Fact Check ಪಾಕ್ ಸಂಚಿನ ಭಾಗವಾಗಿ ಭಾರತದಲ್ಲಿ ರೋಗ ಉಂಟುಮಾಡಲು ಅಪಾಯಕಾರಿ ಪಟಾಕಿಗಳನ್ನು ತಯಾರಿಸಿದೆಯೇ ಚೀನಾ?

ಪಾಕಿಸ್ತಾನಕ್ಕೆ ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ, ಅದು ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಒತ್ತಾಯಿಸಿದೆ. ಭಾರತದಲ್ಲಿ ಅಸ್ತಮಾ ಹರಡಲು ಕಾರ್ಬನ್ ಮಾನಾಕ್ಸೈಡ್ ಅನಿಲಕ್ಕಿಂತ ಹೆಚ್ಚು ವಿಷಕಾರಿ ಪಟಾಕಿಗಳನ್ನು ಚೀನಾ ತಯಾರಿಸಿದೆ...

Fact Check ಪಾಕ್ ಸಂಚಿನ ಭಾಗವಾಗಿ ಭಾರತದಲ್ಲಿ ರೋಗ ಉಂಟುಮಾಡಲು ಅಪಾಯಕಾರಿ ಪಟಾಕಿಗಳನ್ನು ತಯಾರಿಸಿದೆಯೇ ಚೀನಾ?
ವಾಟ್ಸಾಪ್ ಸಂದೇಶ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 17, 2022 | 9:30 AM

ದೀಪಾವಳಿ ಹಬ್ಬ (Deepavali) ಹತ್ತಿರಬರುತ್ತಿದ್ದಂತೆ ಇದಕ್ಕೆ ಸಂಬಂಧಿಸಿದ ಸಂದೇಶಗಳು ವಾಟ್ಸಾಪ್​​ನಲ್ಲಿ(WhatsApp) ಹರಿದಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು ಈ ಸಂದೇಶದಲ್ಲಿ ಗೃಹ ಸಚಿವಾಲಯದ ಅಧಿಕಾರಿಯೊಬ್ಬರ ಹೆಸರನ್ನೂ ಬರೆಯಲಾಗಿದೆ. ಈ ಸಂದೇಶದಲ್ಲಿ ಪಾಕಿಸ್ತಾನವು ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ ಚೀನಾ ಮೂಲಕ ಅದು ಸಂಚು ರೂಪಿಸುತ್ತಿದೆ. ಹಾಗಾಗಿ ಈ ಬಾರಿಯ ದೀಪಾವಳಿಗೆ ಚೀನಾದ ವಸ್ತುಗಳನ್ನು ಬಳಸಬೇಡಿ. ಚೀನಾವು ಭಾರತದಲ್ಲಿ ಅಸ್ತಮಾ ಹರಡಲು ಮತ್ತು ಕಣ್ಣಿನ ಕಾಯಿಲೆಗಳನ್ನು ಉಂಟುಮಾಡಲು ವಿವಿಧ ರೀತಿಯ ಪಟಾಕಿಗಳು ಮತ್ತು ಅಲಂಕಾರಗಳಲ್ಲಿ ಬಳಸುವ ದೀಪಗಳನ್ನು ಕಳುಹಿಸುತ್ತಿದೆ. ಈ ಸಂದೇಶವನ್ನು ಎಲ್ಲ ಭಾರತೀಯರಿಗೂ ತಲುಪಿಸಿ ಎಂದು ಈ ಮೆಸೇಜ್ ವಾಟ್ಸಾಪ್ ನಲ್ಲಿ ಫಾರ್ವರ್ಡ್ ಆಗುತ್ತಿದೆ. ಆದಾಗ್ಯೂ,ಈ ವಾಟ್ಸಾಪ್  ಸಂದೇಶ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ (Fact Check) ಮಾಡಿದೆ.

ವೈರಲ್ ಸಂದೇಶದಲ್ಲೇನಿದೆ?

ಹಿಂದಿಯಲ್ಲಿ ಬರೆದಿರುವ ಈ ಸಂದೇಶದಲ್ಲಿ ಗುಪ್ತಚರ ಮಾಹಿತಿ ಪ್ರಕಾರ, ಪಾಕಿಸ್ತಾನಕ್ಕೆ ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ, ಅದು ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಒತ್ತಾಯಿಸಿದೆ. ಭಾರತದಲ್ಲಿ ಅಸ್ತಮಾ ಹರಡಲು ಕಾರ್ಬನ್ ಮಾನಾಕ್ಸೈಡ್ ಅನಿಲಕ್ಕಿಂತ ಹೆಚ್ಚು ವಿಷಕಾರಿ ಪಟಾಕಿಗಳನ್ನು ಚೀನಾ ತಯಾರಿಸಿದೆ. ಇದಲ್ಲದೆ, ಕಣ್ಣಿನ ಕಾಯಿಲೆಗಳು ಹರಡುವುದಕ್ಕಾಗಿ ಭಾರತದಲ್ಲಿ ವಿಶೇಷ ಬೆಳಕಿನ ಅಲಂಕಾರಿಕ ದೀಪಗಳನ್ನೂ ತಯಾರಿಸಲಾಗಿದೆ. ಇದು ಅಂಧತೆ ಉಂಟುಮಾಡುತ್ತದೆ. ಇದರಲ್ಲಿ ಪಾದರಸದ ಬಳಕೆ ಬಹಳಷ್ಟಿದೆ, ದಯವಿಟ್ಟು ಈ ದೀಪಾವಳಿಯಲ್ಲಿ ಜಾಗರೂಕರಾಗಿರಿ ಮತ್ತು ಈ ಚೈನೀಸ್ ಉತ್ಪನ್ನಗಳನ್ನು ಬಳಸಬೇಡಿ. ದಯವಿಟ್ಟು ಈ ಸಂದೇಶವನ್ನು ಎಲ್ಲಾ ಭಾರತೀಯರಿಗೆ ತಲುಪಿಸಿ. ಸಂದೇಶವನ್ನು ಸ್ವೀಕರಿಸಿದ ನಂತರ, ಅದನ್ನು ನಿಮ್ಮ ಎಲ್ಲಾ ಗುಂಪುಗಳು, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಳ್ಳಿ . ಈ ದೀಪಾವಳಿಯಲ್ಲಿ ಚೀನಾದ ಪಟಾಕಿ ಖರೀದಿಸಬೇಡಿ.

ಫ್ಯಾಕ್ಟ್ ಚೆಕ್

ಗೃಹ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ ಎಂದು ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಈ ಸಂದೇಶವನ್ನು ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದೆ. ಪಿಐಬಿ ಫ್ಯಾಕ್ಟ್ ಚೆಕ್‌ನ ಈ ಬಗ್ಗೆ ಟ್ವೀಟ್ ಮಾಡಿದ್ದು ಈ ವೈರಲ್ ಸಂದೇಶವು ನಕಲಿ ಎಂದಿದೆ. ಭಾರತದಲ್ಲಿ ಚೀನಾ ಅಸ್ತಮಾವನ್ನು ಹರಡಲು ಮತ್ತು ಕಣ್ಣಿನ ಕಾಯಿಲೆಗಳನ್ನು ಉಂಟುಮಾಡಲು ವಿಶೇಷ ರೀತಿಯ ಪಟಾಕಿ ಮತ್ತು ಅಲಂಕಾರ ದೀಪಗಳನ್ನು ಮಾರುಕಟ್ಟೆಗೆ ತಂದಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಗೃಹ ಸಚಿವಾಲಯವು ಅಂತಹ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಪಿಐಬಿ ಹೇಳಿದೆ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ