ದಯಾಮರಣ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್​ರಿಗೆ ಪತ್ರ ಬರೆದ 12 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು

ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗ್ಲೋಕಲ್​ ಯೂನಿವರ್ಸಿಟಿ ಉಪಕುಲಪತಿ ಅಕೀಲ್​ ಅಹ್ಮದ್​, ಮೆಡಿಕಲ್​ ಕೌನ್ಸಿಲ್​ ಆಫ್ ಇಂಡಿಯಾ ನಮ್ಮ ಯೂನಿವರ್ಸಿಟಿಯನ್ನು ಅಮಾನ್ಯ ಮಾಡಿದ್ದರೂ, ನಾವು ನಮ್ಮ ವಿದ್ಯಾರ್ಥಿಗಳ ಪದವಿ ಪೂರ್ಣಗೊಳ್ಳಲಿ ಎಂದುಕೊಂಡೆವು ಎಂದು ಹೇಳಿದ್ದಾರೆ.

ದಯಾಮರಣ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್​ರಿಗೆ ಪತ್ರ ಬರೆದ 12 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು
ಗ್ಲೋಕಲ್​ ಕಾಲೇಜು
Follow us
TV9 Web
| Updated By: Lakshmi Hegde

Updated on:Feb 02, 2022 | 3:51 PM

ಉತ್ತರ ಪ್ರದೇಶದ ಶಹರನ್​ಪುರದ ವೈದ್ಯಕೀಯ ವಿದ್ಯಾರ್ಥಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರಿಗೆ ಪತ್ರ ಬರೆದು, ನಮಗೆಲ್ಲ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಬೇಡಿಕೊಂಡಿದ್ದಾರೆ. ಕಲಿಕೆ ಸ್ಥಗಿತಗೊಂಡಿದ್ದರಿಂದ ತುಂಬ ಸಮಸ್ಯೆ ಉಂಟಾಗಿದೆ. ಹೀಗಾಗಿ ನಮಗೆ ದಯಾಮರಣಕ್ಕೆ ಅನುಮತಿಸಿ ಎಂದು  ಕೇಳಿಕೊಂಡಿದ್ದಾರೆ.

ಶಹರನ್​​ಪುರದ ಗ್ಲೋಕಲ್​ ವೈದ್ಯಕೀಯ ಕಾಲೇಜು ಎಂಬಿಬಿಎಸ್​ ಕೋರ್ಸ್​​​ಗಾಗಿ  66 ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಂಡಿತ್ತು. ಆದರೆ ಮೂರೇ ತಿಂಗಳ ನಂತರ ಈ ಕಾಲೇಜನ್ನು ಭಾರತದ ವೈದ್ಯಕೀಯ ಮಂಡಳಿ (MCI-Medical Council Of India) ಅಮಾನ್ಯಗೊಳಿಸಿತು. ಆದರೆ ಕಾಲೇಜು ಆಡಳಿತ ಮಂಡಳಿ ಇದನ್ನು ನಮಗೆ ತಿಳಿಸಲೇ ಇಲ್ಲ. ನಾವು ಅಲ್ಲಿಂದ 2021ರವರೆಗೆ 5ವರ್ಷಗಳ ಕಾಲ ಅಲ್ಲಿಯೇ ಎಂಬಿಬಿಎಸ್ ಮಾಡಿದೆವು. ನಂತರ ಕಾಲೇಜು ಅಮಾನ್ಯಗೊಂಡ ವಿಚಾರ ನಮಗೆ ಗೊತ್ತಾಗಿದೆ.  ಅಲಹಾಬಾದ್ ಹೈಕೋರ್ಟ್​ ಮೆಟ್ಟಿಲೇರಿದೆವು. ಅದೂ ಕೂಡ ಪ್ರಯೋಜನವಾಗಲಿಲ್ಲ. ನಮಗೆ ಈಗ ಯಾವುದೇ ಭರವಸೆ ಉಳಿದಿಲ್ಲ. ಇಷ್ಟು ವರ್ಷ ಕಾಲ ಶಿಕ್ಷಣ ಪಡೆದೂ ಅದನ್ನು ಸರಿಯಾಗಿ ಮುಂದುವರಿಸಲು ಆಗಲಿಲ್ಲ. ಇದರಿಂದ ಜೀವನವೇ ಸಾಕೆನಿಸಿದೆ ಎಂದು ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ ಎಂದು ಹಿಂದುಸ್ತಾನ್​ ಟೈಮ್ಸ್​ ವರದಿ ಮಾಡಿದೆ.

66 ವಿದ್ಯಾರ್ಥಿಗಳಲ್ಲಿ ಒಟ್ಟು 12 ಮಂದಿ ಸೇರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.  ವಿದ್ಯಾರ್ಥಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗ್ಲೋಕಲ್​ ಯೂನಿವರ್ಸಿಟಿ ಉಪಕುಲಪತಿ ಅಕೀಲ್​ ಅಹ್ಮದ್​, ಮೆಡಿಕಲ್​ ಕೌನ್ಸಿಲ್​ ಆಫ್ ಇಂಡಿಯಾ ನಮ್ಮ ಯೂನಿವರ್ಸಿಟಿಯನ್ನು ಅಮಾನ್ಯ ಮಾಡಿದ್ದರೂ, ನಾವು ನಮ್ಮ ವಿದ್ಯಾರ್ಥಿಗಳ ಪದವಿ ಪೂರ್ಣಗೊಳ್ಳಲಿ ಎಂದುಕೊಂಡೆವು.  ಈ ವಿದ್ಯಾರ್ಥಿಗಳ ಮನವಿ ಮೇರೆಗೆ ಎಂಸಿಐ ನಿರಾಕ್ಷೇಪಣಾ ಪತ್ರವನ್ನು (No Objection Certificate) ಕೂಡ ರದ್ದುಗೊಳಿಸಿತು. ವಿದ್ಯಾರ್ಥಿಗಳು ಹೈಕೋರ್ಟ್​​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದರು. ಬಳಿಕ ಸುಪ್ರೀಂಕೋರ್ಟ್​ಗೆ ಹೋದರು. ಅಲ್ಲೆಲ್ಲ ಕಡೆಗಳಲ್ಲೂ ಅರ್ಜಿ ವಜಾಗೊಂಡಿದೆ. ಇಷ್ಟೆಲ್ಲ ಆದರೂ ನಾವು ನಮ್ಮ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದೇವೆ ಎಂದಿದ್ದಾರೆ.

ಅಂದಹಾಗೇ, ಗ್ಲೋಕಲ್​ ಮೆಡಿಕಲ್​ ಕಾಲೇಜಿನಲ್ಲಿ ಮೂಲಸೌಕರ್ಯಗಳು, ಸವಲತ್ತುಗಳು ಅತ್ಯಂತ ಕಳಪೆಮಟ್ಟದಲ್ಲಿ ಇದ್ದ ಕಾರಣ ಎಂಸಿಐ ಅದನ್ನು ಅಮಾನ್ಯ ಮಾಡಿತ್ತು ಎಂದು ಹೇಳಲಾಗಿದೆ. 2020ರಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದು, ಈ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ನಿರ್ದೇಶನ ನೀಡಿ ಎಂದು ಕೇಳಿತ್ತು.

ಇದನ್ನೂ ಓದಿ: ವೈದ್ಯರ ಕಳ್ಳಾಟ ಪತ್ತೆ ಹಚ್ಚಲು ದಿನದಲ್ಲಿ 3 ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಿದ ವೈದ್ಯಕೀಯ ಶಿಕ್ಷಣ ಇಲಾಖೆ

Published On - 3:50 pm, Wed, 2 February 22