ಮೆಘಾ ಇಂಜಿನೀಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಟ್ ಸಂಸ್ಥೆ (MEIL) ಹಿಮಾಲಯದ ಜಮ್ಮು ಕಾಶ್ಮೀರ– ಲಡಾಕ್ ಪ್ರಾಂತ್ಯದಲ್ಲಿ ಅತ್ಯಂತ ಪ್ರತಿಷ್ಠಿತ ಜೊಜಿಲ್ಲಾ ಸುರಂಗ ಮಾರ್ಗ ನಿರ್ಮಿಸುವ ಬೃಹತ್ ಯೋಜನೆಯನ್ನು ಬಿಡ್ನಲ್ಲಿ ಅತಿ ಕಡಿಮೆ ಮೊತ್ತವನ್ನು ನಮೂದಿಸುವ ಮೂಲಕ ತನ್ನದಾಗಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯು (ಎನ್ ಹೆಚ್ ಐ ಡಿ ಸಿ ಎಲ್)ಶುಕ್ರವಾರದಂದು ಬಿಡ್ಗಳನ್ನು ಓಪನ್ ಮಾಡಿತು.
ಈ ಯೋಜನೆಯನ್ನು,ಸುಮಾರು 33 ಕಿಲೊಮೀಟರ್ ಉದ್ದದ ಎರಡು ವಿಭಾಗಳಲ್ಲಿ ವಿಂಗಡಿಸಿ ಎರಡು ಹಂತಗಳಲ್ಲಿ ನಿರ್ಮಿಸಬೇಕಿದೆ.ಇದರ ಮೊದಲ ಹಂತ 18.59 ಕಿ.ಮೀ ಉದ್ದದ ರಸ್ತೆ ನಿರ್ಮಿಸುವುದಾಗಿದೆ.ಎರಡನೇ ಹಂತದಲ್ಲಿ 14.14 ಕಿ.ಮೀನಷ್ಟು ಜೊಜಿಲ್ಲಾ ಸುರಂಗ ಮಾರ್ಗವನ್ನು ಕುದುರೆ ಲಾಳದ ಆಕಾರದಲ್ಲಿ ಕಟ್ಟಬೇಕು.ಎರಡು ಲೇನ್ಗಳಲ್ಲಿ
ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಸುರಂಗಮಾರ್ಗ ಯೋಜನೆಯ ಟೆಂಡರ್ ಕರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಸ್ವಾಗತಾರ್ಹ ವಿಷಯವೇ.ಮೂಲಗಳ ಪ್ರಕಾರ MEIL,ಉಳಿದೆಲ್ಲ ಕಂಪನಿಗಳಿಗಿಂತ ಕಡಿಮೆ ಅಂದರೆ ರೂ.4509.50 ಕೋಟಿಗಳಿಗೆ ಬಿಡ್ ಸಲ್ಲಿಸಿತು.ಎನ್ ಹೆಚ್ ಐ ಡಿ ಸಿ ಎಲ್ಗೆ ಜುಲೈ 30 ರಂದು ಮೂರು ಕಂಪನಿಗಳು ಬಿಡ್ ಸಲ್ಲಿಸಿದ್ದವು.
ಲೆಹ್ನಿಂದ ಲಡಾಕ್ವರೆಗಿನ ರಸ್ತೆ ವಾಹನಗಳ ಓಡಾಟಕ್ಕೆ ಸಮರ್ಪಕವಾಗಿಲ್ಲ.ಹಾಗೆಯೇ ಶ್ರೀನಗರ–ಲಡಾಕ್ ನಡುವಿನ ರಸ್ತೆ ವಿಶೇಷವಾಗಿ ಚಳಗಾಲದಲ್ಲಿ 6 ತಿಂಗಳು ಕಾಲ ಮುಚ್ಚಲ್ಪಟ್ಟಿರುತ್ತದೆ. ಸೇನೆಗೆ ಸೇರಿದ ವಾಹನಗಳು ಸಹ ಈ ರಸ್ತೆಗಳಲ್ಲಿ ಮುಂದೆ ಸಾಗವು.ಹಾಗಾಗಿ ಪರ್ಯಾಯ ರಸ್ತೆಗಳನ್ನು ಬಳಸುವುದು ಅನಿವಾರ್ಯವಾಗಿತ್ತು ಮತ್ತು ಅದು ತುಂಬಾ ದುಬಾರಿಯಾಗಿ ಪರಿಣಮಿಸಿತ್ತು.ಇಂಥ ಪರಿಸ್ಥಿತಿಯ ಹಿನ್ನೆಲೆಯಲ್ಲೇ ಬಹಳ ಸಮಯದ ಹಿಂದೆ ಸೊನಮಾರ್ಗ್ ನಿಂದ ಲಡಾಕ್ ಹಾಗೂ ಲೇಹ್ಗೆ ಕಾರ್ಗಿಲ್ ಮುಖಾಂತರ
ಸುರಂಗಮಾರ್ಗವನ್ನು ನಿರ್ಮಿಸುವ ಯೋಜನೆ ಪ್ರಸ್ತಾಪಿಸಲಾಯಿತು.
MEIL ಈ ಸುರಂಗಮಾರ್ಗವನ್ನು ಸೊನ್ಮಾರ್ಗ್–ಕಾರ್ಗಿಲ್ ಮಧ್ಯೆ ಜೆಡ್–ಮೊರ್ನಿಂದ ಜೊಜಿಲ್ಲಾವರೆಗೆ ಕಟ್ಟಲಿದ್ದು ಇದೊಂದು ಸಂಕೀರ್ಣ ಸ್ವರೂಪದ ನಿರ್ಮಾಣ ಕಾರ್ಯವೆನಿಸಿಕೊಳ್ಳಲಿದೆ.ನಿರ್ಮಾಣ ಹಂತದಲ್ಲಿ ಯೋಜನೆಯು ಅನೇಕ ಸಮಸ್ಯೆಗಳನ್ನು ಹಲವಾರು ಅಡೆತಡೆಗಳನ್ನು ಮತ್ತು ನೈಸರ್ಗಿಕ ವೈರುಧ್ಯಗಳನ್ನು ಎದುರಿಸಲಿದೆ.ಯೋಜನೆಯ ಭಾಗವಾಗಿ,ಗಡಿ ರಸ್ತೆ ಸಂಸ್ಥೆಯು(ಬಿಆರ್ಒ)ಕಾಶ್ಮೀರ ಮತ್ತು ಲಡಾಕ್ ನಡುವಿನ ರಸ್ತೆಯನ್ನು ದುರಸ್ತಿಗೊಳಿಸಿ ಪ್ರಯಾಣದ ಸೌಕರ್ಯಗಳನ್ನು ಉತ್ತಮಗೊಳಿಸಲಿದೆ.ಈ ಯೋಜನೆಯ ಅಂಗವಾಗಿ ಶ್ರೀನಗರ–ಬಲ್ತಾಲ ನಡುವೆ ಸುರಂಗಮಾರ್ಗವನ್ನು ಸಹ ಕಟ್ಟಲಾಗುತ್ತದೆ.ಇದು ಅಮರನಾಥ ಯಾತ್ರಿಗಳಿಗೆ ತುಂಬಾ ಅನುಕೂಲವಾಗಲಿದೆ.
ಇಡೀ ಯೋಜನೆಯು 18.50 ಕಿ.ಮೀ ಉದ್ದದ ರಸ್ತೆ ಹಾಗೂ 14.15 ಕಿ.ಮೀ ಉದ್ದದ ಸುರಂಗಮಾರ್ಗವನ್ನು ಒಳಗೊಂಡಿರುತ್ತದೆ.
Published On - 8:33 pm, Fri, 21 August 20