Buddha Purnima 2024: ಬುದ್ಧ ಪೂರ್ಣಿಮೆಯ ಶುಭ ಯೋಗದಿಂದ ಈ 4 ರಾಶಿಯವರಿಗೆ ಆರ್ಥಿಕ ಲಾಭ, ಉದ್ಯೋಗದಲ್ಲಿ ಬಡ್ತಿ
ಧಾರ್ಮಿಕ ನಂಬಿಕೆಗಳ ಪ್ರಕಾರ ಬುದ್ಧ ಪೂರ್ಣಿಮೆಯಂದು ಮೂರು ಪ್ರಮುಖ ಘಟನೆಗಳು ನಡೆದಿವೆ ಎಂದು ನಂಬಲಾಗಿದೆ, ಈ ಕಾರಣದಿಂದಾಗಿ ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಜೊತೆಗೆ ಈ ವರ್ಷ, ಬುದ್ಧ ಪೂರ್ಣಿಮೆಯಂದು ಕೆಲವು ಅಪರೂಪದ ಕಾಕತಾಳೀಯಗಳು ನಡೆಯುತ್ತಿವೆ, ಇದರಿಂದಾಗಿ ಕೆಲವು ರಾಶಿಯವರು ಆರ್ಥಿಕವಾಗಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ. ಹಾಗಾದರೆ ಶುಭ ಯೋಗ ಯಾವ ರಾಶಿಯವರಿಗೆ ಒಳ್ಳೆಯದು? ಇಲ್ಲಿದೆ ಮಾಹಿತಿ.
ಈ ವರ್ಷ ಬುದ್ಧ ಪೂರ್ಣಿಮೆಯನ್ನು ಮೇ 23 ರಂದು ಆಚರಿಸಲಾಗುತ್ತಿದೆ. ಈ ದಿನದಂದು ಗೌತಮ ಬುದ್ಧನು ವಿಷ್ಣುವಿನ ಅವತಾರ ಎತ್ತಿ ಭೂಮಿಗೆ ಬಂದನು ಎಂಬ ನಂಬಿಕೆ ಇದೆ. ಹಾಗಾಗಿ ಈ ದಿನವನ್ನು ಗೌತಮ ಬುದ್ಧನ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ರೀತಿ ಈ ದಿನ ಭಗವಾನ್ ಬುದ್ಧನಿಗೆ ಜ್ಞಾನೋದಯವಾಯಿತು ಎಂದು ಕೂಡ ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಬುದ್ಧ ಪೂರ್ಣಿಮೆಯಂದು ಮೂರು ಪ್ರಮುಖ ಘಟನೆಗಳು ನಡೆದಿವೆ ಎಂದು ನಂಬಲಾಗಿದೆ, ಈ ಕಾರಣದಿಂದಾಗಿ ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮೊದಲನೆಯದಾಗಿ ಬುದ್ಧ ದೇವನ ಜನನ, ಎರಡನೆಯದಾಗಿ ಬುದ್ಧ ದೇವನಿಗೆ ಜ್ಞಾನೋದಯವಾದ ದಿನ ಮತ್ತು ಮೂರನೆಯದಾಗಿ ಮೋಕ್ಷ, ಇವೆಲ್ಲವೂ ಒಂದೇ ದಿನದಂದು ಆಚರಣೆ ಮಾಡಲಾಗುತ್ತದೆ. ಇದೆಲ್ಲದರ ಜೊತೆಗೆ ಈ ವರ್ಷ, ಬುದ್ಧ ಪೂರ್ಣಿಮೆಯಂದು ಕೆಲವು ಅಪರೂಪದ ಕಾಕತಾಳೀಯಗಳು ನಡೆಯುತ್ತಿವೆ, ಇದರಿಂದಾಗಿ ಕೆಲವು ರಾಶಿಯವರು ಆರ್ಥಿಕವಾಗಿ ಹೆಚ್ಚಿನ ಪ್ರಗತಿಯನ್ನು ಕಾಣುತ್ತಾರೆ. ಹಾಗಾದರೆ ಈ ಶುಭ ಯೋಗ ಯಾವ ರಾಶಿಯವರಿಗೆ ಒಳ್ಳೆಯದು? ಇಲ್ಲಿದೆ ಮಾಹಿತಿ.
ಬುದ್ಧ ಪೂರ್ಣಿಮೆಯ ಶುಭ ಮುಹೂರ್ತ;
ವೈಶಾಖ ಪೂರ್ಣಿಮೆಯ ತಿಥಿ ಪ್ರಾರಂಭ – ಮೇ 22 ರ ಸಂಜೆ 06. 46ಕ್ಕೆ
ವೈಶಾಖ ಪೂರ್ಣಿಮೆ ಕೊನೆಗೊಳ್ಳುವುದು -ಮೇ 23ರ ಸಂಜೆ 07. 21ಕ್ಕೆ
ಪೂಜಾ ಸಮಯ- ಬೆಳಿಗ್ಗೆ 10.38 ರಿಂದ ಮಧ್ಯಾಹ್ನ 12.15ಕ್ಕೆ ಚಂದ್ರೋದಯ ಸಮಯ- ಸಂಜೆ 07.12ಕ್ಕೆ
ಬುದ್ಧ ಪೂರ್ಣಿಮೆಯ ಶುಭ ಯೋಗ;
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೈಶಾಖ ಪೂರ್ಣಿಮೆ ಅಂದರೆ ಬುದ್ಧ ಪೂರ್ಣಿಮೆಯಂದು ಅನೇಕ ಕಾಕತಾಳೀಯಗಳು ನಡೆಯುತ್ತಿವೆ, ಇದರ ಜೊತೆಯಲ್ಲಿ ಜನರು ಪೂಜೆ ಮತ್ತು ಉಪವಾಸದ ಮಾಡುವ ಮೂಲಕ ದ್ವಿಗುಣ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಬುದ್ಧ ಪೂರ್ಣಿಮೆಯಂದು ಶಿವಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗವಿದೆ. ಈ ದಿನ, ಶುಕ್ರ ಮತ್ತು ಸೂರ್ಯನ ಸಂಯೋಗದಿಂದಾಗಿ, ಶುಕ್ರಾದಿತ್ಯ ಯೋಗವು ಕೂಡಿಬರಲಿದೆ. ವೃಷಭ ರಾಶಿಯಲ್ಲಿ, ಗುರು ಮತ್ತು ಶುಕ್ರನ ಸಂಯೋಗದಿಂದಾಗಿ, ಗಜಲಕ್ಷ್ಮೀಯೋಗವು ರೂಪುಗೊಳ್ಳುತ್ತಿದೆ, ಹಾಗೆಯೇ ಗುರು ಮತ್ತು ಸೂರ್ಯನ ಸಂಯೋಗದಿಂದಾಗಿ, ಗುರು ಆದಿತ್ಯ ಯೋಗವು ರೂಪುಗೊಳ್ಳುತ್ತಿದೆ. ಹಾಗಾಗಿ ಈ ಸಮಯದಲ್ಲಿ ಮಾಡಿದ ಕೆಲಸವು ಸಂಪತ್ತು, ಯಶಸ್ಸನ್ನು ತರುತ್ತದೆ, ಜೊತೆಗೆ ವ್ಯಕ್ತಿಯು ಸದ್ಗುಣಗಳು ಮತ್ತು ಜ್ಞಾನವನ್ನು ಪಡೆಯುತ್ತಾನೆ. ಹಾಗಾದರೆ ಯಾವ ರಾಶಿಯವರಿಗೆ ಯಾವ ಫಲ?
ಮೇಷ ರಾಶಿ
ಮೇಷ ರಾಶಿಯವರಿಗೆ ಯಶಸ್ಸಿನ ಹಾದಿಗಳು ತೆರೆಯುತ್ತವೆ. ಆರ್ಥಿಕ ಲಾಭವಾಗುತ್ತದೆ. ಬಂಡವಾಳವನ್ನು ಹೂಡಿಕೆ ಮಾಡಲು ಬಯಸುವವರಿಗೆ ಉತ್ತಮ ದಿನವಾಗಿದೆ. ಆಸ್ತಿ ಖರೀದಿಸುವುದು ಕೂಡ ಶುಭ ಫಲಗಳನ್ನು ನೀಡುತ್ತದೆ.
ಕರ್ಕಾಟಕ ರಾಶಿ
ಈ ರಾಶಿಯವರು ಉದ್ಯೋಗದಲ್ಲಿ ಪ್ರಗತಿ ಸೇರಿದಂತೆ ಅನೇಕ ಶುಭ ಫಲಗಳನ್ನು ಪಡೆಯುತ್ತಾರೆ. ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
ಸಿಂಹ ರಾಶಿ
ಈ ದಿನ ಸಿಂಹ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ವ್ಯವಹಾರದ ಜೊತೆಗೆ, ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಮತ್ತು ಹೊಸ ಸಾಧನೆಗಳನ್ನು ಮಾಡಲು ಅವಕಾಶ ತೆರೆದುಕೊಳ್ಳುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿಯೊಂದಿಗೆ ಸಂಬಳದಲ್ಲಿ ಹೆಚ್ಚಳ ಸಿಗಲಿದೆ. ವ್ಯವಹಾರದಲ್ಲಿ ಆರ್ಥಿಕ ಲಾಭದ ಸಾಧ್ಯತೆಗಳಿವೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರಿಗೆ ಯಶಸ್ಸು ಸಿಗುತ್ತದೆ.
ಇದನ್ನೂ ಓದಿ: ದೃಷ್ಟಿ ದೋಷ ನಿವಾರಣೆ ಮಾಡಲು ಕಲ್ಲು ಉಪ್ಪನ್ನು ಈ ರೀತಿ ಬಳಸಿ
ಈ ವಿಶೇಷ ಕ್ರಮಗಳನ್ನು ಪಾಲನೆ ಮಾಡಿ
-ಹುಣ್ಣಿಮೆಯ ದಿನ ಸೂರ್ಯೋದಯದ ನಂತರ, ಅರಳಿ ಮರಕ್ಕೆ ನೀರನ್ನು ಅರ್ಪಿಸಿ, 7 ಬಾರಿ ಪ್ರದಕ್ಷಿಣೆ ಹಾಕಿ. ಇದು ಆರ್ಥಿಕ ಬಿಕ್ಕಟ್ಟನ್ನು ದೂರ ಮಾಡುತ್ತದೆ.
-ಬುದ್ಧ ಪೂರ್ಣಿಮೆಯ ದಿನದಂದು, ಹಸಿ ಹಾಲಿಗೆ ಸಕ್ಕರೆ ಮತ್ತು ಅಕ್ಕಿಯನ್ನು ಬೆರೆಸಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:33 pm, Sat, 18 May 24