Foxlink: ಆಂಧ್ರ ಪ್ರದೇಶ; ಆ್ಯಪಲ್ಗೆ ಉತ್ಪನ್ನ ಪೂರೈಸುವ ಫಾಕ್ಸ್ಲಿಂಕ್ ಘಟಕದಲ್ಲಿ ಅಗ್ನಿ ಅನಾಹುತ
ಅಗ್ನಿ ಅವಘಡದಿಂದಾಗಿ ಸುಮಾರು 100 ಕೋಟಿ ರೂ ನಷ್ಟವಾಗಿದೆ ಎಂದು ಕಂಪನಿಯ ಆಡಳಿತ ಮಂಡಳಿ ಅಂದಾಜಿಸಿದೆ. ಈ ವಿಚಾರವಾಗಿ ಆ್ಯಪಲ್ ಕಂಪನಿ ತಕ್ಷಣ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಹೈದರಾಬಾದ್: ಆ್ಯಪಲ್ (Apple) ಕಂಪನಿಗೆ ಉತ್ಪನ್ನಗಳನ್ನು ಪೂರೈಸುವ, ಆಂಧ್ರ ಪ್ರದೇಶದ ತಿರುಪತಿ ಬಳಿ ಇರುವ ಫಾಕ್ಸ್ಲಿಂಕ್ (Foxlink) ಘಟಕದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, 400 ಮಂದಿ ಉದ್ಯೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪರಿಣಾಮವಾಗಿ ಆ್ಯಪಲ್ಗೆ ಪೂರೈಕೆ ಮಾಡಬೇಕಿರುವ ಪರಿಕರಗಳ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಫಾಕ್ಸ್ಲಿಂಕ್ ಘಟಕವು ಆ್ಯಪಲ್ ಐಫೋನ್ಗೆ ಕೇಬಲ್ಗಳನ್ನು ಪೂರೈಸುತ್ತದೆ. ಅಗ್ನಿ ಅವಘಡದಿಂದಾಗಿ ಘಟಕದ ಶೇ 50ರಷ್ಟು ಯಂತ್ರಗಳಿಗೆ ಹಾನಿಯಾಗಿದೆ. ಕಟ್ಟಡದ ಅರ್ಧ ಭಾಗ ಕುಸಿದಿದೆ ಎಂದು ತಿರುಪತಿ ಜಿಲ್ಲೆಯ ಅಗ್ನಿಶಾಮಕ ಸೇವೆಗಳ ಮತ್ತು ವಿಪತ್ತು ನಿರ್ವಹಣಾ ಪಡೆಯ ನೇತೃತ್ವ ವಹಿಸಿರುವ ಜೆ ರಮಣಯ್ಯ ತಿಳಿಸಿದ್ದಾರೆ.
ಅಗ್ನಿ ಅವಘಡದಿಂದಾಗಿ ಸುಮಾರು 100 ಕೋಟಿ ರೂ ನಷ್ಟವಾಗಿದೆ ಎಂದು ಕಂಪನಿಯ ಆಡಳಿತ ಮಂಡಳಿ ಅಂದಾಜಿಸಿದೆ. ಈ ವಿಚಾರವಾಗಿ ಆ್ಯಪಲ್ ಕಂಪನಿ ತಕ್ಷಣ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಅದೃಷ್ಟವಶಾತ್ ಪ್ರಣಾಪಾಯ ಸಂಭವಿಸಿಲ್ಲ.
ಆ್ಯಪಲ್ ಮತ್ತು ಗೂಗಲ್‌ನಂತಹ ಟೆಕ್ ದೈತ್ಯ ಕಂಪನಿಗಳು ಭಾರತದಲ್ಲಿ ತಮ್ಮ ಫೋನ್ ಉತ್ಪಾದನೆಯನ್ನು ವಿಸ್ತರಿಸಿವೆ. ಇದು ತಂತ್ರಜ್ಞಾನ ವಲಯದಲ್ಲಿ ಭಾರತದೊಂದಿಗಿನ ಸಂಬಂಧಗಳನ್ನು ಇನ್ನಷ್ಟು ಗಾಢವಾಗಿಸಲು ಅಮೆರಿಕದ ಕಂಪನಿಗಳಿಗೆ ಸ್ಫೂರ್ತಿ ನೀಡಿದೆ ಎಂದು ಅಮೆರಿಕದ ಟ್ರೆಷರಿ ಸೆಕ್ರೆಟರಿ ಜಾನೆಟ್ ಯೆಲೆನ್ ಕೆಲವು ದಿನಗಳ ಹಿಂದೆ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ