ಮುಂಬೈ: ಥಾಣೆ ನಗರದ ಮುಂಬ್ರಾ ಪ್ರದೇಶದಲ್ಲಿನ (Mumbra Area) ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ (Massive Fire) ಸಂಭವಿಸಿದೆ. ನಾಲ್ಕು ಅಗ್ನಿಶಾಮಕ ವಾಹನಗಳು ಮತ್ತು ಮುಂಬೈ ಪೊಲೀಸ್ ತಂಡ ಸ್ಥಳದಲ್ಲಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಬೆಂಕಿ ನಂದಿಸುವ ತರುವ ಪ್ರಯತ್ನ ನಡೆಯುತ್ತಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿ ಆಗಿಲ್ಲ.ಬೆಂಕಿ ಹತೋಟಿಗೆ ತರುವ ಪ್ರಯತ್ನ ನಡೆಯುತ್ತಿದೆ. ಈ ಅವಘಡದಲ್ಲಿ ಗೋದಾಮಿನೊಳಗೆ ಯಾರೂ ಸಿಕ್ಕಿಹಾಕಿಕೊಂಡಿಲ್ಲ ಎಂದು ವರದಿಯಾಗಿದೆ. ಆದರೆ ಬೆಂಕಿಯಿಂದಾಗಿ ಲಕ್ಷಗಟ್ಟಲೆ ರೂಪಾಯಿ ನಷ್ಟವನ್ನು ಅಂದಾಜಿಸಲಾಗಿದೆ.
#WATCH | Maharashtra: A massive fire broke out at a godown in the Mumbra area of Thane city. 4 fire tenders & Mumbra police team on the spot. pic.twitter.com/njHhV1OEbh
— ANI (@ANI) October 16, 2022
ಗೋದಾಮಿನಿಂದ ಬೆಂಕಿ ಮೇಲೆ ಹಾರುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಮಾಹಿತಿ ಪ್ರಕಾರ, ಠಾಣೆಯ ಶಿಲ್ಪಾತಾ ರಸ್ತೆಯಲ್ಲಿರುವ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದಾರೆ. ಅದೇ ವೇಳೆ ಘಟನೆಯ ಗಂಭೀರತೆಯನ್ನು ಕಂಡ ಪೊಲೀಸರು ಸುತ್ತಮುತ್ತಲಿನ ಪ್ರದೇಶವನ್ನು ತೆರವು ಮಾಡಿದ್ದಾರೆ.ಈ ರೀತಿ ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ
Published On - 9:00 pm, Sun, 16 October 22