಂತಹ ಕೆಲವು ಪದ್ದತಿಗಳನ್ನು ನಾವು ಇನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದೇವೆ. ಅವುಗಳಲ್ಲಿ ಕೆಲವನ್ನು ನಾವು ಪಾಲಿಸುತ್ತೇವೆ ಆದರೆ ಅದರ ಹಿಂದಿರುವ ಅರ್ಥ ತಿಳಿದಿರುವುದಿಲ್ಲ. ಅದರಲ್ಲಿ ಮದುವೆಯಾದ ಮಹಿಳೆಯರು, ದೇವರು ಅಥವಾ ಗುರುಗಳ ಮುಂದೆ ಪ್ರಸಾದ ತೆಗೆದುಕೊಳ್ಳುವಾಗ ಸೆರಗನ್ನು ಒಡ್ಡಿ ಪ್ರಸಾದ ಸ್ವೀಕರಿಸುವ ಪದ್ಧತಿಯೂ ಒಂದು. ಇದನ್ನು ಇಂದಿಗೂ ಪಾಲಿಸಲಾಗುತ್ತದೆ. ಇದರ ಹಿಂದಿರುವ ಕಾರಣ ಕೆಲವರಿಗೆ ಅಷ್ಟು ಸಮಂಜಸ ಎನಿಸದಿರಬಹುದು ಆದರೆ ಇದು ಸತ್ಯ. ಹಾಗಾದರೆ ಸೀರೆಯನ್ನು ಭುಜದ ಮೇಲೆ ಹಾಕಿ ಅದನ್ನು ಒಡ್ಡಿ ಪ್ರಸಾದ ತೆಗೆದುಕೊಳ್ಳುವುದೇಕೆ? ಕೈಯಲ್ಲಿಯೇ ಏಕೆ ತೆಗೆದುಕೊಳ್ಳುವುದಿಲ್ಲ? ಇದಕ್ಕೆಲ್ಲಾ ಸರಿಯಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬುದ್ಧ ಪೂರ್ಣಿಮೆಯ ಶುಭ ಯೋಗದಿಂದ ಈ 4 ರಾಶಿಯವರಿಗೆ ಆರ್ಥಿಕ ಲಾಭ, ಉದ್ಯೋಗದಲ್ಲಿ ಬಡ್ತಿ

ಸೀರೆಯ ಸೆರಗಿನಲ್ಲಿ ಪ್ರಸಾದ, ಮಂತ್ರಾಕ್ಷತೆ ತೆಗೆದುಕೊಳ್ಳುವುದೇಕೆ?

ದೇವರು, ದೈವದ ಪ್ರಸಾದ ಅಥವಾ ಗುರುಗಳ ಮಂತ್ರಾಕ್ಷತೆ ನಮಗೆ ಶ್ರೀರಕ್ಷೆ. ಅದಲ್ಲದೆ ದೇವರು, ಗುರುಗಳು ಅಥವಾ ದೊಡ್ಡವರ ಮುಂದೆ ನಿಂತಾಗ ತಲೆಬಾಗಿ ಸೀರೆಯನ್ನು ಭುಜದ ಮೇಲೆ ಹಾಕಿಕೊಳ್ಳುವುದು ಒಂದು ರೀತಿಯ ಗೌರವ ಕೊಡುವ ರೀತಿ. ಇದು ಒಬ್ಬ ಸ್ತ್ರೀ ತನ್ನ ಮೈ ಮುಚ್ಚಿಕೊಂಡು ತಾನು ಗೌರವದಿಂದ ಮುಂದಿರುವವವರಿಗೆ ಗೌರವ ಕೊಡುವ ಒಂದು ಕ್ರಮವಾಗಿದೆ. ಅಲ್ಲದೆ ಸೆರಗು ಒಡ್ಡಿ ಪ್ರಸಾದ ತೆಗೆದುಕೊಳ್ಳುವುದು ಮುತ್ತೈದೆಗೆ ಶೋಭೆಯನ್ನು ನೀಡುತ್ತದೆ. ಆಕೆ ಮದುವೆಯಾದ ಬಳಿಕ ಒಂದು ಕೈಯಲ್ಲಿ ಪ್ರಸಾದ ತೆಗೆದುಕೊಳ್ಳಬಾರದು ಎನ್ನಲಾಗುತ್ತದೆ. ಜೊತೆಗೆ ಪ್ರಸಾದ ಎಲ್ಲಿಯೂ ಚೆಲ್ಲದಿರಲಿ ಎಂಬುದು ಹಿಂದಿರುವ ನಂಬಿಕೆ. ಈ ರೀತಿ ಮಾಡುವುದರಿಂದ ಪ್ರಸಾದ, ಹೂವು ಅಥವಾ ಮಂತ್ರಾಕ್ಷತೆ ಎಲ್ಲಿಯೂ ಚೆಲ್ಲುವುದಿಲ್ಲ. ಅದಲ್ಲದೆ ಕೈಯಲ್ಲಿ ತೆಗೆದುಕೊಂಡರೆ ಅರಿತೋ ಅರಿಯದೆಯೇ ಕೈಯಿಂದ ಪ್ರಸಾದ ಜಾರಬಹುದು ಅದನ್ನು ಮತ್ತೊಂದಿಷ್ಟು ಜನ ಮೆಟ್ಟಿ ತಿರುಗಾಡಬಹುದು. ಇದರಿಂದ ದೇವರಿಗೆ ನಾವು ಅಪಮಾನ ಮಾಡಿದ ಹಾಗಾಗುತ್ತದೆ. ಜೊತೆಗೆ ದೇವರ ಪ್ರಸಾದಕ್ಕೆ ನಮ್ಮಲ್ಲಿ ಬಹಳ ಪ್ರಾಶಸ್ತ್ಯವಿದೆ. ಹಾಗಾಗಿ ಅದನ್ನು ತುಳಿಯುವುದು, ಅಲ್ಲಲ್ಲಿ ಬಿಸಾಡುವ ಕ್ರಮ ಸರಿಯಲ್ಲ. ಸೀರೆ ಸೆರಗು ಅಥವಾ ಗಂಡಸರು ಶಾಲುಗಳಲ್ಲಿ ತೆಗೆದುಕೊಳ್ಳುವುದರಿಂದ ಎಲ್ಲಿಯೂ ಪ್ರಸಾದವಾಗಿ ನೀಡಿದ ವಸ್ತುಗಳು ನೆಲಕ್ಕೆ ಬೀಳುವುದಿಲ್ಲ. ಇದೆಲ್ಲಾ ಕಾರಣಗಳಿಂದ ಈ ರೀತಿಯ ಒಂದು ಕ್ರಮ ರೂಢಿಯಲ್ಲಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ