ಅನ್​ಲಾಕ್ 5.0: ಶಾಲೆಗಳನ್ನು ತೆರೆಯುವುದು ರಾಜ್ಯ ಸರ್ಕಾರಗಳ ವಿವೇಚನೆ

ಕೇಂದ್ರ ಗೃಹ ಸಚಿವಾಲಯ ಅನ್​ಲಾಕ್​ 5.0ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಅಕ್ಟೋಬರ್ 15ರಿಂದ ಸಿನಿಮಾ ಹಾಲ್​ಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ, ಥಿಯೇಟರ್​ಗಳ ಸೀಟಿಂಗ್ ಸಾಮರ್ಥ್ಯದ ಶೇಕಡ 50 ರಷ್ಟು ಮಾತ್ರ ತುಂಬಿಸುವ ಷರತ್ತು ವಿಧಿಸಲಾಗಿದೆ. ಹಾಗೆಯೇ ಶಾಲಾ–ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಲಾಗಿದೆಯಾದರೂ, ಆಯಾ ರಾಜ್ಯ ಸರ್ಕಾರಗಳು, ಅಲ್ಲಿ ಶಿಕ್ಷಣ ಸಂಸ್ಥೆಗಳು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಅಂದರೆ ಶೈಕ್ಷಣಿಕ ಸಂಸ್ಥೆಗಳನ್ನು ಪುನರಾರಂಭಿಸುವ ನಿರ್ಧಾರ ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶ […]

ಅನ್​ಲಾಕ್ 5.0: ಶಾಲೆಗಳನ್ನು ತೆರೆಯುವುದು ರಾಜ್ಯ ಸರ್ಕಾರಗಳ ವಿವೇಚನೆ
ಅರುಣ್​ ಕುಮಾರ್​ ಬೆಳ್ಳಿ

Updated on: Sep 30, 2020 | 9:08 PM

ಕೇಂದ್ರ ಗೃಹ ಸಚಿವಾಲಯ ಅನ್​ಲಾಕ್​ 5.0ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಅಕ್ಟೋಬರ್ 15ರಿಂದ ಸಿನಿಮಾ ಹಾಲ್​ಗಳನ್ನು ತೆರೆಯಲು ಅನುಮತಿ ನೀಡಿದೆ.

ಆದರೆ, ಥಿಯೇಟರ್​ಗಳ ಸೀಟಿಂಗ್ ಸಾಮರ್ಥ್ಯದ ಶೇಕಡ 50 ರಷ್ಟು ಮಾತ್ರ ತುಂಬಿಸುವ ಷರತ್ತು ವಿಧಿಸಲಾಗಿದೆ. ಹಾಗೆಯೇ ಶಾಲಾಕಾಲೇಜುಗಳನ್ನು ತೆರೆಯಲು ಅವಕಾಶ ನೀಡಲಾಗಿದೆಯಾದರೂ, ಆಯಾ ರಾಜ್ಯ ಸರ್ಕಾರಗಳು, ಅಲ್ಲಿ ಶಿಕ್ಷಣ ಸಂಸ್ಥೆಗಳು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಅಂದರೆ ಶೈಕ್ಷಣಿಕ ಸಂಸ್ಥೆಗಳನ್ನು ಪುನರಾರಂಭಿಸುವ ನಿರ್ಧಾರ ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತಗಳ ವಿವೇಚನೆಗೆ ಬಿಟ್ಟಿರುವ ವಿಚಾರವೆಂದು ತಿಳಿಸಲಾಗಿದೆ.

ಮನರಂಜನಾ ಪಾರ್ಕ್ ಮತ್ತು ಸ್ವಿಮ್ಮಿಂಗ್ ಪೂಲ್​ಗಳನ್ನು ಅಕ್ಟೋಬರ್ 15ರ ನಂತರ ಓಪನ್ ಮಾಡಬಹುದು, ವಾಣಿಜ್ಯ ವಸ್ತು ಪ್ರದರ್ಶನ ಆಯೋಜಿಸುವ ಅವಕಾಶ ಕೂಡ ನೀಡಲಾಗಿದೆ.

ಸಾಮಾಜಿಕ, ಶೈಕ್ಷಣಿಕ, ಕ್ರೀಡಾ, ಧಾರ್ಮಿಕ, ರಾಜಕೀಯ ಸಭೆಗೆ ಸೇರಲು ಈವರೆಗೆ ಇದ್ದ 100 ಜನರ ಮಿತಿಯನ್ನು ಅಕ್ಟೋಬರ್ 15ರ ನಂತರ ಹೆಚ್ಚಿಸುವ ನಿರೀಕ್ಷೆ ಇದೆಯೆಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಧಾರ್ಮಿಕ, ರಾಜಕೀಯ ಸಭೆ-ಸಮಾರಂಭಗಳು ಒಳಾಂಗಣದಲ್ಲಿ ಆಯೋಜಿದಲ್ಲಿ 200 ಜನ ಸೇರಲು ಅವಕಾಶ ನೀಡುವ ಸಾಧ್ಯತೆಯಿದೆ. ಹೊರಾಂಗಣದಲ್ಲಿ ಸಮಾರಂಭ ನಡೆಸಿದರೆ ಮೈದಾನದ ವಿಸ್ತೀರ್ಣಕ್ಕೆ ತಕ್ಕಂತೆ ಜನ ಸೇರಲು ಅವಕಾಶ ನೀಡಬಹುದಾದರೂ ದೈಹಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಲೇಬೇಕಾಗುತ್ತದೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us