ಅಮೃತಸರದ ಕಾರ್ಖಾನೆಯಲ್ಲಿ ಅಗ್ನಿ ಅವಘಡ, 4 ಮಂದಿ ಸಾವು

ಅಮೃತಸರದ ಫಾರ್ಮಾಸ್ಯುಟಿಕಲ್ ಫ್ಯಾಕ್ಟರಿಯಲ್ಲಿ  ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ನಗರದ ಮಜಿತಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು ಇದ್ದದ್ದು ಬೆಂಕಿಗೆ ಕಾರಣವಾಗಿರಬಹುದು. ಆದರೆ, ಘಟನೆಗೆ ಕಾರಣವೇನು ಎಂಬುದರ ಬಗ್ಗೆ ಅಧಿಕೃತ ದೃಢೀಕರಣವಿಲ್ಲ. ಘಟನೆಯ ವಿವರಗಳ ಪ್ರಕಾರ, ಕಾರ್ಖಾನೆಯಲ್ಲಿ ಕೆಲವು ಕೆಲಸಗಳು ನಡೆಯುತ್ತಿದ್ದು, ಬೆಂಕಿ ಹೊತ್ತಿಕೊಂಡಾಗ ಕಾರ್ಮಿಕರು ಒಳಗೆ ಇದ್ದರು.

ಅಮೃತಸರದ ಕಾರ್ಖಾನೆಯಲ್ಲಿ ಅಗ್ನಿ ಅವಘಡ, 4 ಮಂದಿ ಸಾವು
ಅಗ್ನಿ ಅವಘಡ
Image Credit source: India Today

Updated on: Oct 06, 2023 | 9:05 AM

ಅಮೃತಸರದ ಫಾರ್ಮಾಸ್ಯುಟಿಕಲ್ ಫ್ಯಾಕ್ಟರಿಯಲ್ಲಿ  ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ನಗರದ ಮಜಿತಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು ಇದ್ದದ್ದು ಬೆಂಕಿಗೆ ಕಾರಣವಾಗಿರಬಹುದು. ಆದರೆ, ಘಟನೆಗೆ ಕಾರಣವೇನು ಎಂಬುದರ ಬಗ್ಗೆ ಅಧಿಕೃತ ದೃಢೀಕರಣವಿಲ್ಲ. ಘಟನೆಯ ವಿವರಗಳ ಪ್ರಕಾರ, ಕಾರ್ಖಾನೆಯಲ್ಲಿ ಕೆಲವು ಕೆಲಸಗಳು ನಡೆಯುತ್ತಿದ್ದು, ಬೆಂಕಿ ಹೊತ್ತಿಕೊಂಡಾಗ ಕಾರ್ಮಿಕರು ಒಳಗೆ ಇದ್ದರು.

ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮತ್ತಷ್ಟು ಓದಿ: ಮುಂಬೈ: ಗೋರೆಗಾಂವ್​ನ ಕಟ್ಟಡದಲ್ಲಿ ಅಗ್ನಿ ಅವಘಡ, 6 ಮಂದಿ ಸಾವು, 40 ಜನರಿಗೆ ಗಾಯ

ಬಿಹಾರದ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ದುರಂತ, 24 ಅಂಗಡಿಗಳು ಸುಟ್ಟು ಭಸ್ಮ
ಬಿಹಾರದ ಸೀತಾಮರ್ಹಿಯಲ್ಲಿನ ಮಾರುಕಟ್ಟೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 24ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ನಗರದ ಬದಿ ಬಜಾರ್‌ನಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದರು.

ವಿವರಗಳ ಪ್ರಕಾರ, ಬೆಂಕಿಯನ್ನು ನಂದಿಸುವ ಪ್ರಯತ್ನಗಳು ಇನ್ನೂ ಮುಂದುವರೆದಿದೆ. ಬೆಂಕಿ ಅವಘಡದಿಂದ ಯಾರಿಗೂ ಅಪಾಯವಾಗಿಲ್ಲ, ಅಗ್ನಿಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ